ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳಿಗೆ ಹಾಗೂ ದತ್ತಿ ಪ್ರಶಸ್ತಿಗಳಿಗೆ 2026 ನೇ ಜನವರಿ 8 ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿ ಪುರಸ್ಕøತರನ್ನು ಆಯ್ಕೆ ಮಾಡಲಾಗಿದೆ. 2025 ನೇ ಸಾಲಿನ ವಿಶೇಷ ಪ್ರಶಸ್ತಿಗೆ ಶ್ರೀಮತಿ ಸರಿತಾ ರೈ ಅವರು ಆಯ್ಕೆಯಾಗಿರುತ್ತಾರೆ. ಪ್ರಶಸ್ತಿಯು ರೂ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.2025 ನೇ ವಾರ್ಷಿಕ ಪ್ರಶಸ್ತಿಗೆ ಡಿ.ಕುಮಾರಸ್ವಾಮಿ, ಬನಶಂಕರ ಆರಾಧ್ಯ, ಹೇಮಾ ವೆಂಕಟ್, ಮಂಜುನಾಥ್ ವೈ. ಎಲ್. ಅನಂತನಾಡಿಗ್, ಗುರುರಾಜ ವಾಮನರಾವ್ ಜಮಖಂಡಿ, ಎಂ.ಎಂ.ಪಾಟೀಲ್, ಎಲ್. ವಿವೇಕಾನಂದ, ಆರ್.ಪಿ.ಭರತ್ ರಾಜ್ ಸಿಂಗ್, ಪ್ರೊ.ಪೂರ್ಣಾನಂದ, ಮೊಹಮದ್ ಅಸದ್, ತುಂಗಾ ರೇಣುಕಾ, ಮೊಹಿಯುದ್ದೀನ್ ಪಾಷಾ, ರುದ್ರಪ್ಪ ಅಸಂಗಿ, ಸತೀಶ್ ಆಚಾರ್ಯ, ಸೋಮಶೇಖರ್ ಪಡುಕೆರೆ, ಗುಲ್ನಾರ್ ಮಿರ್ಝಾ, ಗಣೇಶ್ ಹೆಗಡೆ ಇಟಗಿ, ಆರತಿ ಹೆಚ್.ಎನ್., ಕೆ.ಲಕ್ಷ್ಮಣ್, ಉಮಾ ಅನಂತ್, ಮಂಜುನಾಥ ಮಹಾಲಿಂಗಪುರ, ಮಂಜುನಾಥ್ ಟಿ., ಮಲ್ಲಿಕಾಚರಣ ವಾಡಿ, ಪ್ರತಿಮಾನಂದ ಕುಮಾರ್, ಅಮಿತ್ ಉಪಾಧ್ಯ, ಪ್ರಭುಸ್ವಾಮಿ ನಟೇಕರ್, ಸಿದ್ದೇಗೌಡ ಎನ್. ಸಂಜೀವ ಕಾಂಬ್ಳೆ ಹಾಗೂ ನೀಲಕಂಠ ಆರ್ ಅವರು ಆಯ್ಕೆಯಾಗಿದ್ದು, ಪ್ರಶಸ್ತಿಯು ರೂ. 50,000. ನಗದು ಮತ್ತು ಪ್ರಶಸಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಪುರಸ್ಕøತರ ಪಟ್ಟಿ ಪ್ರಕಟ
January 09, 2026
0
ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿವಿಧ ದತ್ತಿ ಪ್ರಶಸ್ತಿಗಳಾದ ಆಂದೋಲನ ದತ್ತಿ ಪ್ರಶಸ್ತಿಗೆ ಕೊಪ್ಪಳದ ಸುವರ್ಣಗಿರಿ ಪತ್ರಿಕೆ, ಅಭಿಮಾನಿ ದತ್ತಿ ಪ್ರಶÀಸ್ತಿಗೆ “ಕಲುಷಿತ ನದಿಗಳಲ್ಲಿ ಲಕ್ಷ್ಮಣ ತೀರ್ಥ ಎರಡನೇ ಸ್ಥಾನ” ಹುಣಸೂರು ವರದಿಗೆ ವಿಜಯವಾಣಿಯ ಶಿವು ಹುಣಸೂರು, ಮೈಸೂರು ದಿಗಂತ ಪ್ರಶಸ್ತಿಗೆ “ಮಂಜಾದ ಕಣ್ಣುಗಳಲ್ಲಿ ಬತ್ತಿ ಹೋಗದ ಭರವಸೆ” ಬೆಳಗಾವಿ ವರದಿಗೆ ಪ್ರಜಾವಾಣಿಯ ಸಂತೋಷ ಈ.ಚಿನಮುಡಿ, ಅಭಿಮನ್ಯ ದತ್ತಿ ಪ್ರಶಸ್ತಿಗೆ “ಸಿಂಧೊಳ್ಳು ಜನರ ಜೀವನವೇ ಗೋಳು” ಸಿಂಧನೂರು ವಿಜಯಕರ್ನಾಟಕ ವರದಿಗೆ ಚಂದ್ರಶೇಖರ ಬೆನ್ನೂರು, ಪ್ರಜಾ ಸಂದೇಶದತ್ತಿ ಪ್ರಶಸ್ತಿಗೆ “ಚಿಲಕಮುಖಿ ಗ್ರಾಮದಲ್ಲಿ ಯುವಕನೊಬ್ಬ ಅನ್ಯ ಜಾತಿ ಯುವತಿಯನ್ನು ಮದುವೆಯಾಗಿರುವ ಕಾರಣಕ್ಕೆ 8 ವರ್ಷಗಳ ಕಾಲ ಬಹಿಷ್ಕಾರ” ವರದಿಗೆ ಕೊಪ್ಪಳದ ಟಿವಿ 5 ಜಿಲ್ಲಾ ವರದಿಗಾರ ನಾಗರಾಜು ವೈ, ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿಗೆ ಡಾ.ಎ.ನಾರಾಯಣ, ಅರಗಿಣಿ ದತ್ತಿ ಪ್ರಶಸ್ತಿಗೆ ಬೆಂಗಳೂರಿನ ಸಿನಿಮಾ ಪತ್ರಕರ್ತರಾದ ಚೇತನ್ ನಾಡಿಗೇರ, ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿಗೆ ಬೆಂಗಳೂರಿನ ಸಿದ್ದೇಶ್ ತ್ಯಾಗಟೂರು, ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಪ್ರಹ್ಲಾದ್ ಕುಳಲಿ ಮತ್ತು ಕೆ.ಯು.ಡಬ್ಲ್ಯೂಜೆ ದತ್ತಿ ಪ್ರಶಸ್ತಿಗೆ ಕೆ.ಆನಂದಕಟ್ಟಿ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಹಾಗೂ ಕಾರ್ಯದರ್ಶಿಗಳಾದ ಸಹನ ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.