ಟಿವಿಎಸ್ ಮೋಟರ್ ಕಂಪನಿಯಿ0ದ ‘ದ ಸೈಲೆಂಟ್ ರೆವೊಲ್ಯೂಷನ್' ದ ಜರ್ನಿ ಆಫ್ ದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್' ಕೃತಿ ಬಿಡುಗಡೆ

varthajala
0

ಗ್ರಾಮೀಣಾಭಿವೃದ್ಧಿಯಲ್ಲಿ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ನ 25 ವರ್ಷದ ಸೇವೆಯ ವಿವರ ಒಳಗೊಂಡ ಪುಸ್ತಕವಿದು

·   ಪುಸ್ತಕವನ್ನು ಶ್ರೀಮತಿ ಸ್ನಿಗ್ಧ ಪರುಪುಡಿ ರಚಿಸಿದ್ದು, ಹಾರ್ಪರ್ ಕಾಲಿನ್ಸ್ ಇಂಡಿಯಾದಿAದ ಪ್ರಕಾಶನ ಮಾಡಿದೆ.

·   ಗೌರವಾನ್ವಿತ ಎಂ.ಕೆ.ಸ್ಟಾಲಿನ್, ಮುಖ್ಯಮಂತ್ರಿ, ತಮಿಳುನಾಡು ಅವರಿಂದ ಬಿಡುಗಡೆ.

ಚೆನ್ನೆ, ಸೆಪ್ಟೆಂಬರ್ 22, 2021: ಸುಂದರ0 ಕ್ಲೇಟನ್ ಲಿಮಿಟೆಡ್ ಮತ್ತು ಟಿವಿಎಸ್ ಮೋಟರ್ ಕಂಪನಿಯು ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ (ಎಸ್‌ಎಸ್‌ಟಿ) `ಎ ಸೈಲಂಟ್ ರೆವೊಲ್ಯೂಷನ್ - ದ ಜರ್ನಿ ಆಫ್ ದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್' ಪುಸ್ತಕದ ಪ್ರಕಟಣೆಯನ್ನು ಇಂದು ಪ್ರಕಟಿಸಿತು.

ಕೃತಿಯನ್ನು ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಿಸಿದ್ದು, ಶ್ರೀಮತಿ ಸ್ನಿಗ್ಧ ಪಾರುಪುಡಿ ಅವರು ರಚಿಸಿದ್ದಾರೆ. ಸ್ವಾವಲಂಬಿ ಮತ್ತು ಸಬಲೀಕರಣ ಕಾರ್ಯಗಳ ಮೂಲಕ ಜೀವನಶೈಲಿಯನ್ನು ಬದಲಿಸಿಕೊಂಡು ಗ್ರಾಮೀಣ ಜನರ ಯಶೋಗಾಥೆಯು ಈ ಕೃತಿಯಲ್ಲಿದೆ. ಕೃತಿಯನ್ನು ತಮಿಳುನಾಡಿನ ಮುಖ್ಯಮಂತ್ರಿ ಗೌರವಾನ್ವಿತ ಎಂ.ಕೆ. ಸ್ಟಾಲಿನ್ ಅವರು ಬಿಡುಗಡೆ ಮಾಡಿದರು. ಮುಖ್ಯಮಂತ್ರಿಯವರಿಗೆ ಮೊದಲ ಪ್ರತಿಯನ್ನು ಇದೇ ಸಂದರ್ಭದಲ್ಲಿ ಶ್ರೀ ವೇಣು ಶ್ರೀನಿವಾಸನ್ ರವರು ನೀಡಿದರು.

`ಎ ಸೈಲಂಟ್ ರೆವೊಲ್ಯೂಷನ್ - ದ ಜರ್ನಿ ಆಫ್ ದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್' ಕೃತಿಯು ಓದುಗರಿಗೆ ಗ್ರಾಮೀಣ ಸಮುದಾಯದ ಬದುಕು, ಜೀವನಶೈಲಿ ಬದಲಾದ ಸಾಧನೆಯನ್ನು ವಿವರಿಸಲಿದೆ. ಎಸ್‌ಎಸ್‌ಟಿ ಹೇಗೆ ನಿರಂತರವಾಗಿ ಕಾರ್ಯ ನಿರ್ವಹಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಬದಲಿಸಲು ಒತ್ತು ನೀಡಿದೆ ಎಂಬುದನ್ನು ತಿಳಿಸಲಿದೆ. ಈ ಕೃತಿಯು ಟ್ರಸ್ಟ್ ಒಟ್ಟಾರೆಯಾಗಿ ಆರ್ಥಿಕಾಭಿವೃದ್ಧಿ, ಪರಿಸರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿ, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದ, ಹೇಗೆ ಗ್ರಾಮೀಣ ಜನರ ಜೀವನಶೈಲಿಯನ್ನ ಉತ್ತಮಪಡಿಸಿತು ಎಂಬುದನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಟಿವಿಎಸ್ ಮೋಟರ್ ಕಂಪನಿಯ ಅಧ್ಯಕ್ಷರಾದ ಶ್ರೀ ವೇಣು ಶ್ರೀನಿವಾಸನ್ ಅವರು, 25 ವರ್ಷದ ಹಿಂದೆ ನಾವು ಎಸ್‌ಎಸ್‌ಟಿ ಅನ್ನು ಸ್ಥಾಪನೆ ಮಾಡಿದಾಗ ಸಾಮಾಜಿಕ ಪರಿವರ್ತನೆ ಕಾರ್ಯ ಹೇಗೆ ಆಗಲಿದೆ ಎಂಬುದರ ಕಲ್ಪನೆ ಇರಲಿಲ್ಲ. ಸಮೂಹದ ಮೌಲ್ಯಗಳನ್ನು ಕಾಯ್ದುಕೊಳ್ಳುವುದು, ಮೌಲ್ಯ ವೃದ್ಧಿ ಮತ್ತು ಸಮುದಾಯದ ಸೇವೆ ಸಲ್ಲಿಸುವುದೇ ಉದ್ದೇಶವಾಗಿತ್ತು.

ನಾವು ಸುಸ್ಥಿರಾಭಿವೃದ್ಧಿಗೆ ಒತ್ತು ನೀಡುತ್ತಿದ್ದೆವು. ಈ ಕೃತಿಯು ಶ್ರೀನಿವಾಸನ್ ಸರ್ವೀಸಸ್ ಟ್ರಸ್ ಹೇಗೆ ಸಮುದಾಯದ ಅಭಿವೃದ್ಧಿಯಲ್ಲಿ ನಮ್ಮ ಅಭ್ಯುದಯ, ವಿಶ್ವಾಸವನ್ನು ಉತ್ತಮಪಡಿಸಿತು ಎಂಬುದನ್ನು ನಿರೂಪಿಸಲಿದೆ. ಈ ಸಾಮಾಜಿಕ, ಆರ್ಥಿಕ ಸ್ಥಿತ್ಯಂತರವನ್ನು ದಾಖಲಿಸಿದ ಶ್ರೀಮತಿ ಸ್ನಿಗ್ಧ ಪರುಪುಡಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಟಿವಿಎಸ್ ಮೋಟರ್ ಕಂಪನಿ ಹಾಗೂ ಸ್ಥಾಪಕರ ಧ್ಯೇಯವನ್ನು ಸ್ಮರಿಸಿದ ಅವರು ಈ ಪುಸ್ತಕವು ಎಸ್‌ಎಸ್‌ಟಿ ಸಂಸ್ಥೆಯ ತಾಳ್ಮೆ ಮತ್ತು ಪ್ರಗತಿಯ ಚಿಂತನೆಯನ್ನು ಬಿಂಬಿಸಲಿದೆ. ಗ್ರಾಮೀಣಾಭಿವೃದ್ಧಿಯ ಜೊತೆಗೆ ಜನರ ಸ್ವಾವಲಂಬಿ ಬದುಕಿಗೆ ಹೇಗೆ ಒತ್ತು ನೀಡಲಾಯಿತು ಎಂಬುದನ್ನು ತಿಳಿಸಲಿದೆ. ಕೃತಿಕಾರರು ಫಲಾನುಭವಿಗಳ ಅಭಿಪ್ರಾಯಗಳು, ಎಸ್‌ಎಸ್‌ಟಿಯ ಸಿಬ್ಬಂದಿಯ ಅನಿಸಿಕೆಗಳನ್ನು ಪಡೆದು ಒಟ್ಟಾರೆಯಾಗಿ ಆಗಿರುವ ಪ್ರಗತಿಯ ಬದಲಾವಣೆಯನ್ನು ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಶ್ರೀ ವೇಣು ಶ್ರೀನಿವಾಸನ್ ಅವರು ಮುಂದುವರಿದು, ಸಣ್ಣ ಹನಿಗಳು ಒಟ್ಟುಗೂಡಿ ಬೃಹತ್ ನದಿಯಾಗಿ ಹರಿಯುವಂತೆ, ಇದು ಕೇವಲ ಎಸ್‌ಎಸ್‌ಟಿ ಜೊತೆಗೆ ಕೆಲಸ ಮಾಡುತ್ತಿರುವ ನೂರಾರು ಜನರ ಶ್ರಮವಷ್ಟೇ ಅಲ್ಲ, ಗ್ರಾಮಗಳಲ್ಲಿ ಇರುವ ಸಾವಿರಾರು ಜನರು ಸಕ್ರಿಯವಾಗಿ ಪಾಲ್ಗೊಂಡ ಪರಿಣಾಮ ಈ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗಿದೆ. ನಾವು ಇನ್ನಷ್ಟು ಗ್ರಾಮಗಳಿಗೆ ಸೇವೆಯನ್ನು ವಿಸ್ತರಿಸಿದಂತೆ, ನಮ್ಮ ಕಾರ್ಯಸೇವೆಯು ಇತರೆ ಸಮುದಾಯಗಳಿಗೂ ಹೇಗೆ ಪ್ರೇರೇಪಣೆಯಾಗಿದೆ ಹಾಗೂ ಸುಸ್ಥಿರಾಭಿವೃದ್ಧಿ ಬದಲಾವಣೆಯು ಅರ್ಹರಿಗೆ ಹೇಗೆ ತಲುಪಲು ನೆರವಾಗಲು ಸಾಧ್ಯವಾಗಲಿದೆ ಎಂದು ಆಶಿಸುತ್ತೇನೆ ಎಂದು ಹೇಳಿದರು.

ಲೇಖಕಿ ಶ್ರೀಮತಿ ಸ್ನಿಗ್ಧ ಪರುಪುಡಿ ಅವರು, `ಎ ಸೈಲಂಟ್ ರೆವೂಲೇಷನ್ - ದ ಜರ್ನಿ ಆಫ್ ದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್' ಕೃತಿಯ ರಚನೆ ಸಂದರ್ಭದಲ್ಲಿ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ ಹೇಗೆ ಮೌನವಾಗಿ ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ ಎಂಬುದನ್ನು ತೋರಿಸಲಿದೆ. ಎಸ್‌ಎಸ್‌ಟಿ ಸಿಬ್ಬಂದಿ ಹಾಗೂ ಅವರು ಕೆಲಸ ಮಾಡಿದ ಸಮುದಾಯದ ಜೊತೆಗೂಡಿ ಕೆಲಸ ಮಾಡಿದ್ದು ನನಗೆ ದೊರೆತ ಸದವಕಾಶ. ಅವರು ಮೌನವಾಗಿ, ಅರ್ಥವಾಗುವ ರೀತಿಯಲ್ಲಿ ಸಾಧನೆ ಮಾಡಿದ್ದು, ಇದು ಯಾವುದೇ ಕ್ರಾಂತಿಗೂ ಕಡಿಮೆಯಲ್ಲ. ಇಂದು, ಎಲ್ಲದಕ್ಕಿಂತಲೂ ಹೆಚ್ಚಾಗಿ ಸಮಾಜದಲ್ಲಿ ಇಂತಹ ಕೆಲಸಗಳು ಹೆಚ್ಚಿನ ರೀತಿಯಲ್ಲಿ ಆಗಬೇಕಾಗಿದೆ ಎಂದರು.

ಎಸ್‌ಎಸ್‌ಟಿ ಮಾದರಿ, ಸಮುದಾಯದಲ್ಲಿ ಗಣನೀಯ ಬದಲಾವಣೆ ತರುವುದು ಭಾರತದಲ್ಲಿ ಗ್ರಾಮೀಣ ಜನರ ಬದಲಾವಣೆಯನ್ನು ತರಲಿದೆ. ಈ ಸಮುದಾಯವು ಹಲವು ದಶಕಗಳಿಂದ ಆರ್ಥಿಕ ಅಭಿವೃದ್ಧಿಯಿಂದ ಹಿಂದುಳಿದಿದೆ. ಈ ಪುಸ್ತಕವು ಕಾರ್ಪೊರೇಟ್ ಸಾಮಾಜಿಕ ಬದಲಾವಣೆಯ ಅಗತ್ಯ ಹೆಚ್ಚಿರುವ ಸಂದರ್ಭದಲ್ಲಿ ಹೊರಬಂದಿದೆ. ಇದು, ಹೇಗೆ ಒಂದು ವ್ಯವಸ್ಥಿತ ಕಾರ್ಯಕ್ರಮ ಜೀವನಶೈಲಿಯಲ್ಲಿ ಗಣನೀಯವಾಗಿ ಬದಲಾವಣೆ ತರಲಿದೆ ಎಂಬುದನ್ನು ಬಿಂಬಿಸಲಿದೆ. ಈ ಪುಸ್ತಕವು ಅಮೇಜಾನ್‌ನ ಲಿಂಕ್‌ನಲ್ಲಿ ಲಭ್ಯವಿದೆ

ಲೇಖಕಿಯ ಪರಿಚಯ:

ಶ್ರೀಮತಿ ಸ್ನಿಗ್ಧ ಪರುಪುಡಿ ಅವರು ಪಶ್ಚಿಮ ಕೆನಡಾ ಮತ್ತು ದಕ್ಷಿಣ ಭಾರತದಲ್ಲಿ ಬೆಳೆದವರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪುರಸ್ಕೃತರಾದ ಅವರು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರು ಅಸಮಾನತೆ, ಸ್ಥಳಾಂತರ, ನಗರ ಜೀವನ ಮತ್ತು ಇವುಗಳ ಪರಿಣಾಮ ಮಹಿಳೆಯ ಮೇಲೆ ಆಗುತ್ತಿರುವ ಕುರಿತು ಆಸಕ್ತಿಯನ್ನು ಹೊಂದಿದ್ದಾರೆ. ಅವರ ಬರಹಗಳು, ಪರಬೊಲಾ, ನ್ಯಾಷನಲ್ ಜಿಯೊಗ್ರಾಫಿಕ್ ಟ್ರಾವೆಲ್ಲರ್, ಓಪನ್ ಮ್ಯಾಗಜೈನ್, ವಿವಿಧ ದೈನಿಕಗಳಲ್ಲಿ ಪ್ರಕಟವಾಗಿದೆ. ಸ್ನಿಗ್ಧ ಅವರು ಚೆನ್ನೆöÊನಲ್ಲಿ ಪತಿಯೊಂದಿಗೆ ವಾಸವಿದ್ದಾರೆ. ಇದು ಅವರ ಮೊದಲ ಕೃತಿ.

ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ ಕುರಿತು:

TVS Motor Company releases ‘A Silent Revolution’, a book to mark 25 years of SST’s work in rural development
ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ (ಎಸ್‌ಎಸ್‌ಟಿ), ಲಾಭದ ಉದ್ದೇಶವಿಲ್ಲದ, ಸರ್ಕಾರೇತರ ಸಂಸ್ಥೆಯಾಗಿದ್ದು, ಸುಂದರA ಕ್ಲೇಟನ್ ಲಿಮಿಟೆಡ್ ಮತ್ತು ಟಿವಿಎಸ್ ಮೋಟರ್ ಕಂಪನಿ ಲಿಮಿಟೆಡ್ ಇದನ್ನು ಸ್ಥಾಪಿಸಿದೆ. ಇದು, ಗ್ರಾಮೀಣಾಭಿವೃದ್ಧಿ ಚಟುವಟಿಕೆಯಲ್ಲಿ 1996ರಿಂದ ಕಾರ್ಯನಿರ್ವಹಿಸುತ್ತಿದೆ. ಎಸ್‌ಎಸ್‌ಟಿ ಸಂಸ್ಥೆಯು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟçದ ಸಾವಿರಾರು ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಸ್‌ಎಸ್‌ಟಿ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ನಿರ್ಣಾಯಕವಾದ ಆರ್ಥಿಕಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಪರಿಸರ ಹಾಗೂ ಸಾಮಾಜಿಕ ಮತ್ತು ಆರ್ಥಿಕಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.

Post a Comment

0Comments

Post a Comment (0)