ರಾಜಾಜಿನಗರ (Rajajinagara Constituency) ವಿಧಾನಸಭಾ ಕ್ಷೇತ್ರ: ದಯಾನಂದನಗರ (Dayananda Nagara Ward) ವಾರ್ಡ್ ನಲ್ಲಿ ಬೃಹತ್ ಹಿಂದೂ ಸಮಾಜೋತ್ಸವ (Hindu Samajotsava) ಕಾರ್ಯಕ್ರಮ.ನೂರಾರು ಮಹಿಳೆಯರು ಕಳಸಹೊತ್ತು ಭವ್ಯ ಶೋಭಯಾತ್ರೆಯನ್ನು (Shobha yatra) ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಚಾಲನೆ ನೀಡಿದರು. ಬಿಬಿಎಂಪಿ ಮಾಜಿ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜು ರವರು ಭಾಗವಹಿಸಿದ್ದರು.
ಭವ್ಯ ಶೋಭಯಾತ್ರೆಯು ದಯಾನಂದನಗರ,ಶ್ರೀರಾಮಪುರ, ಗೌತಮನಗರ, ಬಂಡಿರೆಡ್ಡಿ ಸರ್ಕಲ್, ರಾಮಕೃಷ್ಣಸೇವಾನಗರ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ತಲುಪಿತು.ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಹಿಂದೂ ಸಮಾಜೋತ್ಸವ ಅಚರಿಸಲಾಗುತ್ತಿದೆ.
ಹಿಂದೂ ಎಂದರೆ ಸಂಸ್ಕೃತಿಯ ಪ್ರತೀಕ, ನಂಬಿಕೆ, ವಿಶ್ವಾಸ, ಉತ್ತಮ ಅಚಾರ ವಿಚಾರಗಳುವುಳ್ಳ ಧರ್ಮ ಎಂಬರ್ಥ, ಹಿಂದೂಗಳ ಸಂಘಟಿತರಾದಗ ಮಾತ್ರ ದೇಶ ಉಳಿಯುತ್ತದೆ. ಇಂದು ವಿಶ್ವದಲ್ಲಿ ಹಿಂದೂ ಧರ್ಮಕ್ಕೆ ಹೆಚ್ಚಿನ ಮಾನ್ಯತೇ ಇದೆ.ನಾನು ಹಿಂದೂ ಎಂದು ಹೆಮ್ಮೆಯಿಂದ ಕೇಳಬೇಕು. ಕಾಶ್ಮೀರದಿಂದ ಕನ್ಯಕುಮಾರಿವರೆಗೆ ಹಿಂದೂ ಸಮಾಜೋತ್ಸವ ಅಚರಿಸಲಾಗುತ್ತಿದೆ. ಹಿಂದೂ ಸಮಾಜ ಇಂದು ಜಾಗ್ರತವಾಗಿದೆ.ವಾದ್ಯ, ನಾದಸ್ವರ ಮತ್ತು ವಿವಿಧ ಕಲಾ ತಂಡಗಳು ಶೋಭಯಾತ್ರೆಯಲ್ಲಿ ಭಾಗವಹಿಸಿದ್ದರು.
ಮಂಡಲ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ಕೇಂದ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದಎಂ.ಎಸ್.ಸಂಜಯ್ ಕುಮಾರ್ ರವರು ಉಪಸ್ಥಿತರಿದ್ದರು.