ಬೆಂಗಳೂರು : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದಿಂದ ಬೆಂಗಳೂರು ನಗರದಲ್ಲಿ "ಅಂಬಾರಿ" ಡಬಲ್ ಡೆಕ್ಕರ್ ಬಸ್ ಗೆ ಕಾನೂನು ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಇಂದು ನಗರದ ರವೀಂದ್ರ ಕಲಾಕ್ಷೇತ್ರ ಮುಂಭಾಗ Hop On Hop Off ಮಾದರಿಯಲ್ಲಿ ಹಸಿರು ನಿಶಾನೆ ತೋರುವುದರ ಮುಖಾಂತರ ಚಾಲನೆ ನೀಡಿದರು.ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟು ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆಯಾಗಿದ್ದು, ಕಳೆದ 55 ವರ್ಷಗಳಿಂದ ಆತಿಥ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಸೇವೆಯನ್ನು ಒದಗಿಸುತ್ತಾ ಬಂದಿರುತ್ತದೆ ಎಂದು ತಿಳಿಸಿದರು.
ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಹಾಗೂ ಬೆಂಗಳೂರಿನ ಪ್ರವಾಸೋದ್ಯಮ ವನ್ನು ಜನಪ್ರಿಯಗೊಳಿಸಲು ಬೆಂಗಳೂರು ನಗರದಲ್ಲಿ ಲಂಡನ್ ಮಾದರಿಯ "ಅಂಬಾರಿ" ಡಬಲ್ ಡೆಕ್ಕರ್ ಬಸ್ ಅನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಒಟ್ಟು 03 "ಡಬಲ್ ಡೆಕ್ಕರ್ ಬಸ್ ಅನ್ನು ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ."ಡಬಲ್ ಡೆಕ್ಕರ್" 2026ನೇ ಜನವರಿ 21 ರಿಂದ ರವೀಂದ್ರ ಕಲಾಕ್ಷೇತ್ರ - ಕಾಪೆರ್Çೀರೇಷನ್ ಸರ್ಕಲ್-ಹಡ್ನನ್ ಸರ್ಕಲ್-ಕಸ್ತೂರ ಬಾ ರಸ್ತೆ-ವಿಶ್ವೇಶ್ವರಯ್ಯ ಮೂಸಿಯಂ-ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ - ಅಂಚೆ ಕಛೇರಿ - ಉಚ್ಚ ನ್ಯಾಯಾಲಯ / ವಿಧಾನಸೌಧ-ಕೆ ಆರ್ ಸರ್ಕಲ್-ಹಡ್ಸನ್ ಸರ್ಕಲ್- ಕಾಪೆರ್Çೀರೇಷನ್ ಸರ್ಕಲ್- ರವೀಂದ್ರ ಕಲಾ ಕ್ಷೇತ್ರ ಕಾರ್ಯಾಚರಣೆ ಮಾಡಲಿದೆ ಎಂದರು ಒಂದು ದಿನಕ್ಕೆ ರೂ 180 ಗಳನ್ನು ಪ್ರತಿ ವ್ಯಕ್ತಿಗೆ ದರ ನಿಗಮದಿ ಪಡಿಸಲಾಗಿದೆ. ಅಂಬಾರಿ ಬಸ್ ಲೋಯೆರ್ ಡೆಕ್ ಹವನಿಂತ್ರಣ ಬಸ್ ಆಗಿದ್ದು ಐಷರಾಮಿ ಆಸನಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪರಿಚಯಿಸಲು ಮೈಕ್ ಸಿಸ್ಟಮ್ ಅಳವಡಿಸಲಾಗಿದೆ. ಪ್ರತಿ ಬಸ್ ನಲ್ಲಿ ಅಪ್ಪರ್ ಡೆಕ್ ನಲ್ಲಿ 20 ಸಂಖ್ಯೆಯ ಆಸನಗಳಿದ್ದು ಪ್ರವಾಸಿಗರಿಗೆ ಎತ್ತರದಿಂದ ಪ್ರವಾಸಿ ತಾಣ ಮತ್ತು ನಗರ ವೀಕ್ಷಣಗೆ ಅನುಭವ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಾಧ್ಯಮ ಮಿತ್ರರೊಂದಿಗೆ ಮುಂಬರುವ ದಿನಗಳಲ್ಲಿ ಪ್ರತ್ಯೇಕ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು. ಡಬಲ್ ಡೆಕ್ಕರ್ ಬಸ್ ಬುಕ್ಕಿಂಗ್ ಮಾಡಲು ಪ್ರವಾಸೋದ್ಯಮ ಇಲಾಖೆಯ ಜಾಲತಾಣ www.kstdc.co ಹಾಗೂ ದೂರವಾಣಿ ಸಂಖ್ಯೆ 080-4334 4334/35 ಮೊಬೈಲ್ ಸಂಖ್ಯೆ 8970650070 / 8970650075 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷರಾದ ಶ್ರೀನಿವಾಸ್.ಎಮ್ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕಾದ ಉದಯ್ ಬಿ ಗರುಡಾಚಾರ್ ರವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿಗಳಾದ ಮಂಜುನಾಥ್ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯ ಆಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.