AISSEE ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

varthajala
0

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (NTA)  ಶಿಕ್ಷಣ ಸಚಿವಾಲಯ, ಭಾರತ ಸರ್ಕಾರದಡಿ ಸ್ಥಾಪನೆಯಾಗಿದ್ದು ಸ್ವಾತಂತ್ರ್ಯ / ಸ್ವಾಯತ್ತ, ಸ್ವಾವಲಂಬಿ ಹಾಗೂ ಸ್ವಯಂನಿರಂತರ ಸರ್ವಶ್ರೇಷ್ಠ ಪರೀಕ್ಷಾ ಸಂಸ್ಥೆಯಾಗಿದ್ದು, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (NTA)  2022-23 ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿ ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ  AISSEE  - 2022 ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಿದೆ.


ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆಯ ದಿನಾಂಕವಾಗಿದೆ. ಪರೀಕ್ಷೆಯನ್ನು ಜನವರಿ 9, 2022 ಕ್ಕೆ ನಿಗಧಿಪಡಿಸಲಾಗಿದೆ. ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಮೂನೆಯು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.  6ನೇ ತರಗತಿಗೆ ಅರ್ಹತೆ ಶೈಕ್ಷಣಿಕ ಪ್ರವೇಶಕ್ಕೆ ಅಭ್ಯರ್ಥಿಗಳು 31-03-2022 ರಂತೆ 10 ಮತ್ತು 12 ವರ್ಷಗಳ ಅಂದರೆ ಅಭ್ಯರ್ಥಿ 01 ಏಪ್ರಿಲ್ 2010 ಮತ್ತು 31 ಮಾರ್ಚ್ 2012 ರ ನಡುವೆ ಜನಿಸಿರಬೇಕು. ಪರೀಕ್ಷಾ ಶುಲ್ಕ ಎಸ್/ಎಸ್‍ಟಿ ಅಭ್ಯರ್ಥಿಗಳಿಗೆ ರೂ.400/-, ಸಾಮಾನ್ಯ/ ಒಬಿಸಿ-ಎನ್‍ಸಿಎಲ್/ ಡಿಇಎಫ್ ಅಭ್ಯರ್ಥಿಗಳಿಗೆ ರೂ.550/-, ನಿಗಧಿಪಡಿಸಲಾಗಿದೆ.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ/ ಮಾಧ್ಯಮ/ ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಘೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ನಗರಗಳು/ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕಗಳಿಗಾಗಿ ವೆಬ್‍ಸೈಟ್  www.nta.ac.in     ನ್ನು ಸಂಪರ್ಕಿಸಬಹುದಾಗಿದೆ.
AISSEE    ಪರೀಕ್ಷೆಗಾಗಿ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ವೆಬ್‍ಸೈಟ್ https://aissee.nta.nic.in  ನಲ್ಲಿ ಅರ್ಜಿ ಸಲ್ಲಿಸಬೇಕು. ಸೂಚನೆ: 2022-23ನೇ ಸಾಳಿನ ಶೈಕ್ಷಣಿಕ ವರ್ಷಕ್ಕೆ ಸೈನಿಕ ಶಾಲೆ ಕೊಡಗಿನಲ್ಲಿ 9ನೇ ತರಗತಿಗೆ ಸೀಟ್ ಖಾಲಿ ಇಲ್ಲದ ಕಾರಣ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)