BALABHAVAN BENGALURU : ಬಾಲ ಭವನ ಸೊಸೈಟಿ - ಕಲಾ ಬೋಧಕರಿಂದ ಅರ್ಜಿ ಆಹ್ವಾನ

varthajala
0
ಬೆಂಗಳೂರು, ಅಕ್ಟೋಬರ್ 04, (ಕರ್ನಾಟಕ ವಾರ್ತೆ) : ಬೆಂಗಳೂರು ನಗರದಲ್ಲಿರುವ ಕೇಂದ್ರ ಬಾಲ ಭವನ, ಕಬ್ಬನ್ ಪಾರ್ಕ್ ಹಾಗೂ ಮಿನಿ ಬಾಲ ಭವನಗಳಾದ ಹೆಚ್.ಎಸ್.ಆರ್ ಲೇಔಟ್ - ಹೆಚ್.ಎಸ್.ಆರ್. ಬಡಾವಣೆಯ 4ನೇ ಸೆಕ್ಟರ್(ಹೊಸೂರು ಸರ್ಜಾಪುರ ರಸ್ತೆ), ರಾಜಾಜಿನಗೆ – ಮರಿಯಪ್ಪನ ಪಾಳ್ಯ, ಗಾಯತ್ರಿ ದೇವಿ ಪಾರ್ಕ್, ವರಲಕ್ಷ್ಮೀ ನರ್ಸಿಂಗ್ ಹೊಂ ಎದರು, ಕೋಲ್ಸ್ ಪಾರ್ಕ್ - ಬೆಂಗಳೂರು, ಜೀವನಭೀಮಾನಗರ – 1ನೇ ಡಿ.ಓ.ಎಸ್. ಕಾಲೋನಿ, ಬೆಂಗಳೂರು ಬಾಲಭವನಗಳಲ್ಲಿ ಅಕ್ಟೋಬರ್ – 2021ರ ಮಾಹೆಯಿಂದ ಜನವರಿ – 2022ರ ಮಾಹೆಯವರೆಗೆ 5-16 ವರ್ಷದ ಮಕ್ಕಳಿಗೆ ವಾರಾಂತ್ಯದಲ್ಲಿ ಚಟುವಟಿಕೆಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ.
ಚಟುವಟಿಕೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತಿ ನೀಡಲು ನುರಿತ ಅನುಭವಿ ಕಲಾಬೋಧಕರ ಅವಶ್ಯಕತೆ ಇದ್ದು, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲಕಲೆ ಜೇಡಿ ಮಣ್ಣಿನ ಕಲೆ ಯೋಗ, ಕರಾಟೆ, ರಂಗತರಬೇತಿ, ಸಮೂಹಗೀತೆ ಮತ್ತು ನೃತ್ಯ ಇತ್ಯಾದಿ ಕಲಾ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅರ್ಹ ಕಲಾಬೋಧಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂಬಂಧಿಸಿದ ಮಿನಿ ಬಾಲ ಭವನಗಳ ಪ್ರದೇಶಗಳಲ್ಲಿರುವ ಸ್ಥಳೀಯ ಬೋಧಕರಿಗೆ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಚಟುವಟಿಕೆ ನಡೆಸಿದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗುವುದು.
ಆಸಕ್ತರು, ತಮ್ಮ ಸ್ವವಿವರಗಳೊಂದಿಗೆ ಸದರಿ ಕ್ಷೇತ್ರದಲ್ಲಿ ಹೊಂದಿರುವ ವಿದ್ಯಾರ್ಹತೆ, ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಒಂದು ಪಾಸ್‍ಪೋರ್ಟ್ ಆಳತೆಯ ಭಾವಚಿತ್ರದೊಂದಿಗೆ ಕಾರ್ಯದರ್ಶಿಗಳು, ಬಾಲ ಭವನ ಸೊಸೈಟಿ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿಗೆ ದಿನಾಂಕ: 07-10-2021ರ ಒಳಗೆ ಸಲ್ಲಿಸುವುದು.

ಹೆಚಿನ ಮಾಹಿತಿಗಾಗಿ ಕಾರ್ಯದರ್ಶಿಗಳು, ಬಾಲಭವನ ಸೊಸೈಟಿ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂ. 080 – 22864189ರ ಮೂಲಕ ಸಂಪರ್ಕಿಸಬಹುದು ಅಥವಾ ಇಮೇಲ್  secybalbhavan.bng@gmail.com     ಗೆ ಸಲ್ಲಿ ಪಡೆಯಬಹುದು ಎಂದು ಕಾರ್ಯದರ್ಶಿಗಳು, ಬಾಲಭವನ ಸೊಸೈಟಿ, ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags

Post a Comment

0Comments

Post a Comment (0)