1ನೇ ತರಗತಿ ಪ್ರಾರಂಭಕ್ಕೂ ಒತ್ತಾಯ

varthajala
0

ಬೆಂಗಳೂರು, ಸೆ. 05: 6-9-2021 ರ ಸೋಮವಾರದಿಂದ 6ರಿಂದ 8ನೇ ತರಗತಿಗಳೂ (6th to 8th standard schools) ಪ್ರಾರಂಭವಾಗುತ್ತಿವೆ. ಈಗಾಗಲೇ 9 ಹಾಗು ಮೇಲ್ಪಟ್ಟ ತರಗತಿಗಳು ನಡೆಯುತ್ತಿವೆ. 



ಈಗಾಗಲೇ ಚಾಲನೆಯಲ್ಲಿರುವ ಶಾಲಾ ಮತ್ತು ಕಾಲೇಜು ಮಕ್ಕಳಲ್ಲಿ ಕೋವಿಡ್​ನಿಂದ ಅಪಾಯಕಾರಿ ಪರಿಸ್ಥಿತಿ ಉದ್ಭವಿಸಿರುವುದು ಕಂಡುಬರದ ಹಿನ್ನೆಲೆಯಲ್ಲಿ 6-8ನೇ ತರಗತಿಯವರೆಗಿನ ಶಾಲೆಗಳನ್ನ ಪ್ರಾರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ (Positivity rate less than 2%) ಇರುವ ಕಡೆ ಶಾಲೆಗಳನ್ನ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇರಳದ ಗಡಿಭಾಗದ ತಾಲೂಕುಗಳನ್ನ ಹೊರತುಪಡಿಸಿ ರಾಜ್ಯ ಉಳಿದ ಕಡೆ ನಾಳೆ ಆರು ಮೇಲ್ಪಟ್ಟು ತರಗತಿಗಳನ್ನ ಆರಂಭಿಸಲಾಗುತ್ತಿದೆ.

ಆರರಿಂದ ಎಂಟನೇ ತರಗತಿ ಶಾಲೆ ಆರಂಭಿಸಲು ಕೊರೋನಾ ಮಾರ್ಗಸೂಚಿಗಳನ್ನ ಅನುಸರಿಸಲಾಗುತ್ತದೆ. ಶಾಲೆಯ ಆವರಣ, ಕೊಠಡಿ, ಪ್ರಯೋಗಾಲಯ ಇತ್ಯಾದಿ ಜಾಗಗಳನ್ನ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವುದು; ಮಕ್ಕಳ ಭೌತಿಕ ತರಗತಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಪಡಿಸುವುದು; ಪ್ರತೀ ತರಗತಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಗರಿಷ್ಠ 20 ಮಕ್ಕಳು ಇರುವ ತಂಡಗಳನ್ನ ರಚಿಸುವುದು ಇತ್ಯಾದಿ ಅಂಶಗಳನ್ನ ಶಾಲೆಗಳು ಪಾಲಿಸುವುದು ಕಡ್ಡಾಯ. ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತದೆ. ಬೆಂಚ್​ನಲ್ಲಿ ಮಕ್ಕಳು ದೂರ ದೂರ ಕೂರುವುದು ಇತ್ಯಾದಿ ವಿಷಯಗಳನ್ನ ಹೆಚ್ಚು ಗಮನ ಕೊಡಲು ಸೂಚಿಸಲಾಗಿದೆ.

ನಾಳೆ ಆರರಿಂದ ಎಂಟನೇ ತರಗತಿ ಪ್ರಾರಂಭಕ್ಕೆ ಸಿದ್ಧತೆ ನಡೆದಿರುವಾಗಲೇ ಒಂದರಿಂದ ಐದನೇ ತರಗತಿ ಪ್ರಾರಂಭಕ್ಕೂ ಒತ್ತಾಯ ಕೇಳಿಬರುತ್ತಿದೆ. ಈ ಸಂಬಂಧ ಖಾಸಗಿ ಶಾಲೆಗಳ ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಾಲೆ ಪ್ರಾರಂಭಿಸುವಂತೆ ಪೋಷಕರಿಂದಲೇ ಮನವಿ ಬರುತ್ತಿದೆ. ಒಂದರಿಂದ ಐದನೇ ತರಗತಿ ಶಾಲೆಗಳನ್ನ ಪ್ರಾರಂಭಿಸಿದರೆ ಮಕ್ಕಳನ್ನ ತಾವೇ ತಂದು ಬಿಟ್ಟು ಹೋಗುತ್ತೇವೆ ಎಂದು ಪೋಷಕರು ಹೇಳುತ್ತಿದ್ಧಾರೆ. ಹೀಗಾಗಿ, ಈ ತರಗತಿಗಳ ಶಾಲೆಗಳನ್ನೂ ಪ್ರಾರಂಭಿಸುವಂತೆ ರುಪ್ಸಾ ಸಂಘಟನೆಯು ತನ್ನ ಮನವಿ ಪತ್ರದಲ್ಲಿ ತಿಳಿಸಿದೆ.

Tags

Post a Comment

0Comments

Post a Comment (0)