ಉತ್ತಮ ಗುಣಮಟ್ಟವುಳ್ಳ ಅರ್ಹ ಶಿಕ್ಷಕರನ್ನು ನೇಮಿಸುವ ದೃಷ್ಠಿಯಿಂದ NCTE ನಿಯಮಗಳಂತೆ ಶಿಕ್ಷಕರ ನೇಮಕ - ಸಚಿವ ಬಿ.ಸಿ. ನಾಗೇಶ್

varthajala
0

ಬೆಂಗಳೂರು, ಸೆಪ್ಟೆಂಬರ್ 17, (ಕರ್ನಾಟಕ ವಾರ್ತೆ) ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ ಹಾಗೂ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕಾರ್ಯದ ಆಗಾಧತೆಯ ಹೊರತಾಗಿಯೂ ಉತ್ತಮ ಗುಣಮಟ್ಟವುಳ್ಳ ಅರ್ಹ ಶಿಕ್ಷಕರನ್ನು ನೇಮಿಸುವುದು ಅಪೇಕ್ಷಣೀಯವಾಗಿದೆ ಎಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ವಿಧಾನಪರಿಷತ್ ಕಲಾಪದ ವೇಳೆ ವಿಧಾನಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಅವರು ಶೂನ್ಯವೇಳೆ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು ಶಿಕ್ಷಕರಾಗಿ ನೇಮಕವಾಗುವ ವ್ಯಕ್ತಿಗಳು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಬೋಧನೆಯ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯ ಹಾಗೂ ಅಗತ್ಯ ಸಾಮಥ್ರ್ಯ ಹೊಂದಿರುವುದುದನ್ನು ಖಾತ್ರಿಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಕರ ಅಂಗೀಕರಣ ಪರಿಷತ್ತು  (National Council for teacher Education - NCTE)    ರೂಪಿಸಿರುವ ನಿಯಮಾವಳಿಗಳು, ಮಾನದಂಡಗಳನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯು 2014ರಿಂದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯುತ್ತಿದೆ.  NCTE  ನಿಯಮಗಳಂತೆ, ಸದರಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಗಳಿಸಲು ಸಾಮಾನ್ಯ 2A, 2B, 3A, 3B ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಶೇಕಡ 60 ಅಥವಾ ಶೇಕಡ 60ಕ್ಕಿಂತ ಹೆಚ್ಚು ಅಂಕ ಹಾಗೂ ಎಸ್.ಸಿ / ಎಸ್.ಟಿ / ಪ್ರವರ್ಗ – 1 ಹಾಗೂ ವಿಕಲಚೇತನ ಅಭ್ಯರ್ಥಿಗಳು ಕನಿಷ್ಟ ಶೇಕಡ 55 ರಷ್ಟು ಅಂಕ ಗಳಿಸಬೇಕು.
ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಇಲಾಖೆಯು ಕಾಲಕಾಲಕ್ಕೆ ನಡೆಸುತ್ತಾ ಬಂದಿದ್ದು, ಪ್ರಸ್ತುತÀ 2021ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕೆಯನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ. ಅರ್ಹತಾ ಪರೀಕ್ಷೆಯು ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು, ಪರೀಕ್ಷೆಯಲ್ಲಿ ಈ ಹಿಂದಿನ ಸಾಲುಗಳಿಗೆ ಹೋಲಿಸಿದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಪರೀಕ್ಷೆಯ ಫಲಿತಾಂಶವು ಪರೀಕ್ಷೆಗೆ ನೊಂದಾಯಿಸಿಕೊಳ್ಳುವ ಅಭ್ಯರ್ಥಿಗಳ ನಿರಂತರ ಆಧ್ಯಯನ, ಪರಿಶ್ರಮ, ಅನ್ವಯಿಕ ಸಾಮಥ್ರ್ಯ ಇತ್ಯಾದಿಗಳನ್ನು ಆಧರಿಸಿರುತ್ತದೆ. ಅಭ್ಯರ್ಥಿಗಳಿಗೆ ಅನುಕೂಲ ಮಾಡುವ ದೃಷ್ಠಿಯಿಂದ ಪಠ್ಯಕ್ರಮ, ಪಠ್ಯವಸ್ತು ಹಾಗೂ ಪರಾಮರ್ಶನ ಗ್ರಂಥಗಳ  (Reference Books ಮಾಹಿತಿಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ನೀಡಲಾಗಿದೆ.
ಒಂದನೇ ತರಗತಿಯಿಂದ 5ನೇ ತರಗತಿ ಬೋಧಿಸುವ ಶಿಕ್ಷಕರಿಗೆ 1ರಿಂದ 8ನೇ ತರಗತಿಗಳ ಪಠ್ಯಗಳನ್ನಾಧರಿಸಿ, ಎಸ್.ಎಸ್.ಎಲ್.ಸಿ. ಮಟ್ಟದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಾಗೂ 6ನೇ ತರಗತಿಯಿಂದ 8ನೇ ತರಗತಿ ಬೋಧಿಸುವ ಶಿಕ್ಷಕರಿಗೆ  1 ರಿಂದ 10ನೇ ತರಗತಿಗಳ ಪಠ್ಯಪುಸ್ತಕಗಳನ್ನಾಧರಿಸಿ ಪಿ.ಯು.ಸಿ. ಮಟ್ಟದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮಕ್ಕಳಿಗೆ ಬೋಧಿಸಲು ಅವಶ್ಯವಿರುವ ಬೋಧನಾ ವಿಧಾನದ ಬಗ್ಗೆ ಮಾತ್ರ ಪ್ರಶ್ನೆಗಳು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಆರ್.ಟಿ.ಇ ಕಾಯ್ದೆ – 2009ರ ಪ್ರಕಾರ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತದಲ್ಲಿ ಬೋಧನೆಯ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯ ಹಾಗೂ ಅಗತ್ಯ ಬೋಧನಾ ಸಾಮಥ್ರ್ಯವನ್ನು ಹೊಂದಿರುವ ಉತ್ತಮ ಗುಣಮಟ್ಟವುಳ್ಳ ಅರ್ಹ ಶಿಕ್ಷಕರನ್ನು ನೇಮಿಸುವ ದೃಷ್ಠಿಯಿಂದ  NCTE ನಿಯಮಗಳಂತೆ 6 ರಿಂದ 8ನೇ ತರಗತಿ ಬೋಧಿಸಲು ಆಯ್ಕೆಯಾಗುವ ಶಿಕ್ಷಕರು ಬೋಧನಾ ವಿಷಯದಲ್ಲಿ ಶೇಕಡ 50 ಅಂಕಗಳನ್ನು ಕಟ್ಟಾಯವಾಗಿ ಗಳಿಸಿರಬೇಕು ಎಂಬ ನಿಯಮ ಜಾರಿಯಲ್ಲಿದ್ದು, ಅದರಂತೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
Tags

Post a Comment

0Comments

Post a Comment (0)