ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನೈಸರ್ಗಿಕ ಕೃಷಿಗೆ ಮರುಜೀವ: ಕರ್ನಾಟಕದ 1.35 ಲಕ್ಷ ರೈತರು ಈ ಅಭಿಯಾನದ ಪಾಲುದಾರರು

varthajala
0

 ಬೆಂಗಳೂರು : ‘ವಿಕಸಿತ ಭಾರತ 2047’ರ ಗುರಿಯೊಂದಿಗೆ ಸುಸ್ಥಿರ ಮತ್ತು ಹವಾಮಾನ ವೈಪರೀತ್ಯಕ್ಕೆ ಪೂರಕವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅಡಿಯಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟವಾದ ‘ಸಂಜೀವಿನಿ-KSRLM’ ಮೂಲಕ ನೈಸರ್ಗಿಕ ಕೃಷಿಯನ್ನು ಒಂದು ಜೀವನೋಪಾಯದ ಮಾರ್ಗವನ್ನಾಗಿ ರಾಜ್ಯವು ರೂಪಿಸುತ್ತಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ತಿಳಿಸಿದರು.

ರಾಷ್ಟ್ರ ಮಟ್ಟದ ಮಹಿಳಾ ಸ್ವಸಹಾಯ ಸಂಘಗಳ ನೈಸರ್ಗಿಕ ಕೃಷಿ ಮತ್ತು ಲಕ್‍ಪತಿ ದೀದಿಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಕರ್ನಾಟಕದಲ್ಲಿ ನೈಸರ್ಗಿಕ ಕೃಷಿಯ ಪ್ರಗತಿಯ ವೇಗ ಆಶದಾಯಕವಾಗಿದ್ದು, ರಾಜ್ಯದ ವಿವಿಧ ಕೃಷಿ ಹವಾಮಾನ ವಲಯಗಳಿಗೆ ಅನುಗುಣವಾಗಿ ನೈಸರ್ಗಿಕ ಕೃಷಿಯನ್ನು ವಿಸ್ತರಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 990 ಕ್ಲಸ್ಟರ್‍ಗಳನ್ನು ಆಯ್ಕೆ ಮಾಡಲಾಗಿದ್ದು, 49,500 ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆಯನ್ನು ಅನುμÁ್ಠನಗೊಳಿಸಲಾಗುತ್ತಿದೆ ಎಂದು ಹೇಳಿದರು.ನೈಸರ್ಗಿಕ ಕೃಷಿಯಲ್ಲಿ ರಾಜ್ಯದಲ್ಲಿ ರೈತರ ಪಾಲ್ಗೊಳ್ಳುವಿಕೆ ಆಶಾದಾಯಕವಾಗಿದ್ದು ಸರಿಸುಮಾರು 1,35,733 ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರೈತರಿಗೆ ಪೆÇ್ರೀತ್ಸಾಹಧನವಾಗಿ ಪ್ರತಿ ಎಕರೆಗೆ 2,000 ರೂ.ಗಳಂತೆ ಒಟ್ಟು 22.90 ಕೋಟಿ ರೂ. ಮೊತ್ತವನ್ನು ಮೊದಲ ಕಂತಿನ ರೂಪದಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.ರಾಜ್ಯದಲ್ಲಿ ನೈಸರ್ಗಿಕ ಕೃಷಿ ಮೂಲಸೌಕರ್ಯ ಪರಿಕರಗಳಿಗಾಗಿ 189 ಜೈವಿಕ ಇನ್‍ಪುಟ್ ಸಂಪನ್ಮೂಲ ಕೇಂದ್ರಗಳನ್ನು (Bio-input Resource Centres)  ಸ್ಥಾಪಿಸಲಾಗಿದೆ. ಮಹಿಳೆಯರು ಕೇವಲ ಫಲಾನುಭವಿಗಳಾಗಿ ಉಳಿಯದೆ, ನೈಸರ್ಗಿಕ ಕೃಷಿಯ ಸಂಶೋಧಕರು ಮತ್ತು ತರಬೇತುದಾರರಾಗಿ ಹೊರಹೊಮ್ಮುವ ಮೂಲಕ ಲಕ್ಷ್ಮಿಪುತ್ರಿಯರನ್ನಾಗಿಸುವ (Lakhpati Didis) ಕನಸು ನನಸಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.ನೈಸರ್ಗಿಕ ಕೃಷಿ ಯೋಜನೆಯಡಿ 1,980 ಕೃಷಿ ಸಖಿಯರನ್ನು ಗುರುತಿಸಲಾಗಿದ್ದು, ಇವರು ಗ್ರಾಮ ಮಟ್ಟದಲ್ಲಿ ತಾಂತ್ರಿಕ ನೆರವು ಮತ್ತು ತರಬೇತಿ ನೀಡುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳ ಮೇಲಿನ ಖರ್ಚು ಕಡಿಮೆ ಮಾಡುವ ಮೂಲಕ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆಯ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಿ, ‘ಲಖ್ಪತಿ ದೀದಿ’ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ.
ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲು ನಂಬಿಕಸ್ಥ ಪ್ರಮಾಣೀಕರಣ ವ್ಯವಸ್ಥೆಯನ್ನು ರಾಜ್ಯವು ಜಾರಿಗೆ ತರುತ್ತಿದೆ. ಸಣ್ಣ ರೈತರಿಗೆ ಹೊರೆಯಾಗದಂತೆ ಗುಂಪು ಪ್ರಮಾಣೀಕರಣ ಮತ್ತು ಭಾಗಿತ್ವದ ಖಾತರಿ ವ್ಯವಸ್ಥೆಯನ್ನು ಪಿ.ಜಿ.ಎಸ್ ಮಾದರಿಯನ್ನು (Participatory Guarantee System) ಉತ್ತೇಜಿಸಲಾಗುತ್ತಿದೆ.

ರಾಜ್ಯದ ನೈಸರ್ಗಿಕ ಕೃಷಿಕರ ಬೆಳೆಗಳ ಕುರಿತು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಉತ್ಪನ್ನಗಳ ಮೂಲವನ್ನು ಪತ್ತೆಹಚ್ಚುವ (Traceability) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.ನೈಸರ್ಗಿಕ ಕೃಷಿಯು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ, ವಿಷಮುಕ್ತ ಆಹಾರದ ಮೂಲಕ ಸಾರ್ವಜನಿಕರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಣ್ಣಿನ ಸಾವಯವ ಇಂಗಾಲದ ಹೆಚ್ಚಳ ಮತ್ತು ಅಂತರ್ಜಲ ಸಂರಕ್ಷಣೆಗೆ ಇದು ಪೂರಕವಾಗಿದೆ. ಕರ್ನಾಟಕವು ನೈಸರ್ಗಿಕ ಕೃಷಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರಲು ಬದ್ಧವಾಗಿದ್ದು, ಮಹಿಳಾ ನೇತೃತ್ವದ ಈ ಅಭಿಯಾನವು ಸುಸ್ಥಿರ ಅಭಿವೃದ್ಧಿಯ ಮೈಲಿಗಲ್ಲಾಗಲಿದೆ ಎಂದು ಹೇಳಿದರು.

Post a Comment

0Comments

Post a Comment (0)