SUBHAS CHANDRA BOSE - BHAGAT SINGH - ನೇತಾಜಿ ಸುಭಾಷ್ ಚಂದ್ರ ಬೋ¸, ಭಗತ್‌ಸಿಂಗ್ ಜನ್ಮದಿನಾಚರಣೆ

varthajala
0

ಬಳ್ಳಾರಿ ಅ 23.ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕ ಹಾಗೂ ಭಗತ್ ಸಿಂಗ್ ಅವರ 114ನೇ ಜನ್ಮದಿನಾಚರಣೆ ಸಮರ್ಪಿತ ರಾಯಚೂರು ಮತ್ತು ಯಾದಗಿರಿ ವಲಯ ಮಟ್ಟದ ಶಿಬಿರವನ್ನು  ನಗರದ ಸ್ವಾಮಿ ವಿವೇಕಾನಂದ ಕಾಲೇಜನಲ್ಲಿ ಹಮ್ಮಿಕೊಳ್ಳಲಾಯಿತು. ಈ ಎರಡು ದಿನದ ವಿದ್ಯಾರ್ಥಿ ಶಿಬಿರದಲ್ಲಿ ಉದ್ಘಾಟಕರಾಗಿ ಆಗಮಿಸಿದ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್ ಮಾತನಾಡುತ್ತ ಸತತವಾಗಿ 7 ದಶಕಗಳಿಂದ ನಮ್ಮ ಸಂಘಟನೆ ಎಐಡಿಎಸ್‌ಓ ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ಸಂಘಟಿಸುತ್ತಾ  ಸಾವಿರಾರು ಐತಿಹಾಸಿಕ ಹೋರಾಟಗಳನ್ನು ಕಟ್ಟಿದೆ, ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಯಾವುದೇ ತಾರತಮವಿಲ್ಲದೆ ಶಿಕ್ಷಣ ದೊರೆಯಬೇಕು ಎಂಬ ಮಹೋನ್ನತ ಧ್ಯೆಯದೊಂದಿಗೆ, ಕೆಲವು ಉಸ್ತಾಹಿ ವಿದ್ಯಾರ್ಥಿಗಳು ಪ್ರಾರಂಭಿಸಿದ ಎಐಡಿಎಸ್ ಓ ಇಂದು ಎಲ್ಲಾ ರಾಜ್ಯಗಳಲ್ಲಿ ನಿರಂತರವಾಗಿ ಮುನ್ನಡೆಯುತ್ತಿದೆ.

ಸಕ್ರಿಯವಾಗಿ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದೆ. ಬಡತನ, ಅಸಮಾನತೆ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ. ಹಾಗೂ ಕೋಮು ವೈಷಮ್ಯವಿಲ್ಲದ ಭಾರತದ ನಿರ್ಮಾಣ ಮಾಡುವುದು ಭಗತ್ ಸಿಂಗ್, ನೇತಾಜಿ ಸುಭಾಷ ಚಂದ್ರ ಬೋಸ್‌ರಂತಹ ಮಹಾನ್ ಕಾಂತಿಕಾರಿಗಳ ಕನಸಾಗಿತ್ತು. 

ಈ ಕನಸನ್ನು ನನಸು ಮಾಡುವುದನ್ನ ಎಐಡಿಎಸ್‌ಓ ತನ್ನ ಹೋರಾಟದ ಗುರಿಯನ್ನಾಗಿಸಿಕೊಂಡಿದೆ.ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಂಟಾದ ಶೈಕ್ಷಣಿಕ ಏರುಪೇರುಗಳು, ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಆದರ ಪ್ರಭಾವ, ಮತ್ತು ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಅಸಮರ್ಥವಾದ ವ್ಯವಸ್ಥೆ ಎಲ್ಲವನ್ನೂ ನಾವು ಕಳೆದ ಎರಡು ವಷÀðದಲ್ಲಿ ನೋಡಿದೆವು, ಸರ್ಕಾರಗಳು, ವಿಶ್ವವಿದ್ಯಾಲಯಗಳು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ನಡೆಸಲು ಮುಂದಾದಾಗ, ಅದರ ಬೆನ್ನಲ್ಲೇ ಬೆಳೆದ ಚಳುವಳಿಗಳು - ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ. ಎಲ್ಲ ವಿದ್ಯಾರ್ಥಿಗಳಿಗೂ ಲಸಿಕಿ ಆದ ನಂತರವೇ ಆಫ್ ಲೈನ್ ತರಗತಿ ನಡೆಸಿ ಈ ಘೋಶಣೆಗಳು ಶಿಕ್ಷಣ ತಜ್ಞರು, ಉಪನ್ಯಾಸಕರು ಹಾಗೂ ಜನ ಸಾಮಾನ್ಯರಿಂದ ಅಪಾರ ಬೆಂಬಲ ಮತ್ತು ಮೆಚ್ಚುಗೆಯನ್ನು ಗಳಿಸಿತು. ಚಳುವಳಿಯ ಪ್ರಭಾವದಿಂದ, ಯುಜಿಸಿ ನೂತನ ಪರೀಕ್ಷಾ ಮಾರ್ಗಸೂಚಿಯನ್ನು ಪ್ರಕಟಿಸಿತು. ಹಲವು ವಿವಿಗಳು ಮಾರ್ಗಸೂಚಿಯನ್ನು ಅನುಸರಿಸಿದವು. ಇದು ಒಂದು ಐತಿಹಾಸಿಕ ಚಳುವಳಿಯಾಗಿ ಬೆಳೆದು, ನ್ಯಾಯ - ಹೋರಾಟ - ಸಂಘಶÀðದ ಬಗ್ಗೆ ವಿದ್ಯಾರ್ಥಿಗಳಲ್ಲಿ ನಂಬಿಕೆ ವೃದ್ಧಿಯಾಯಿತು!ನಮ್ಮ ಹಲವಾರು ಶಿಕ್ಷಣ ತಜ್ಞರು ಹಾಗೂ ಸಮಾಜ ಸುಧಾರಕರು, ಶಿಕ್ಷಣದ ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕೆAದು ಮತ್ತು ಆ ಶಿಕ್ಷಣವು ವೈಜ್ಞಾನಿಕ, ಧರ್ಮನಿರಪೇಕ್ಷವಾಗಿರಬೇಕೆಂದು ಪ್ರತಿಪಾದಿಸಿದ್ದರು. 

ಆದರೆ ಇಂದು ಕ್ರಮೇಣ ಶಿಕ್ಷಣ ಉಳ್ಳವರ ಪಾಲಾಗುತ್ತಿದೆಯಲ್ಲದೆ, ವ್ಯಕ್ತಿತ್ವ ನಿರ್ಮಿಸುವ ಉದ್ದೇಶದಿಂದ ದೂರವಾಗಿ ಕೇವಲ ಸರ್ಟಿಫಿಕೇಟ್‌ಗಾಗಿ, ಅಂಕಗಳಿಕೆಗಾಗಿ ಎಂಬAತಾಗಿದೆ.ಎಐಡಿಎಸ್ ಓ ದೇಶದಾದ್ಯಂತ ಇಂತಹ ವಿದ್ಯಾರ್ಥಿ ಹಾಗೂ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಎಡೆಬಿಡದೆ ಹೋರಾಟಗಳನ್ನು ಸಂಘಟಿಸುತ್ತ ಬಂದಿದೆ. ಈ ಹೋರಾಟಗಳ ಮುಂದುವರಿಕೆಯಾಗಿ ವಿದ್ಯಾರ್ಥಿಗಳಲ್ಲಿ ಮಹಾನ್ ವ್ಯಕ್ತಿಗಳ ಆದರ್ಶ, ಮೌಲ್ಯಗಳನ್ನು ಬೆಳೆಸಲು, ಉನ್ನತ ನೀತಿ ಸಂಸ್ಕೃತಿಯನ್ನು ಎತ್ತಿ ಹಿಡಿಯಲು, ಅನ್ಯಾಯದ ವಿರುದ್ಧ ದ್ವನಿ ಎತ್ತಲು ಹಾಗೂ ಸರ್ಕಾರಿ ಶಾಲಾ ಕಾಲೆಜುಗಳನ್ನು ಉಳಿಸುವ ನಿಟ್ಟಿನಲ್ಲಿ ಕೈಜೋಡಿಸಿ ಸಮಸ್ಯೆಗಳ ಕುರಿತು ಚರ್ಚಿಸಲು ರಾಯಚೂರು ವಲಯ ಮಟ್ಟದ (ರಾಯಚೂರು, ಯಾದಗಿರಿ), ವಿದ್ಯಾರ್ಥಿಗಳ ಶಿಬಿರ ನಡಿತಾಯಿದೆ. ಈ ಶಿಬಿರದಲ್ಲಿ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ನೇತಾಜಿ ಅವರ ಜೀವನ - ಸಂಘಶÀð,ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು, ಉತ್ತಮ ಸಮಾಜಕ್ಕಾಗಿ ನಮ್ಮ ಕೊಡುಗೆ, ಪ್ರಗತಿ ಪರವಾದ ಸಿನೆಮಾ ಪ್ರದರ್ಶನ, ಪವಾಡ ಬಯಲು ಮತ್ತು ಮೂಢನಂಬಿಕೆಯ ಕುರಿತು, ಕ್ರಿಡೆ ಮತ್ತು ಆಟೋಟ,ಸಾಂಸ್ಕೃತಿಕ ಸಂಜೆ ಹಾಗೂ ಹಲವಾರು ವಿ಼ಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು. 

ಈ ಒಂದು ಕಾರ್ಯಕ್ರಮದಲ್ಲಿ ಎಐಡಿಎಸ್ ಓ ರಾಯಚೂರು ಜಿಲ್ಲಾ ಅಧ್ಯಕ್ಷರಾದ ಮಹೇಶ್  ಚೀಕಲಪರ್ವಿ ಮಾತನಾಡಿದರು, ಎಐಡಿಎಸ್ ಓ ರಾಜ್ಯ ನಾಯಕರಾದ ವೆಂಕಟೇಶ್ ದೇವದುರ್ಗ ಅಧ್ಯಕ್ಷತೆ ವಹಿಸಿದ್ದರು. ರಾಯಚೂರ ಜಿಲ್ಲಾ ಕಾರ್ಯದರ್ಶಿಗಳಾದ ಪೀರಸಾಬ್, ನಾಯಕರಾದ ಅಪೂರ್ವ, ರಮೇಶ ದೇವಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

Varthajala, Malleswaram, Bengaluru 03.



Tags

Post a Comment

0Comments

Post a Comment (0)