ಕಾರ್ಮಿಕರ ನೋಂದಣಿ, ನವೀಕರಣ ಮಾಡಲು ಯೂನಿಯನ್ ಮಾಡ್ಯೂಲ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಸೂಚನೆ

varthajala
0

 ಬೆಂಗಳೂರು : ಕಾರ್ಮಿಕ ಸಂಘಗಳಿಂದ ಪಡೆದ ಉದ್ಯೋಗ ಪ್ರಮಾಣ ಪತ್ರವನ್ನು ಸಲ್ಲಿಸುವ ಆಯ್ಕೆಯನ್ನು Citizen Login ನಲ್ಲಿ  2026 ರ ಜನವರಿ 28 ರಿಂದ ಸ್ಥಗಿತಗೊಳಿಸಲಾಗುವುದು. ಇನ್ನು ಮುಂದೆ ನೋಂದಣಿ, ನವೀಕರಣ ಹಾಗೂ ಸೌಲಭ್ಯಗಳಿಗೆ ಯೂನಿಯನ್ ಮಾಡ್ಯೂಲ್ ತಂತ್ರಾಂಶದ ಮೂಲಕವೇ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವೃತ್ತಿ ಸಂಘಗಳ ಕಾಯ್ದೆ-1926ರಡಿ ನೋಂದಣಿಯಾದ ಕಾರ್ಮಿಕ ಸಂಘಗಳು ಡಾ. ಬಿ.ಆರ್ ಅಂಬೇಡ್ಕರ್ ಕಾರ್ಮಿಕ ಸೇವಾಕೇಂದ್ರಗಳ ತಂತ್ರಾಂಶದಲ್ಲಿ ಕಟ್ಟಡ ಮತ್ತು ಇತರೆ ಕಾರ್ಮಿಕರನ್ನು ಫಲಾನುಭವಿಗಳಾಗಿ ನೋಂದಣಿ / ನವೀಕರಣ ಮಾಡಿಸಲು ಉದ್ಯೋಗ ಪ್ರಮಾಣಪತ್ರವನ್ನು ನೀಡುವ ವಿಧಾನ ಹಾಗೂ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲು ಕಾರ್ಮಿಕ ಸಂಘಗಳಿಗೆ ಯೂನಿಯನ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಲಾಗಿದೆ.ಪ್ರಸ್ತುತ ತಂತ್ರಾಂಶದಲ್ಲಿ ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿಯನ್ನು Citizen Login ಮೂಲಕ ಸಲ್ಲಿಸುವ ಸಂದರ್ಭದಲ್ಲಿ ಉದ್ಯೋಗ ಪ್ರಮಾಣಪತ್ರವನ್ನು ನೀಡಲು ಕಾರ್ಮಿಕ ಸಂಘಗಳಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಗಳಿಗೆ ಯೂನಿಯನ್ ಮಾಡ್ಯೂಲ್ ತಂತ್ರಾಂಶದಲ್ಲಿ ನಿಗಧಿತ ದಾಖಲೆಗಳನ್ನು ಸಲ್ಲಿಸಿ ತಂತ್ರಾಂಶದಲ್ಲಿ ನೋಂದಣಿಯಾದ ಕಾರ್ಮಿಕ ಸಂಘಗಳೇ ಉದ್ಯೋಗ ಪ್ರಮಾಣ ಪತ್ರವನ್ನು ನೀಡಿ ನೋಂದಣಿ, ನವೀಕರಣ ಹಾಗೂ ಕ್ಲೈಂ ಸೌಲಭ್ಯಗಳನ್ನು ನೀಡಬಹುದಾಗಿದೆ.

Post a Comment

0Comments

Post a Comment (0)