* ನೀವು ಓದಿ, ನಿಮ್ಮವ್ರಿಗೆ ಓದಿಸಿ *

varthajala
0

ನಾವು ಬದುಕಲು ಚಾಲೆಂಜ್ ಮಾಡಬೇಕು ಆದ್ರೆ ಮೈಕಲ್ ಜಾಕ್ಸನ್ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ ಸಾವು ಗೆದ್ದಿತು 50 ವರ್ಷ ವಯಸ್ಸಿನ ಮೈಕಲ್ ಜಾಕ್ಸನ್ ಶವವಾಗಿ ಮಲಗಿದ್ದ...

ವಿಶ್ವದ ಪಾಪ್ ಲೋಕದ ತ್ರಿವಿಕ್ರಮ ಡ್ಯಾನ್ಸ್ ಲೋಕದ ಮಹಾರಾಜ ಮೈಕಲ್ ಜಾಕ್ಸನ್ 150 ವರ್ಷ ಬದುಕಲು ಮಾಡಿಕೊಂಡಿದ್ದ ತಯಾರಿ ಅಚ್ಚರಿ ಆದರೂ ಸತ್ಯ 

ಕ್ಯಾಲಿಫೋರ್ನಿಯಾ ಲಾಸ್ ಏಂಜೆಲ್ಸ್ ನಗರದ 12 ಜನ ವಿಶ್ವ ಪ್ರಸಿದ್ಧ ವೈದ್ಯರನ್ನು ಕೆಲಸಕ್ಕೆ ನೇಮಿಸಿದ್ದ ಪ್ರತಿ ದಿನ ಅವರು ಮೈಕಲ್ ಜಾಕ್ಸನ್ ಪರೀಕ್ಷೆ ಮಾಡುತಿದ್ದರು

ಮೈಕಲ್ ಜಾಕ್ಸನ್ ಊಟ ಪ್ರತಿ ದಿನ ಲ್ಯಾಬೋರೇಟರಿಯಲ್ಲಿ ತಪಾಸಣೆ ಆದ ನಂತರ ಸೇವಿಸುತ್ತಿದ್ದ

15 ಜನರನ್ನು ತನ್ನ ವ್ಯಾಯಾಮ ಮತ್ತು ಇತರ ದಿನನಿತ್ಯದ ಕೆಲಸಕ್ಕೆ ನೇಮಿಸಿದ್ದ

ಮಲಗುವ ಹಾಸಿಗೆಯಲ್ಲಿ ತಂತ್ರಜ್ಞಾನದ ಮೂಲಕ ಆಮ್ಲಜನಕ ನಿಯಂತ್ರಣದ ವ್ಯವಸ್ಥೆ ಮಾಡಿಕೊಂಡಿದ್ದ

ತನ್ನ ಆರೋಗ್ಯದಲ್ಲಿ ಏರುಪೇರು ಆದಾಗ ಯಾವುದೇ ತೊಂದರೆ ಆಗಬಾರದು ಎಂದು ದೇಹದ ಅಂಗಾಂಗ ದಾನ ಮಾಡುವವರನ್ನು ಅತೀ ಹೆಚ್ಚು ಬೆಲೆಗೆ ಖರೀದಿ ಮಾಡಿದ್ದ

ಕಾರಣ ಇಷ್ಟೇ 150 ವರ್ಷ ಬದುಕುವ ಕನಸು ಈ ಎಲ್ಲಾ ತಯಾರಿಗೆ ಕಾರಣವಾಗಿತ್ತು

ಕಾಲದ ತೀರ್ಮಾನದ ಮುಂದೆ ಮೈಕಲ್ 150 ವರ್ಷ ಬದುಕುವ ಕನಸ್ಸು ಕಮರಿತ್ತು 25 ಜೂನ್ 2009 ರಂದು ಮೈಕಲ್ ಜಾಕ್ಸನ್ ಎನ್ನುವ ದೈತ್ಯ ಪ್ರತಿಭೆ ತನ್ನ 50 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ

150 ವರ್ಷ ಬದುಕಲೇ ಬೇಕು ಎಂದು 25 ವರ್ಷಗಳ ತಯಾರಿ ಮಣ್ಣು ಪಾಲಾಗಿತ್ತು,12 ಜನ ವಿಶ್ವ ಪ್ರಸಿದ್ಧ ವೈದ್ಯರು ಮತ್ತು ಲಾಸ್ ಏಂಜೆಲ್ಸ್ ಕ್ಯಾಲಿಫೋರ್ನಿಯಾ ವೈದ್ಯರು ಕೈಚೆಲ್ಲಿ ಕುಳಿತಿದ್ದರು, ಆಕ್ಸಿಜನ್ ಹಾಸಿಗೆ ಕೆಲಸಕ್ಕೆ ಬರಲಿಲ್ಲ,ಲ್ಯಾಬೋರೇಟರಿನಲ್ಲಿ ಪರೀಕ್ಷೆ ಆದ ಊಟ ಹಳಸಿತ್ತು, ಅಂಗಾಂಗ ದಾನ ಮಾಡುವವರು,15 ಜನ ಅಂಗ ರಕ್ಷಕರು ಮೈಕಲ್ ಹೆಣದ ಮುಂದೆ ಬದುಕಿ ರೋದಿಸುತ್ತಿದ್ದರು.

ಈ ಸತ್ಯ ಕಥೆಯ ಸಾರಾಂಶ ಇಷ್ಟೇ ಹಣ, ಆಸ್ತಿ,ಅಂತಸ್ತು,ಅಹಂಕಾರ,ಯಾವುದು ಶಾಶ್ವತವಲ್ಲ ಮೈಕಲ್ ಸತ್ತಾಗ 2.5 ಮಿಲಿಯನ್ ಜನ live ನಲ್ಲಿ ಶವ ಸಂಸ್ಕಾರ ಮಾಡುವುದನ್ನು ನೋಡಿದರು ಕಾರಣ ಆತನ ಸಾಧನೆ ಸಾವು ಎನ್ನುವುದು ನಿಶ್ಚಿತ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ಬದುಕಿದ್ದಾಗ ಹಸಿದವರಿಗೆ ಅನ್ನ ಹಾಕು, ನಿರ್ಗತಿಕರಿಗೆ ಕೈ ಹಿಡಿ,ನೊಂದವರ ಧ್ವನಿಯಾಗು, ಸ್ವಂತ ಶಕ್ತಿ ಮೇಲೆ ಸಾಧನೆ ಮಾಡಿ ಜಗತ್ತೇ ತಿರುಗಿ ನೋಡುವಂತೆ ಮಾಡು 

ಅದೇ ನಮ್ಮ ಸಾವಿನ ನಂತರ ಉಳಿಯುವ ಶಾಶ್ವತ ಹೆಸರು.

ಹುಟ್ಟು ಸಾವಿನ ನಡುವೆ ಅಸೂಯೆ ಕೋಪ ದ್ವೇಷ ಬಿಡೋಣ.

ದಾನ,ಧರ್ಮ,ಸಹಾಯ, ಮಾನವೀಯತೆ ನಿಜವಾದ ಮನುಷತ್ವ ಅಲ್ವಾ ಎಲ್ಲರೂ ಮನುಜರಾಗಿ ಬಾಳೋಣ


Post a Comment

0Comments

Post a Comment (0)