ಗಾಂಧಿನಗರ: ಸಪ್ನ ಬುಕ್ ಹೌಸ್ ನಲ್ಲಿ ಪುಸ್ತಕ ಸುಗ್ಗಿ ಕಾರ್ಯಕ್ರಮದಲ್ಲಿ ಅಕ್ಷರ ಸುಗ್ಗಿ ಮಾತಿನ ಹುಗ್ಗಿ ಮಾತುಕತೆ ಕಾರ್ಯಕ್ರಮದಲ್ಲಿ ಜಾನಪದ ಗಾಯಕ ಡಾ||ಅಪ್ಪಗೆರೆ ತಿಮ್ಮರಾಜುರವರು, ಕನ್ನಡ ಪರ ಚಿಂತಕರಾದ ರಾ.ನಂ.ಚಂದ್ರಶೇಖರ್ ರವರು.
ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ ರವರು, ಪ್ರಾಂಶುಪಾಲರುಗಳಾದ ಡಾ||ಸಿ.ಚಂದ್ರಪ್ಪ, ಡಾ||ಶುಭ ಮತ್ತು ಪ್ರಾಧ್ಯಪಕರಾದ ಡಾ||ಬೇಲೂರು ರಘುನಂದನ, ಸಪ್ನ ಬುಕ್ ಹೌಸ್ ದೊಡ್ಡೇಗೌಡರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ||ಅಪ್ಪಗೆರೆ ತಿಮ್ಮರಾಜುರವರು ಮಾತನಾಡಿ ಚರಿತ್ರೆ ನಿರ್ಮಾಣದತ್ತ ಸಾಗುತ್ತಿದೆ ಸಪ್ನ ಬುಕ್ ಹೌಸ್. ಕನ್ನಡ ಪುಸ್ತಕ ಮೇಲೆ ಪ್ರೀತಿ ಬೆಳಸಿಕೊಳ್ಳಿ.ಗ್ರಾಮೀಣ ಭಾಗದ ಅಚರಿಸುವ ಹಬ್ಬಗಳು ನಗರ ಪ್ರದೇಶದ ಜನರಿಗೆ ಅರಿವು ಇಲ್ಲ. ಹಳೆಯ ಸಂಪ್ರದಾಯ ಮರೆಯಾಗುತ್ತಿದೆ.ಉತ್ತಮ ಪುಸ್ತಕಗಳು ಅಭ್ಯಾಸ ಮಾಡುವವರು ಜ್ಞಾನಿಗಳಾಗಿ ಹೊರಹೊಮ್ಮುತ್ತಾರೆ. ವಿದೇಶಿಗರ ಪ್ರತಿಯೊಬ್ಬರ ಕೈಯಲ್ಲಿ ಪುಸ್ತಕ ಇರುತ್ತದೆ ಅದರೆ ನಮ್ಮಲ್ಲಿ ಪುಸ್ತಕಭಿಮಾನಿಗಳು ಇಲ್ಲ ಎಂಬ ಬೇಸರವಿದೆ ಎಂದು ಹೇಳಿದರು. ರಾ.ನಂ.ಚಂದ್ರಶೇಖರ್ ರವರು ಮಾತನಾಡಿ ಸರ್ಕಾರ, ವಿಶ್ವವಿದ್ಯಾಲಯ ಮಾಡುವ ಕೆಲಸ ಸಪ್ನ ಬುಕ್ ಹೌಸ್ ಮಾಡುತ್ತಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಿದೆ.
ನಗರ ಪ್ರದೇಶದಲ್ಲಿ ಗ್ರಂಥಾಲಯ ಸೆಸ್ ಸಂಗ್ರಹ ಮಾಡುತ್ತಾರೆ ಅದರೆ ಅದನ್ನ ಕಸ ತೆಗೆಯಲು ಖರ್ಚು ಮಾಡುತ್ತಾರೆ. ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಪುಸ್ತಕ ಖರೀದಿ ಮಾಡಿಲ್ಲ ಎಂಬುದು ಶೋಚನೀಯ ಸಂಗತಿ. ವರ್ಷಕ್ಕೆ 8ಸಾವಿರ ಪುಸ್ತಕ ಹೊರ ಬರುತ್ತದೆ. 685ಕೋಟಿ ಸೆಸ್ ಗ್ರಂಥಾಲಯ ಇಲಾಖೆಗೆ ಕಡದೇ ಬಾಕಿ ಉಳಿಸಿಕೊಂಡಿದೆ.ಅದರ ಬದಲು ಸರ್ಕಾರ ನೇರವಾಗಿ ಗ್ರಂಥಾಲಯ ಇಲಾಖೆಗೆ ನೇರವಾಗಿ ಸೆಸ್ ತಲುಪುವಂತೆ ಮಾಡಬೇಕು. ತಮಿಳುನಾಡುನಲ್ಲಿ ಪುಸ್ತಕ ಖರೀದಿ ಎಂಬ ಪ್ರಾಧಿಕಾರ ಮಾಡಿದ್ದಾರೆ ಅದರ ಮೂಲಕ ತಮಿಳು ಭಾಷೆಯ ಪ್ರತಿ ಒಂದು ಶೀರ್ಷಿಕೆಯ 1000ಸಾವಿರ ಪುಸ್ತಕ ಖರೀದಿ ಮಾಡಿ ಪ್ರತಿ ಜಿಲ್ಲೆಗೆ 70ಸಾವಿರ ಪುಸ್ತಕ ನೀಡುತ್ತಾರೆ.ಅಲ್ಲಿನ ಸರ್ಕಾರ ಗ್ರಂಥಾಲಯ ಸೆಸ್ ಅನ್ನು ನೇರವಾಗಿ ಗ್ರಂಥಾಲಯ ನೀಡಲಾಗುತ್ತಿದೆ. ಭಾಷೆ ಮತ್ತು ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಾರೆ. ನಿತಿನ್ ಷಾರವರು ಮಾತನಾಡಿ ಸಪ್ನ ಬುಕ್ ಹೌಸ್ ಕನ್ನಡ ಪುಸ್ತಕಗಳ ಕಾಶಿಯಾಗಿದೆ. ನಮ್ಮ ಸಂಸ್ಥೆ 59ವರ್ಷಗಳಿಂದ ಕನ್ನಡ ಪುಸ್ತಕ ಲೋಕಕ್ಕೆ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಜನವರಿ 24ರಿಂದ 8ನೇ ಫೆಬ್ರವರಿಯವರೆಗೆ ರಿಯಾಯಿತಿ ದರದಲ್ಲಿ ಪುಸ್ತಕಗಳು, ಇನ್ನಿತರೆ ವಸ್ತುಗಳ ಮೇಲೆ ನೀಡಲಾಗುತ್ತಿದೆ.ರಂಗಚಿರಂತನ ತಂಡದವರಿಂದ ಜನಪದ ಗೀತೆ ಗಾಯನ ಮತ್ತು ಡಾ||ದೂರದರ್ಶನ ಚಂದನ ವಾಹಿನಿಯ ಥಟ್ ಅಂಥ ಹೇಳಿ ಖ್ಯಾತಿಯ ನಾ.ಸೋಮೇಶ್ವರ ರವರಿಂದ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಮತ್ತು ತಿಪಟೂರುನಲ್ಲಿ ಗಾಡಿಯಲ್ಲಿ ಪುಸ್ತಕ ಮಾರಾಟಗಾರ,ಪುಸ್ತಕ ಪ್ರೇಮಿ ಚಂದ್ರಪ್ಪರವರಿಗೆ ಸನ್ಮಾನಿಸಲಾಯಿತು.