ರೈತರ ಆದಾಯ ಹೆಚ್ಚಿಸಲು, ಸಂಸ್ಕರಣೆ, ಮೌಲ್ಯವರ್ಧನೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಸಹಕಾರಿಯಾಗಿದೆ - ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್

varthajala
0

 ಬೆಂಗಳೂರು :   ಕರ್ನಾಟಕದಲ್ಲಿ ಕೃಷಿ ಕ್ಷೇತ್ರದ ಶಕ್ತಿಯನ್ನು ಬಲಪಡಿಸಲು, ರೈತರ ಆದಾಯ ಹೆಚ್ಚಿಸಲು ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳನ್ನು ವಿಸ್ತರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಸಹಕಾರ ನೀಡುತ್ತದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.ಇಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026 ಉತ್ಪದಾನೋತ್ತರ ಕೃಷಿ - ರೈತರ ಸಬಲೀಕರಣ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಕರ್ನಾಟಕದ ಕೃಷಿ ವೈವಿಧ್ಯತೆಯನ್ನು ಹೊಂದಿದ್ದು ರಾಜ್ಯದ ಕಾಫಿ ವಿಶ್ವಕ್ಕೆ ಶಕ್ತಿ ನೀಡುತ್ತದೆ, ಚಂದನ ತಾಜಾತನ ನೀಡುತ್ತದೆ, ರೇμÉ್ಮ ಜಾಗತಿಕ ಮಾನ್ಯತೆ ತಂದುಕೊಡುತ್ತದೆ, ತೆಂಗು ಆರೋಗ್ಯ ಮತ್ತು ರುಚಿಯನ್ನು ನೀಡುತ್ತದೆ. ಸಿರಿಧಾನ್ಯಗಳು ವಿಶ್ವದ ಮಟ್ಟದಲ್ಲಿ ಪೌಷ್ಟಿಕತೆ ಮತ್ತು ಆರೋಗ್ಯಕ್ಕೆ ಸಹಕಾರಿಯಾಗಿವೆ ಎಂದು ಹೇಳಿದರು.

ರೈತರಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ಕರ್ನಾಟಕ ಕೃಷಿ ಸಚಿವರನ್ನು ಅಭಿನಂದಿಸಿzರು. ಉತ್ಪಾದನೆ ಮಾತ್ರ ಸಾಕಾಗುವುದಿಲ್ಲ. ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ವಿಸ್ತರಣೆ ಅಗತ್ಯವಿದ್ದು, ಇದರಿಂದ ರೈತರಿಗೆ ಲಾಭದಾಯಕ ಬೆಲೆ ದೊರೆಯುತ್ತದೆ.ಕಾಳುಬೆಳೆಗಳ ಕುರಿತು ಮಾತನಾಡಿದ ಅವರು, ತೊಗರಿ ಮತ್ತು ತೊಗರಿ ಬೇಳೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಪ್ರತಿ ಹೆಕ್ಟೇರ್ ಉತ್ಪಾದನೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದ್ದು, ಅದನ್ನು ಹೆಚ್ಚಿಸುವ ಅಗತ್ಯವಿದೆ. ಪಲ್ಸ್ ಮಿಷನ್ ಅಡಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಕೇಂದ್ರದಿಂದ ಸಂಪೂರ್ಣ ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲ ನೀಡಲಾಗುವುದು ಎಂದು ಹೇಳಿದರು.

ಉತ್ತಮ ಗುಣಮಟ್ಟದ ಬೀಜಗಳ ಮಹತ್ವವನ್ನು ಒತ್ತಿಹೇಳಿದ ಅವರು, ರಾಜ್ಯದಲ್ಲಿ ಬೀಜ ಗ್ರಾಮಗಳನ್ನು ಸ್ಥಾಪಿಸಲು ಕರೆ ನೀಡಿದರು. ರೈತರು ಸ್ವತಃ ಬೀಜ ಉತ್ಪಾದಿಸುವಂತೆ 25 ಬೀಜ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು. ಬೀಜ ಉತ್ಪಾದನೆ ಮತ್ತು ಕಾಳುಬೆಳೆ ಪ್ರದರ್ಶನ ಕೈಗೊಂಡ ರೈತರಿಗೆ ಪ್ರತಿ ಹೆಕ್ಟೇರ್‍ಗೆ 10,000 ರೂಪಾಯಿ ಪೆÇ್ರೀತ್ಸಾಹಧನ ನೀಡಲಾಗುತ್ತದೆ. ವಿಶೇಷವಾಗಿ ತೊಗರಿ ಬೆಳೆಯುವ ಪ್ರದೇಶಗಳಲ್ಲಿ ಈ ಗ್ರಾಮಗಳ ಅಭಿವೃದ್ಧಿಗೆ ಕೇಂದ್ರದಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ ಎಂದು ಹೇಳಿದರು.ಸಂಸ್ಕರಣಾ ಮೂಲಸೌಕರ್ಯದ ಅಗತ್ಯವನ್ನು ಉಲ್ಲೇಖಿಸಿದ ಅವರು, ಕರ್ನಾಟಕದಲ್ಲಿ 35 ದಾಲ್ ಮಿಲ್‍ಗಳ ಸ್ಥಾಪನೆಗೆ ಬೆಂಬಲ ಘೋಷಿಸಿದರು. ಪ್ರತಿಯೊಂದು ಮಿಲ್‍ಗೆ ಕೇಂದ್ರದಿಂದ 25 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದರು. ರೈತ ಉತ್ಪಾದಕ ಸಂಘಗಳು (ಎಫ್.ಪಿ.ಓ), ರೈತ ಗುಂಪುಗಳು ಮತ್ತು ಖಾಸಗಿ ವಲಯವನ್ನು ಈ ಘಟಕಗಳನ್ನು ಸ್ಥಾಪಿಸಲು ಉತ್ತೇಜಿಸಲಾಗುತ್ತದೆ ಎಂದು ಹೇಳಿದರು.
ತೆಂಗು ಬೆಳೆಯು ಕರ್ನಾಟಕಕ್ಕೆ ವಿಶಿಷ್ಟ ಸ್ಥಾನವಿದ್ದರೂ ರಾಜ್ಯದಲ್ಲಿ ಇತ್ತೀಚೆಗೆ ಹಳೆಯ ತೋಟಗಳು ಮತ್ತು ರೋಗಗಳಿಂದ ಉತ್ಪಾದನೆ ಕುಂಠಿತವಾಗಿದೆ. ಹೆಚ್ಚಿನ ಉತ್ಪಾದನೆ ನೀಡುವ ಹೊಸ ತಳಿಗಳನ್ನು ನೆಡುವ ಮೂಲಕ ಹಳೆಯ ತೋಟಗಳನ್ನು ಬದಲಿಸಲು ತೆಂಗು ಅಭಿವೃದ್ಧಿ ಯೋಜನೆ ಜಾರಿಗೊಳ್ಳಲಿದೆ ಹಾಗೂ ರೋಗ ನಿಯಂತ್ರಣಕ್ಕಾಗಿ ವೈಜ್ಞಾನಿಕ ತಂಡಗಳನ್ನು ರಚಿಸಲಾಗಿದೆ. ಯೋಜನೆಯ ಪೂರ್ಣ ಪ್ರಯೋಜನ ಪಡೆಯಲು ರಾಜ್ಯವು ಪ್ರಸ್ತಾಪಗಳನ್ನು ಕಳುಹಿಸಬೇಕು ಎಂದು ಹೇಳಿದರು.

ರೈತರ ಪರಿಶ್ರಮದಿಂದ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ ಎಂದು ಅಭಿನಂದಿಸಿದರು.ಕರ್ನಾಟಕದ ಮಳೆ ಆಧಾರಿತ ಪ್ರದೇಶಗಳ ಸವಾಲುಗಳನ್ನು ಉಲ್ಲೇಖಿಸಿದ ಅವರು, ಕಡಿಮೆ ನೀರಿನಲ್ಲಿ ಹೆಚ್ಚಿನ ಉತ್ಪಾದನೆ ನೀಡುವ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನೇರ ಬಿತ್ತನೆ ಅಕ್ಕಿ ತಳಿಗಳು ಕಾರ್ಮಿಕ ವೆಚ್ಚ ಕಡಿಮೆ ಮಾಡುತ್ತವೆ, ಸುಮಾರು 20 ಶೇಕಡಾ ಕಡಿಮೆ ನೀರು ಬಳಕೆ ಮಾಡುತ್ತವೆ ಮತ್ತು 18–20 ದಿನಗಳು ಬೇಗ ಕೊಯ್ಲಿಗೆ ಬರುತ್ತವೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ- ಐಸಿಎಆರ್ ವತಿಯಿಂದ ಕರ್ನಾಟಕಕ್ಕೆ ಹೊಂದುವ ವಿಶೇಷ ತಳಿಗಳ ಅಭಿವೃದ್ಧಿ ನಡೆಯುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಗೋಡಂಬಿ, ಕಾಫಿ ಮತ್ತು ಕೋಕೋ ಬೆಳೆಗಳಿಗೆ ಉತ್ತೇಜನ ನೀಡಲು ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಟೊಮ್ಯಾಟೋ, ಮೆಣಸಿನಕಾಯಿ, ಮಾವು, ಡ್ರಾಗನ್ ಫ್ರೂಟ್ ಮತ್ತು ಅವಕಾಡೊ ಸೇರಿದಂತೆ ತೋಟಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕದ ಪ್ರಗತಿಯನ್ನು ಮೆಚ್ಚಿದರು. ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ ಅಡಿಯಲ್ಲಿ ರಾಜ್ಯದೊಂದಿಗೆ ಸಹಭಾಗಿತ್ವದಲ್ಲಿ ವ್ಯಾಪಕ ಬೆಂಬಲ ನೀಡಲಾಗುತ್ತದೆ ಎಂದರು.ಸಿರಿಧಾನ್ಯ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ಕುರಿತು ಮಾತನಾಡಿದ ಅವರು, ಕರ್ನಾಟಕದ ಉತ್ಪನ್ನಗಳನ್ನು ದೇಶ ಮತ್ತು ವಿಶ್ವದ ಮಾರುಕಟ್ಟೆಗಳಿಗೆ ತಲುಪಿಸಲು ಕೇಂದ್ರ ಕ್ರಮ ಕೈಗೊಳ್ಳಲಿದೆ. ಪ್ರದರ್ಶನದಲ್ಲಿ ಹಲವು ಉತ್ಪನ್ನಗಳನ್ನು ಸ್ವತಃ ಪರಿಶೀಲಿಸಿದ್ದಾಗಿ ಮತ್ತು ಅವುಗಳ ಗುಣಮಟ್ಟವನ್ನು ಮೆಚ್ಚಿಕೊಂಡು, ಕರ್ನಾಟಕದ ಬ್ರಾಂಡ್‍ಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಹಣಕಾಸು ನೆರವು ಘೋಷಿಸಿದ ಅವರು, ಬೆಳೆ ಮಿಷನ್ ಮತ್ತು ಗ್ರಾಮೀಣ ಮಿಷನ್ ಅಡಿಯಲ್ಲಿ ಕರ್ನಾಟಕಕ್ಕೆ 191.67 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತಿದೆ ಹಾಗೂ ಅನುಮೋದನಾ ಪತ್ರವನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದರು. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆ (ಆರ್‍ಕೆವಿವೈ) ಅಡಿಯಲ್ಲಿ ಬಾಕಿ ಇರುವ 154 ಕೋಟಿ ರೂಪಾಯಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು. ಕೃಷಿ ಸಚಿವ ಹಾಗೂ ಉಸ್ತುವಾರಿ ಸಮಿತಿ ಅಂತರಾಷ್ಟ್ರೀಯ ವಾಣಿಜ್ಯ ಮೇಳ -2026 ಅಧ್ಯಕ್ಷ ಎನ್. ಚೆಲುವರಾಯಸ್ವಾಮಿ ಮಾತನಾಡಿ ದೇಶದಲ್ಲಿ ನಮ್ಮ ರಾಜ್ಯವು ಸಿರಿಧಾನ್ಯಗಳಿಗೆ, ಉತ್ಪಾದನೆಗೆ ಹಾಗೂ ಆಹಾರ ಸಂಸ್ಕರಣೆಗೆ ಮೊದಲನೆಯ ಆದ್ಯತೆ ನೀಡಿದ ರಾಜ್ಯವಾಗಿದೆ. ರಾಜ್ಯದಲ್ಲಿ ಹವಾಮಾನ ವೈವಿಧ್ಯತೆ ಇದ್ದು, 10 ವಿವಿಧ ಹವಾಮಾನ ವಲಯಗಳನ್ನು ಹೊಂದಿದೆ ಮತ್ತು ದೇಶದಲ್ಲಿಯೇ ವಿವಿಧ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಆದ್ಯತೆ ನೀಡಿರುವ ಪ್ರಮುಖ ರಾಜ್ಯವಾಗಿದೆ. ವಿಶೇಷವಾಗಿ ಸಿರಿಧಾನ್ಯ, ಕಾಫೀ, ರೇμÉ್ಮ, ಸಾಂಬಾರು ಪದಾರ್ಥಗಳು ಹಾಗೂ ಸಂಸ್ಕರಿಸಿದ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ರಫ್ತಿಗೆ ಕರ್ನಾಟಕವನ್ನು ಪ್ರಮುಖ ಕೇಂದ್ರವನ್ನಾಗಿ ರೂಪಿಸಿದೆ  ಎಂದು ತಿಳಿಸಿದರು.

ನಮ್ಮ ಕರ್ನಾಟಕ ರಾಜ್ಯದಲ್ಲಿ 25ಕ್ಕೂ ಹೆಚ್ಚು ಆಹಾರ ಉತ್ಪನ್ನಗಳಿಗೆ ಹಾಗೂ ಬೆಳೆಗಳಿಗೆ ಜಿ.ಐ. ಟ್ಯಾಗ್ ದೊರೆತಿದೆ. ನಾವು ರಾಜ್ಯದಲ್ಲಿ ಕರ್ನಾಟಕ ರಾಜ್ಯ ಬೇಳೆಕಾಳು ಅಭಿವೃದ್ಧಿ ನಿಗಮವನ್ನು ಪ್ರಾರಂಭಿಸಿ ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆದ ತೊಗರಿ ಬೇಳೆಗೆ “ಭೀಮಾ ಫಲ್ಸ್” ಎಂಬ ಬ್ರಾಂಡ್ ಮೇಲೆ ಹಾಗೂ ಇದರಂತೆ ತೋಟಗಾರಿಕೆ ಇಲಾಖೆಯಿಂದಲೂ ರಾಜ್ಯದಲ್ಲಿ ಉತ್ಪಾದಿಸಿದ ಜೇನು ತುಪ್ಪಕ್ಕೆ “ಜೇಂಕಾರ” ಎಂಬ ಬ್ರಾಂಡಿನಲ್ಲಿ ಮಾರಾಟ ಮಾಡಲಾಗುತ್ತಿದೆ.
ರಾಜ್ಯದಿಂದ 2022-23ನೇ ಸಾಲಿನಲ್ಲಿ 8000 ಟನ್ನುಗಳಷ್ಟು ಸಿರಿಧಾನ್ಯ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳನ್ನು 36 ಕೋಟಿ ಮೌಲ್ಯದಲ್ಲಿ ರಫ್ತು ಮಾಡಿದ್ದು,  ಇದು ದೇಶದ ಒಟ್ಟು ಸಿರಿಧಾನ್ಯ ರಫ್ತಿನ ಸುಮಾರು  ಶೇಕಡಾ 40ರ ಪಾಲಾಗಿದೆ. ಸಿರಿಧಾನ್ಯ ಪದಾರ್ಥಗಳು ನಮ್ಮ ರಾಜ್ಯದಿಂದ ಅಮೇರಿಕಾ, ಆಸ್ಟ್ರೇಲಿಯಾ, ಕೆನಡಾ, ಕಥಾರ್, ಯು.ಎ.ಇ, ಥೈಲ್ಯಾಂಡ್ ಮತ್ತು ಸಿಂಗಾಪುರ ದೇಶಗಳಿಗೆ ರಫ್ತಾಗುತ್ತದೆ. ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಲ ಅಧಿಕೃತೀಕರಣ ಯೋಜನೆ (ಪಿಎಂಎಫ್‍ಎಂಇ) ಯೋಜನೆಯ ಕಾರ್ಯಕ್ರಮಗಳನ್ನು ಅಳವಡಿಸುವಲ್ಲಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆಯಗೆ ಕೃಷಿ ಇಲಾಖೆ ನೋಡಲ್ ಇಲಾಖೆಯಾಗಿದ್ದು,  ಕಪೆಕ್ ಸಂಸ್ಥೆಯು ನೋಡೆಲ್ ಎಜೆನ್ಸಿಯಾಗಿದೆ ಹಾಗೂ ಮೈಸೂರು ಸಿ.ಎಫ್.ಟಿ.ಆರ್.ಐ ಜ್ಞಾನ ಸಹಭಾಗಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ 500 ಕ್ಕೂ ಹೆಚ್ಚು  ರೈತರನ್ನು ಕೃಷಿ ಉದ್ಯಮಿಗಳಾಗಿ ತರಬೇತಿ ನೀಡಲಾಗಿದೆ. 2020-21 ರಿಂದ ಇದುವರೆಗೆ  8800 ಫಲಾನುಭವಿಗಳಿಗೆ 1075 ಕೋಟಿ ರೂ ಸಾಲ ಮಂಜೂರಾಗಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ಎಂದು ಅವರು ಹೇಳಿದರು. ಈ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಸರ್ಕಾರ 35 ಶೇಕಡಾ ಅನುದಾನ ನೀಡುತ್ತದೆ. ರಾಜ್ಯ ಸರ್ಕಾರ ಹೆಚ್ಚುವರಿ 15 ಶೇಕಡಾ ಸಹಾಯ ನೀಡುವ ಮೂಲಕ ಒಟ್ಟು ಅನುದಾನವನ್ನು 50 ಶೇಕಡಾ (ಪ್ರತಿ ಘಟಕಕ್ಕೆ ಗರಿಷ್ಠ 15 ಲಕ್ಷಕ್ಕೆ) ಹೆಚ್ಚಿಸಿದೆ. ಇದರಲ್ಲಿ 9 ಲಕ್ಷ ರೂ ರಾಜ್ಯ ಸರ್ಕಾರ ಹಾಗೂ  6 ಲಕ್ಷ ರೂ ಕೇಂದ್ರ ಸರ್ಕಾರದಿಂದ ಭರಿಸುತ್ತದೆ. ಸಿರಿ ಧಾನ್ಯಗಳು, ಬೆಲ್ಲ, ಬೇಕರಿ ಪದಾರ್ಥಗಳು, ತೆಂಗಿನ ಉತ್ಪನ್ನಗಳು, ಮಸಾಲೆ ಮಿಶ್ರಣಗಳು ಮತ್ತು ಕೋಲ್ಡ್ ಫ್ರೆಶ್ ಘಟಕಗಳು ಸ್ಥಾಪನೆಯಾಗಿ ಆಹಾರ ಸಂಸ್ಕರಣಾ ಕ್ಷೇತ್ರವು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ವಲಯವಾಗಿದೆ ಎಂದರು.
2024–25ರಲ್ಲಿ ಕರ್ನಾಟಕದ ಕಾಫಿ ರಫ್ತು ಮೌಲ್ಯ 1.1 ಬಿಲಿಯನ್ ಡಾಲರ್ ಆಗಿದ್ದು, ಇದು ದೇಶದ ಒಟ್ಟು ಕಾಫಿ ರಫ್ತಿನ ಸುಮಾರು 60 ಶೇಕಡಾ ಪಾಲಾಗಿದೆ. 2023–24ರಲ್ಲಿ 173 ಮಿಲಿಯನ್ ಡಾಲರ್ ಮೌಲ್ಯದ ಮಸಾಲೆಗಳು ರಫ್ತು ಆಗಿದ್ದು, ಇದು ದೇಶದ ಒಟ್ಟು ಮಸಾಲೆ ರಫ್ತಿನ ಸುಮಾರು 31.5 ಶೇಕಡಾ ಪಾಲಾಗಿದೆ. ಒಟ್ಟಾರೆ ಕೃಷಿ ರಫ್ತಿನಲ್ಲಿ ಕರ್ನಾಟಕ ದೇಶದಲ್ಲಿ ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಜ್ಯದ ಸಾಧನೆಗಳನ್ನು ಉಲ್ಲೇಖಿಸಿದ ಸಚಿವರು, ಮುಂದಿನ ಬೆಳವಣಿಗೆಗಾಗಿ ಆಹಾರ ಉದ್ಯಾನಗಳ ಸ್ಥಾಪನೆ, ಶೀತಗೃಹ ಸಾಮಥ್ರ್ಯ ವೃದ್ಧಿ, ಸಾರಿಗೆ ವ್ಯವಸ್ಥೆಯ ಸುಧಾರಣೆ ಮತ್ತು ಬ್ರಾಂಡಿಂಗ್, ಮಾರುಕಟ್ಟೆ ಹಾಗೂ ರಫ್ತುಗಳಿಗೆ ವಿಶೇಷ ಯೋಜನೆಗಳ ಅಗತ್ಯವಿದೆ ಎಂದು ಹೇಳಿದರು.ಕರ್ನಾಟಕವು ದೇಶದ ಒಟ್ಟು ರೇμÉ್ಮ ಉತ್ಪಾದನೆಯ ಸುಮಾರು 45 ಶೇಕಡಾ ಪಾಲಿನೊಂದಿಗೆ ವರ್ಷಕ್ಕೆ ಸುಮಾರು 9,000 ಟನ್ ರೇμÉ್ಮ ಉತ್ಪಾದಿಸುತ್ತಿದೆ ಎಂದು ಹೇಳಿದರು.ಈ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ರೈತರ ಸಬಲೀಕರಣಕ್ಕೆ ಪ್ರಮುಖ ವೇದಿಕೆಯಾಗಿದ್ದು, ಸಾವಯವ ಕೃಷಿ ಮತ್ತು ಸಿರಿಧಾನ್ಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಹವಾಮಾನ ಬದಲಾವಣೆಯ ಹಿನ್ನೆಲೆ ರೈತರಿಗೆ ಭೂ ಸಿದ್ಧತೆ, ಸಾವಯವ ತಂತ್ರಜ್ಞಾನ, ಯಂತ್ರೋಪಕರಣಗಳು, ಉಪ ಉತ್ಪನ್ನ ಬಳಕೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.

ಮೇಳದಲ್ಲಿ ವಿಶೇಷ ಮಳಿಗೆಗಳ ಮೂಲಕ ಬ್ರಾಂಡಿಂಗ್, ಮಾರುಕಟ್ಟೆ ಮತ್ತು ಬ್ಯಾಂಕ್ ಸಾಲ ಪಡೆಯುವ ಬಗ್ಗೆ ರೈತರು ಹಾಗೂ ಯುವಕರಿಗೆ ಕ್ಷಣಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. "ರಾಗಿ ಅಥವಾ ಜೋಳದಂತಹ ಕಚ್ಚಾ ಬೆಳೆಗೆ ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಮೂಲಕ 100 ರೂ.ಗಳಿಂದ 400 ರಿಂದ 500 ರೂ.ಗಳವರೆಗೆ ಲಾಭ ಸಿಗುತ್ತದೆ" ಎಂದು ಅವರು ಹೇಳಿದರು. ರೈತರು ಕಚ್ಚಾ ಉತ್ಪನ್ನಗಳ ಮಾರಾಟವನ್ನು ಮೀರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕ ಸಬಲೀಕರಣ ಸಾಧಿಸಬೇಕೆಂದು ಅವರು ತಿಳಿಸಿದರು.ಮೂರು ದಿನಗಳ ಮೇಳಕ್ಕೆ ಇದುವರೆಗೆ ಮೂರು ಲಕ್ಷ ಮಂದಿ ಭೇಟಿ ನೀಡಿದ್ದು, ಮುಂಬೈ–ಕರ್ನಾಟಕ, ಹೈದರಾಬಾದ್–ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗಗಳಿಂದ ರೈತರು ಭಾಗವಹಿಸಿದ್ದಾರೆ. ಈ ಮೇಳವು ಹಿಂದಿನ ಮೇಳಗಳಿಗಿಂತ ಹೆಚ್ಚು ಉಪಯುಕ್ತವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.  ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ ಸಾವಯವ ಹಾಗೂ ಸಿರಿಧಾನ್ಯದ ಕುರಿತು ಪರಿಚಯ ಮಾಡಿಕೊಟ್ಟ ರಾಜ್ಯ ಕರ್ನಾಟಕ. ಸಿರಿ ಧಾನ್ಯಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ರೈತರಿಗೆ ಮತ್ತು ಗ್ರಾಹಕರಿಗೆ ಸಿರಿಧಾನ್ಯದ ಕುರಿತು ರಾಷ್ಟ ಮಟ್ಟದಲ್ಲಿ ಆಂದೋಳನವನ್ನು ಸೃಷ್ಟಿಸಿದ ರಾಜ್ಯ ಕರ್ನಾಟಕ ಎಂದು ಸಂತಸ ವ್ಯಕ್ತಪಡಿಸಿದರು.
ಸಾವಯವ ಮತ್ತು ಸಿರಿಧಾನ್ಯ ಕೃಷಿಯಲ್ಲಿ ಆರ್ಥಿಕ ನೆರವು ಕೇಂದ್ರ ಸರ್ಕಾರ ನೀಡಬೇಕು. ಸಾವಯವ ಗ್ರಾಮ ಯೋಜನೆ, ಸಿರಿಧಾನ್ಯ ಉತ್ಪಾದನೆಗೆ ಸಬ್ಸಿಡಿಗೆ ಸಂಬಂಧಪಟ್ಟಂತೆ  ಕೇಂದ್ರ ಸರ್ಕಾರದ ನೆರವು ಮುಂದುವರೆಸಬೇಕು. ರೈತರಿಗೆ ಮಾರುಕಟ್ಟೆ ಲಭ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕು. ನಮ್ಮ ರಾಜ್ಯದ ಸಿರಿಧಾನ್ಯವು ಅಂತರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ನೆರವಾಗಬೇಕು. ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರೋಗ್ಯ ವರ್ಧಿಸುವ ಆಹಾರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕರ್ನಾಟಕದಲ್ಲಿ ಇಂತಹ ಆಹಾರ ತಯಾರಾಗುತ್ತಿತ್ತು ಇದರ ರಫ್ತಿಗೂ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡರು  ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೋರಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ಮಳಿಗೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಫೀಲ್ಡ್ ಆಫ್ ಪರ್‍ಪಸ್  ಪುಸ್ತಕ ಬಿಡುಗಡೆ ಮಾಡಲಾಯಿತು. ಸಂಪೂರ್ಣ ಗ್ರಾಂಡ್ ಚಾಲೆಂಜ್-2026ರ ವಿಡಿಯೋ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ ಅಧ್ಯಕ್ಷ (ನಿ) ಅಶೋಕ್ ಎಂ ದಳವಾಯಿ, ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಅಧ್ಯಕ್ಷ ಎಂ ಅಂಜನಪ್ಪ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಾವಣ್ಯ ಬಲ್ಲಾಳ್ ಜೈನ್, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಕೃಷಿ ಆಯುಕ್ತ ವೈ.ಎಸ್. ಪಾಟೀಲ, ಕೃಷಿ ನಿರ್ದೇಶಕ ಡಾ. ಜಿ.ಟಿ., ಪುತ್ರ, ಗಣ್ಯರು, ರೈತರು, ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)