ಬೆಂಗಳೂರು: ಬೆಂಗಳೂರಿನ ತ್ಯಾಗರಾಜ ನಗರದ ಶ್ರೀ ಸಾಯಿ ಆದ್ಯಾತ್ಮಿಕ ಕೇಂದ್ರದ ಸಾಯಿ ಮಂದಿರದಲ್ಲಿ ಇಂದು ಹೊಸ ವರ್ಷದ ನಿಮಿತ್ತ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು.
ಸುಮಾರು ಮೂವತ್ತು ಸಾವಿರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು, ಬೆಳಗಿನಿಂದ ರಾತ್ರಿಯವರೆಗೂ ಉಚಿತವಾಗಿ ವಿವಿಧರೀತಿಯ ಪ್ರಸಾದ್ ವಿತರಿಸಲಾಯಿತು,
ಆದ್ಯಾತ್ಮಿಕ ಕೇಂದ್ರದಿಂದ ಪ್ರತಿದಿನ ಎಂಟು ಸಾವಿರ ಶಾಲಾ ಮಕ್ಕಳಿಗೆ ಒಂದು ಸಾವಿರ ರೋಗಿಗಳಿಗೆ ಉಚಿತವಾಗಿ ಬಿಸಿ ಊಟವನ್ನ ನೀಡಲಾಗುತ್ತಿದೆ.