119 ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ

varthajala
0

 ಶ್ರೀ ವೆಂಕಟ ವರದಾಚಾರ್ಯ ಸೇವಾ ಸಮಿತಿ ಟ್ರಸ್ಟ್ ವತಿಯಿಂದ 119  ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ ಮುಕ್ತಾಯಗೊಳಿಸಿ ಮತ್ತೆ 20 ಶಾಲೆಗಳ ಆಯ್ಕೆ-ಕೆ.ವೆಂಕಟೇಶುಲು ಶೆಟ್ಟಿ

ಬಳ್ಳಾರಿ, ನ 06: ಶ್ರೀ ವೆಂಕಟ ವರದಾಚಾರ್ಯ ಸೇವಾ ಸಮಿತಿ ಟ್ರಸ್ಟ್ ಬಳ್ಳಾರಿ ಇವರ ವತಿಯಿಂದ 119 ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿ ಅವರು ಅನುಕೊಂಡAತೆ 119 ಶಾಲೆಗಳನ್ನು ಪೂರ್ಣಗೊಳಿಸಿದರು. ಟ್ರಸ್ಟಿನ ವೆಂಕಟೇಶ್ ಶೆಟ್ಟಿ, ರಾಮಚಂದ್ರಪ್ಪ, ರಾಮು ಮತ್ತು ಶಾಲೆಯ ಶಿಕ್ಷಕಿಯರು ಸೇರಿ ವಿತರಣೆ ಮಾಡುವ ಕಾರ್ಯಕ್ರಮ ಮುಕ್ತಾಯಗೊಳಿಸಿದರಲ್ಲದೇ ಮತ್ತೇ 20 ಶಾಲೆಗಳನ್ನು ಆಯ್ಕೆ ಮಾಡಿಕೊಂಡು. ಶನಿವಾರ ಜಾನೆಕುಂಟೆ,ಹರಗಿನಡೋಣಿ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳ ವಿತರಣೆ ಮಾಡಿದರು. ನೋಟ್ ಪುಸ್ತಕ ವಿತರಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ವೆಂಕಟೇಶ್ ಶೆಟ್ಟಿ ಅವರು ತಿಳಿಸಿದರು.  ಈಸಂಧರ್ಭದಲ್ಲಿ ಶಾಲಾ ಮುಖ್ಯ ಗುರುಗಳು,ಶಾಲೆಯ ಸಿಬ್ಬಂದಿ ಇನ್ನಿತರರು ಭಾಗವಹಿಸಿದ್ದರು.

Varthajala, Bellary
Tags

Post a Comment

0Comments

Post a Comment (0)