ಬೆಂಗಳೂರು : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರುಗಳಾದ ಮೊಹಮ್ಮದ್ ಇಸ್ಮಾಯಿಲ್ ಮತ್ತು ಕೆ.ಆರ್. ಜೋಬಿ ರವರೊಂದಿಗೆ ಆಯೋಗದ ಕಾರ್ಯದರ್ಶಿಗಳಾದ ಡಾ. ಮಾಜುದ್ದೀನ್ ಖಾನ್ ಅವರು ಜನವರಿ 121 ರಂದು ವಾರ್ಡ್ ಸಂಖ್ಯೆ 77 ಥಣಿಸಂದ್ರದಲ್ಲಿರುವ ಸರ್ವೆ ಸಂಖ್ಯೆ 28/1 ಮತ್ತು 28/2 ರಲ್ಲಿ ನಿರ್ಮಿಸಲಾದ ಸುಮಾರು ನಲವತ್ತು ಕಟ್ಟಡಗಳನ್ನು ಧ್ವಂಸ ಗೊಳಿಸಿರುವ ಪ್ರದೇಶಕ್ಕೆ ಭೇಟಿ ನೀಡಿ ನೊಂದವರೊಂದಿಗೆ ಸಮಾಲೋಚಿಸಿ ಸ್ಥಳ ಪರಿಶೀಲನೆ ನಡೆಸಿದರು.
ಈ ಜಮೀನುಗಳನ್ನು ಖರೀದಿಸಿ ಬಿಬಿಎಂಪಿ ಕಛೇರಿಯಲ್ಲಿ ಖಾತೆ ಮತ್ತು ಈ ಖಾತೆಯನ್ನು ಮಾಡಿರುವ ದಾಖಲೆಗಳಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು 15 ಜೆ.ಸಿ.ಬಿ ಮತ್ತು ಪೊಲೀಸ್ ಪಡೆಯೊಂದಿಗೆ ಕಳೆದ ಗುರುವಾರ ಮುಂಜಾನೆ 6.00 ಗಂಟೆಗೆ ಧಾವಿಸಿ ಯಾವುದೇ ಪೂರ್ವಭಾವಿ ನೋಟೀಸ್ ನೀಡದೇ ಸುಮಾರು 40 ಮನೆ ಧ್ವಂಸಗೊಳಿಸಿರುತ್ತಾರೆಂದು ಸ್ಥಳಾಂತರಗೊಂಡ ಕುಟುಂಬ ಸದಸ್ಯರುಗಳು ಆಯೋಗಕ್ಕೆ ತಿಳಿಸಿರುತ್ತಾರೆ. ಈ ಸದಸ್ಯರು ತಾತ್ಕಾಲಿಕ ಶೆಡ್‍ಗಳ ಕೆಳಗೆ ವಾಸ ಮಾಡುತ್ತಿರುವುದು ಕಟ್ಟಡ ಮಾತ್ರ ಕಂಡುಬಂದಿದೆ. ಸ್ಥಳದಲ್ಲಿ ನಿರ್ಮಿತಗೊಂಡಿರುವ ಮಸೀದಿ ಸುರಕ್ಷಿತವಾಗಿರುವುದು ಕಂಡುಬಂದಿದೆ ಎಂದು ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.