ದೊಡ್ಡಬಳ್ಳಾಪುರ ನಗರದವರೆಗೂ ಮೆಟ್ರೋ ಯೋಜನೆ- ಸಿಎಂಪಿ ನವೀಕರಣದ ನಂತರ ಮುಂದಿನ ಕ್ರಮ- ಸಚಿವ ಕೃಷ್ಣಬೈರೇಗೌಡ

varthajala
0

 ಬೆಂಗಳೂರು  : ಮೆಟ್ರೋ ಯೋಜನೆಯ ಹಂತ -2 ಎ ನ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂವರೆಗೆ ಮತ್ತು ಹಂತ ಬಿ ನ ಕೆ.ಆರ್.ಪುರಂ-ಹೆಬ್ಬಾಳ-ಯಲಹಂಕ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರವು ಅನುಮೋದನೆ ನೀಡಿದೆ. ಸದರಿ ಮೆಟ್ರೋ ಹಂತ-2 ಎ ಮತ್ತು 2ಬಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸದರಿ ಯೋಜನೆಯಡಿಯಲ್ಲಿ ದೊಡ್ಡಬಳ್ಳಾಪುರ ನಗರದವರೆಗೂ ಮೆಟ್ರೋ ಯೋಜನೆ ವಿಸ್ತರಿಸುವ ಪ್ರಸ್ತಾವನೆ ಇರುವುದಿಲ್ಲ ಎಂದು ಕಂದಾಯ ಸಚಿವರು ಹೇಳಿದರು.  

ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಧೀರಜ್ ಮುನಿರಾಜು ಇವರ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ವ್ಯವಸ್ಥೆಯನ್ನು ಯೋಜಿಸಲು ಸಮಗ್ರ ಚಲನಶೀಲತೆ ಯೋಜನೆ ಪೂರ್ವಾಪೇಕ್ಷಿತವಾಗಿದೆ. ಸಿಎಂಪಿ 2020ರಲ್ಲಿ ದೊಡ್ಡಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ಇರುವುದಿಲ್ಲ. ಭವಿಷ್ಯದ ಮೆಟ್ರೋ ರೈಲು ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಯಲಹಂಕ-ರಾಜಾನುಕುಂಟೆ-ದೊಡ್ಡಬಳ್ಳಾಪುರ ಸೇರಿದಂತೆ ಸುಮಾರು 26 ಕಿಮೀಗಳ ಮೆಟ್ರೋ ಕಾರಿಡಾರ್ ಗಳನ್ನು ತಾತ್ಕಾಲಿಕ ಮಾಸ್ಟರ್ ಪ್ಲಾನ್ ಗಳಲ್ಲಿ ಗುರುತಿಸಲಾಗಿದೆ. ದೊಡ್ಡಬಳ್ಳಾಪುರಕ್ಕೆ ಮೆಟ್ರೋ ಕಲ್ಪಿಸುವ ಯೋಜನೆ ಚರ್ಚೆಯಲ್ಲಿದ್ದು ಸಮಗ್ರ ಚಲನಶೀಲತೆ ಯೋಜನೆ ಪರಿಷ್ಕರಣೆಯ ಸರ್ಕಾರದ ಪರಿಶೀಲನೆಯಲ್ಲಿದ್ದು, ಅಒP ನವೀಕರಣದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Post a Comment

0Comments

Post a Comment (0)