ನಾಟ್ಯ ಸನ್ನಿಧಿ ತಂಡಕ್ಕೆ ಮತ್ತೊಂದು ಹೆಗ್ಗಳಿಕೆ

varthajala
0





*ಕನ್ನಡಾಂಬೆಗೆ ನಮನ- ದೆಹಲಿಯ ಭಾರತ್ ಪರ್ವದಲ್ಲಿ ಮೊಳಗಿದ ಕನ್ನಡದ ಕಂಪು*

ದೆಹಲಿ, ಜನವರಿ 31: ಖ್ಯಾತ ನೃತ್ಯ ತಂಡ ನಾಟ್ಯ ಸನ್ನಿಧಿ, ಗುರು ಮೋನಿಷಾ ನವೀನ್ ಅವರ ಮಾರ್ಗದರ್ಶನದಲ್ಲಿ, ದೆಹಲಿಯ ರೆಡ್ ಫೋರ್ಟ್‌ಲ್ಲಿ ನಡೆದ ಭಾರತ್ ಪರ್ವ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಂಚಿತು. "ಕನ್ನಡಾಂಬೆಗೆ ನಮನ" ಎಂಬ ಶೀರ್ಷಿಕೆಯೊಂದಿಗೆ ಭಾರತದ ವಿವಿಧ ರಾಜ್ಯಗಳ ಜಾನಪದ ನೃತ್ಯಗಳ ಮಿಶ್ರಣವನ್ನು ಪ್ರದರ್ಶಿಸಿದ ತಂಡ, ಪ್ರೇಕ್ಷಕರ ಮನಸೂರೆಗೊಂಡಿತು. ಕರ್ನಾಟಕದ ಯಕ್ಷಗಾನ, ವೀರಗಾಸೆ,ಡೊಳ್ಳು ಕುಣಿತ, ಕರ್ಗಾ, ಹುಲಿವೇಷ, ಕೋಡವ ನೃತ್ಯ, ಪೂಜಾ ಕುಣಿತ, ಪಟ ಕುಣಿತ, ಕಂಸಾಳೆ, ಕೋಲಾಟ ಮೊದಲಾದ ನೃತ್ಯಗಳನ್ನು ಒಳಗೊಂಡ ಸುಂದರ  ಕಾರ್ಯಕ್ರಮವನ್ನು ತಂಡವು ಪ್ರಸ್ತುತಪಡಿಸಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಪ್ರೇಕ್ಷಕರು ಮತ್ತು ಗಣ್ಯರು ತಂಡದ ಪ್ರದರ್ಶನವನ್ನು ಮೆಚ್ಚಿ ಶ್ಲಾಘಿಸಿದರು. ಕರ್ನಾಟಕ , ಜಾನಪದ ವೈವಿಧ್ಯತೆಯನ್ನು ಗಣರಾಜ್ಯೋತ್ಸವದ ಸಂಭ್ರಮ  ಸಂದರ್ಭದಲ್ಲಿ ಪ್ರದರ್ಶಿಸಿದ ಹೆಮ್ಮೆ ನಾಟ್ಯ ಸನ್ನಿಧಿಯದು. ಈ ಕಾರ್ಯಕ್ರಮದಲ್ಲಿ ಗುರು ಮೋನಿಷಾ ನವೀನ್,ತನಿಷಾ, ಚಿರಂಜೀವಿ, ಮಂಗಳ, ಲತಾ, ಆಶಾ, ದಿವ್ಯಾ, ಲಾವಣ್ಯ, ಯಶಸ್ವಿನಿ, ತೇಜಸ್ವಿನಿ,‌ಇಂಚರ ದಿಯ,ದಿತಿ,ಲಾಸ್ಯ ಪ್ರಿಯಾ,ಮನ್ವಿತ್, ನಿಸ್ಚಿತ್, ವೈಷ್ಣವಿ, ಪೂರ್ಣಿಮಾ,ವಿಜೇತ , ಶಿಲ್ಪಾ ತಂಡ

ನೃತ್ಯ‌ ಪ್ರದರ್ಶನ ನೆರೆದಿದ್ದ ಸಾವಿರಾರು ಜನರ ಹೃದಯ ಕದ್ದರು ಎಂದರೆ ತಪ್ಪಾಗಲಾರದು.

Post a Comment

0Comments

Post a Comment (0)