🔴ಭಾರತದ ಪ್ರಮುಖ ಕ್ರಾಂತಿಗಳು🔴

varthajala
0

🔴ಹಸಿರು ಕ್ರಾಂತಿ

ಹಸಿರು ಕ್ರಾಂತಿ ಎಂಬ ಪದವನ್ನು ಮೊದಲಿಗೆ ಬಳಸಿದವರು ಅಮೇರಿಕಾದ ಅಭಿವೃದ್ಧಿ ಏಜೆನ್ಸಿ ಆಡಳಿತಗಾರನಾದ ವಿಲಿಯಮ್ ಎಸ್ ಗಾಡ್.

ನಾರ್ಮನ್ ಬೋರ್ಲಾಗ್ ಮೆಕ್ಸಿಕೋದಲ್ಲಿ ರಾಕ್ ಫೆಲ್ಲರ್ ಫೌಂಡೇಶನ್ ಸಂಸ್ಥೆಯ ಸಹಾಯದಿಂದ ಗೋದಿ ಬೆಳೆಯ ಮೇಲೆ ಸಂಶೋಧನೆ ಕೈಗೊಂಡು ಅತ್ಯಧಿಕ ಇಳುವರಿ ಪಡೆಯುವ ಗೋದಿ ತಳಿಯನ್ನು ಸಂಶೋಧಿಸಿದರು. ಆದ್ದರಿಂದ ಅವರನ್ನು ವಿಶ್ವದ ಹಸಿರು ಕ್ರಾಂತಿಯ ಪಿತಾಮಹ ಎನ್ನುವರು. . ಡಾ. ಎಂ.ಎಸ್ ಸ್ವಾಮಿನಾಥನ್ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹಾ ಮತ್ತು ಅರ್ಥಶಾಸ್ತ್ರೀಯ ಪರಿಸರ ಶಾಸ್ತ್ರದ ಪಿತಾಮಹಾ ಎನ್ನುತ್ತಾರೆ. 

🔴ಶ್ವೇತ ಕ್ರಾಂತಿ  (ಕ್ಷೀರ ಕ್ರಾಂತಿ)

ಶ್ವೇತ ಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸುದಾಗಿದೆ. ಈ ಕ್ರಾಂತಿಯನ್ನು ಆಪರೇಷನ್ ಫ್ಲಡ್ ಎಂದು ಸಹ ಕರೆಯುವರು. 

ವರ್ಗಿಸ್ ಕುರಿಯನ್ ಅವರನ್ನು ಭಾರತದ ಶ್ವೇತಕ್ರಾಂತಿಯ ಪಿತಾಮಹಾ ಮತ್ತು ಮಿಲ್ಕ್ ಮ್ಯಾನ್ ಆಫ್ ಇಂಡಿಯಾ ಎನ್ನುವರು.

🔴ನೀಲಿಕ್ರಾಂತಿ

ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ. ಡಾ. ಅರುಣ್ ಕೃಷ್ಣನ್ ಅವರನ್ನು ನೀಲಿ ಕ್ರಾಂತಿಯ ಪಿತಾಮಹ ಎನ್ನುವರು

🔴ಹಳದಿ ಕ್ರಾಂತಿ

ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ. 

ಸ್ಯಾಮ್ ಪಿತ್ರೋಡ ಅವರನ್ನು ಹಳದಿ ಕ್ರಾಂತಿಯ ಪಿತಾಮಹ ಎಂದು ಕರೆಯಲಾಗುತ್ತದೆ.

🔴ಕಪ್ಪುಕ್ರಾಂತಿ

ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು. 

🔴ಕೆಂಪು ಕ್ರಾಂತಿ

ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು

🔴ವೃತ್ತಕ್ರಾಂತಿ

ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು. 

🔴ಗುಲಾಬಿ ಕ್ರಾಂತಿ

ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ. ದುರ್ಗೇಶ್ ಪಟೇಲ್ ಅವರನ್ನು ಗುಲಾಬಿ ಕ್ರಾಂತಿಯ ಪಿತಾಮಹಾ ಎನ್ನಲಾಗಿದೆ.

🔴ಕಂದು ಕ್ರಾಂತಿ

ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ  (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ. 

ಹೀರಾಲಾಲ್ ಚೌಧರಿಯವರನ್ನು ಕಂದು ಕ್ರಾಂತಿಯ ಪಿತಾಮಹಾ ಎನ್ನುವರು.

🔴ಸ್ವರ್ಣ ಕ್ರಾಂತಿ

ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.  

ನಿರ್ಪಾಕ್ ಟ್ಯೂಟೇಜ್ ಅವರನ್ನು ಭಾರತದ ಸ್ವರ್ಣ ಕ್ರಾಂತಿಯ ಪಿತಾಮಹ ಎನ್ನುವರು

🔴ಸ್ವರ್ಣನಾರು ಕ್ರಾಂತಿ

ಚಿನ್ನದ ನಾರು ಕ್ರಾಂತಿಯು ಸೆಣಬು 

 ಬೆಳೆಗೆ ಸಂಬಂಧಿಸಿದಾಗಿದೆ. 1855 ರಲ್ಲಿ ಭಾರತದಲ್ಲಿ ಮೊದಲ ಸೆಣಬಿನ ಕೈಗಾರಿಕೆಯನ್ನು ಪ.ಬಂಗಾಳದ ರಿಶ್ರಾ ಎಂಬಲ್ಲಿ ಸ್ಥಾಪಿಸಲಾಯಿತು.  

ಸೆಣಬಿನ ಕೇಂದ್ರ ಕಚೇರಿಯು ಪ.ಬಂಗಾಳದ ಬ್ಯಾರಕ್ ಪುರ್ ನಲ್ಲಿದೆ. 

🔴ಬೂದು ಕ್ರಾಂತಿ

ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🔴ರಜತ ಕ್ರಾಂತಿ

ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿಕ್ರಾಂತಿ ಎಂತಲೂಕರೆಯುವರು. ಇಂದಿರಾಗಾಂದಿಯವರನ್ನು ರಜತ ಕ್ರಾಂತಿಯ ಪಿತಾಮಹಾ ಎನ್ನುವರು

🔴ಬಳ್ಳಿನಾರು (ರಜತನಾರು) ಕ್ರಾಂತಿ 

ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

Post a Comment

0Comments

Post a Comment (0)