SHRAYA GIRISH : ರಾಷ್ಟಮಟ್ಟದಲ್ಲಿ ಫಸ್ಟ್ ರ‍್ಯಾಂಕ್ - ಕರ್ನಾಟಕ ಹೆಮ್ಮೆಯ ಕುವರಿ - ಶ್ರಯ ಗಿರೀಶ್

varthajala
0

 ಪ್ರೌಡ ಶಿಕ್ಷಣದಲ್ಲಿ ಮಕ್ಕಳು ಕ್ರೀಡೆ, ಜ್ಞಾನ, ದೇಶ ಈ ಮೂರನ್ನು ತಿಳಿದುಕೊಳ್ಳುವ ಬಗ್ಗೆ ನಮ್ಮಲ್ಲಿ, ಯೋಜನೆಗಳಿಲ್ಲ. ಮಾರ್ಗದರ್ಶನ ನೀಡಬೇಕಾದಂತಹ ಪಠ್ಯಗಳಿಲ್ಲದೆ, ನಮ್ಮ ಮಕ್ಕಳು ಸರಿಯಾದ ಹಾದಿಯಲ್ಲಿ ಕ್ರಮಿಸಲು ಸಾಧ್ಯವಾಗುತ್ತಿಲ್ಲ.

ಈ ನಿಟ್ಟಿನಲ್ಲಿ ಗಾಂಧಿ ಗ್ಲೋಬಲ್ ಫ್ಯಾಮಿಲಿ ಇಟ್ಟ ದಿಟ್ಟ ಹಾಗೂ ಸಮಯೋಚಿತ ಹಾದಿ ಸ್ವಾಗತಾರ್ಹ, ಮಕ್ಕಳ ಭವಿಷ್ಯ ರೂಪಿಸುವ ಹಾದಿಯಲ್ಲಿ, ಮೂರು ದಶಕದ ಹಿಂದೆ, ಪ್ರತಿ ವರ್ಷ ಪ್ರೌಡ ಶಾಲೆಗಳಲ್ಲಿ ವೃತ್ತಿ ಮಾರ್ಗದರ್ಶನ ಸಪ್ತಾಹದ ಹೆಸರಿನಲ್ಲಿ, ಸ್ಪರ್ಧೆಗಳು ನಡೆಯುತ್ತಿದ್ದವು. ಮಕ್ಕಳಿಗೆ ಆಗ 12 ರಿಂದ 16 ರ ವಯಸ್ಸು. ಅವರ ಕಲಿಕೆ, ಅರಿವಳಿಕೆ ಹಾಗೂ ಸಾಧನೆಯ ಹಾದಿಯನ್ನು ಗುರುತಿಸಲು, ಈ ಕ್ರಿಯೇ ಅವರ ಬದುಕಿನ ಹಾದಿ ಹಾಗೂ ಕಠಿಣ ಪರಿಶ್ರಮಕ್ಕೆ ದಾರಿಯಾಗಿ, ಉಜ್ವಲ ಭವಿಷ್ಯ ಹಾಗೂ ರಾಷ್ಟç ಪ್ರೇಮ ಅವರನ್ನು ದೇಶದ ಉನ್ನತ ನಾಗರೀಕರನ್ನಾಗಿ ಸಿದ್ಧಪಡಿಸುತ್ತಿತು.

ಈ ಹಾದಿಯಲ್ಲಿ ಗಾಂಧಿ ಗ್ಲೋಬಲ್ ಫ್ಯಾಮಿಲಿ ಮುನ್ನಡೆದು, "ನಿಮ್ಮ ದೇಶವನ್ನು ತಿಳಿದುಕೊಳ್ಳಿ" ಎಂಬ ಸ್ಪರ್ಧೆಯನ್ನು ರಾಷ್ಟçಮಟ್ಟದಲ್ಲಿ ಏರ್ಪಡಿಸಿತ್ತು. ಕೊರೊನಾದ ಈ ಸಂದರ್ಭದಲ್ಲಿ ವೆಬಿನಾರ್ ಮೂಲಕ ಪ್ರೌಡ ಶಾಲಾ ಮಕ್ಕಳಿಗೆ ದೇಶಾದ್ಯಂತ ಕರೆ ನೀಡಿತ್ತು.

ದೇಶದ 1 ಸಾವಿರ ಅರ್ಹ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಪ್ರೌಡತೆ ಹಾಗೂ ತಮ್ಮ ಅರಿವನ್ನು ಸಾಧರ ಪಡಿಸುವ ಸುವರ್ಣ ಅವಕಾಶವಿದು. ಪ್ರತಿ ರಾಜ್ಯದಿಂದ ಆಯ್ಕೆ ಮಾಡಿ ಹಲವು ಸುತ್ತುಗಳಲ್ಲಿ ಸ್ಪರ್ಧೆ ನಡೆಸಲಾಯಿತು.

ದೇಶದ 6 ಪ್ರಮುಖ ವಲಯವಾರು ಸ್ಪರ್ಧೆ ಮತ್ತು ಆಯ್ಕೆ ಕಠಿಣವಾದ ರೀತಿಯಲ್ಲಿ ನಡೆಸಲಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್‌ನಿಂದ ಅರುಣಾಚಲಂರವರೆಗೆ, ಅಖಂಡ ಭಾರತದಲ್ಲಿ ನಡೆದ ಈ ಸ್ಪರ್ಧೆ, ಕನ್ನಡಿಗರು ಹೆಮ್ಮೆ ಪಡುವ ಫಲಿತಾಂಶ ನೀಡಿದೆ. ಈ ಸ್ಪರ್ಧೆಯಲ್ಲಿ 6 ಉತ್ತಮ ಗಾಂಧಿವಾದಿಗಳನ್ನು ಆಯ್ಕೆ ಮಾಡಲಾಯಿತು. ಪ್ರತಿ ಹಂತದಲ್ಲಿ ನಿಮ್ಮ ದೇಶ ತಿಳಿದುಕೊಳ್ಳಿ ಮಾರ್ಗದಲ್ಲಿ "ಸುಸ್ಥಿರ ಅಭಿವೃದ್ಧಿಯ ಗುರಿಗಳು" ಹಾಗೂ "ಬಿ ದ ಚೇಂಜ್"  ಮತ್ತು "ತಮ್ಮ ರಾಜ್ಯದ ಸಾಂಸ್ಕೃತಿಕ ಅಂಶಗಳ" ಹಾದಿಯಲ್ಲಿ ವಿಷಯ ನೀಡಿ, ಅಧ್ಯಯನ ಸಮೇತ ವಿಷಯವನ್ನು ಶಿಕ್ಷಣ ತಜ್ಞರ, ಗಣ್ಯರು, ಹಲವು ರಂಗಗಳ ಪ್ರತಿಭಾವಂತರ ಮುಂದೆ ಪ್ರಸ್ತುತ ಪಡಿಸುವ ಸವಾಲಿತ್ತು.

ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವಂತಹ ಕಠಿಣ ಟಾಸ್ಕ್ ನೀಡಲಾಗಿತ್ತು. ಈ ಬಗ್ಗೆ ದೇಶವ್ಯಾಪ್ತಿಯ ಈ ಸ್ಪರ್ಧೆಯಲ್ಲಿ, ನಮ್ಮ ಬೆಂಗಳೂರಿನ, ರಾಜಾಜಿನಗರದ ವಾಣಿ ವಿದ್ಯಾಸಂಸ್ಥೆಯ 9ನೇ ತರಗತಿಯ ಶ್ರಯ ಗಿರೀಶ್ ಮೊದಲ ರ‍್ಯಾಂಕ್ ಪಡೆದು, ಕನ್ನಡಿಗರ ಕೀರ್ತಿ ಹೆಚ್ಚಿಸಿದ್ದಾಳೆ. ಇದೊಂದು ರೀತಿ ಶಿಕ್ಷಣದಲ್ಲಿ ಓಲಂಪಿಕ್ ಸ್ಪರ್ಧೆಯಂತೆ ನಡೆಸಲಾಗಿತ್ತು.

ಈ ಗಾಂಧಿ ಗ್ಲೋಬಲ್ ಫ್ಯಾಮಿಲಿಯ ಅಧ್ಯಕ್ಷ ಗುಲಾಬ್‌ನಬಿ ಆಜಾದ್ ಈ ವೆಬಿನಾರ್ ಉದ್ಘಾಟಿಸಿದ್ದು, ಶ್ರಯ ಗಿರೀಶ್ ಹಲವು ಸುತ್ತುಗಳ ಆಯ್ಕೆಯಲ್ಲಿ ಯಶಸ್ವಿಯಾಗಿ, ಮೊದಲ ರ‍್ಯಾಂಕ್‌ಗಳಿಸಿ ಕನ್ನಡಿಗರಿಗೆ ಕೋಡುವ ಮೂಡಿಸಿದ್ದಾಳೆ.

ಮೊದಲ ನ್ಯಾಷನಲ್ ರ‍್ಯಾಂಕ್ ಪಡೆದ ಶ್ರಯ ಗಿರೀಶ್ (ಕರ್ನಾಟಕ), ಎರಡನೇ ನ್ಯಾಷನಲ್ ರ‍್ಯಾಂಕ್ ಪಡೆದ ಮುನೀರ್ ಅಹ್ಮದ್ (ಜಮ್ಮು-ಕಾಶ್ಮೀರ), ನ್ಯಾಷನಲ್ ರ‍್ಯಾಂಕ್ ಮೂರರಲ್ಲಿ ವಿಧಿ ಪರೇಖ (ಗುಜುರಾತ್) ಇವರುಗಳು ರ‍್ಯಾಂಕ್ ಪಡೆದಿದ್ದಾರೆ. 

ಅಂತಿಮವಾದದಲ್ಲಿ ಸಾವಿರಾರು ಗಣ್ಯರ ಮುಂದೆ, ಮಾತನಾಡುವ ಟಾಸ್ಕ್ನಲ್ಲಿ ದೇಶದ ಅತ್ಯುತ್ತಮ ಗಣ್ಯರನ್ನು ಉದ್ದೇಶಿಸಿ ಮಾತನಾಡುವ ಮೂಲಕ, ಶ್ರಯ ಗಿರೀಶ್ ದೇಶದ ಮಕ್ಕಳಿಗೆ ಮಾದರಿಯಾಗಿದ್ದಾಳೆ. ಅವಳು ನೀಡಿದ ಕಾರ್ಯಕ್ಷಮತೆ, ವಿಷಯದ ಗಟ್ಟಿತನ ಮತ್ತು ಶೈಲಿ ಅವಳಿಗೆ ಪ್ರಥಮ ರ‍್ಯಾಂಕ್ ಬರುವಲ್ಲಿ ಸಹಕಾರಿಯಾದವು.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪ್ರತಿಕಾಗೋಷ್ಗಠಿಯಲ್ಲಿ ಈ ಗಾಂಧಿ ಗ್ಲೋಬಲ್ ಫ್ಯಾಮಿಲಿ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು ಈ ವಿಷಯವನ್ನು ತಿಳಿಸಿದರು. ಇವರು ರಾಜಾನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಕೂಡಾ. ತಮ್ಮ ಕ್ಷೇತ್ರದ ಈ ಬಾಲೆಯ ಸಾಧನೆಯ ಬಗ್ಗೆ ಹಮ್ಮೆಯಿಂದ ವಿವರಿಸಿ, ನಾಡಿನ ಲಕ್ಷಾಂತರ ಮಕ್ಕಳಿಗೆ ಶ್ರಯ ಗಿರೀಶ್ ಪ್ರೇರಕರಾಗಿದ್ದಾರೆಂದು ಪ್ರಶಂಸಿದರು.

ಇನ್ನೇಕೆ ತಡ ಮಕ್ಕಳೆ.. ಮುಂದಿನ ವರ್ಷದ ಸ್ಪರ್ಧೆಗೆ ಸಿದ್ಧರಾಗಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. ನೆ.ಲ. ನರೇಂದ್ರಬಾಬು, ಅಧ್ಯಕ್ಷರು, ಗಾಂಧಿ ಗ್ಲೋಬಲ್ ಫ್ಯಾಮಿಲಿ, ರಾಜ್ಯ ವಿಭಾಗ ಹಾಗೂ ಮಾಜಿ ಶಾಸಕರು, ಚಿತ್ರನಟರು, ಹಾಲಿ ಹಿಂದುಳಿದ ವರ್ಗಗಳ ಮೋರ್ಚಾ, ಭಾಜಪ ಅಧ್ಯಕ್ಷರು. ಸಂಪರ್ಕಿಸುವ ಸಂಖ್ಯೆ : 9845186676 / 8660156673



Tags

Post a Comment

0Comments

Post a Comment (0)