ವಿದ್ಯಾ ವಿನಯ ಸಂಪನ್ನ – ಅಧ್ಯಯನಶೀಲತೆಗೊಂದು ಮಾದರಿ : ಮಲ್ಲೇಪುರಂ

varthajala
0

ಸಾರ್ಥಕ 70 ಸಂವತ್ಸರ ಕಂಡಿರುವ ಹಿರಿಯ ವಿದ್ವಾಂಸ ಪ್ರೋ.ಮಲ್ಲೇಪುರಂ ಜಿ ವೆಂಕಟೇಶ ಈ ನಾಡು ಕಂಡ ಬಹುಮುಖ ಪ್ರತಿಭಾಸಂಪನ್ನರು. ಕನ್ನಡ - ಸಂಸ್ಕೃತ ಎರಡರಲ್ಲೂ ಸಮತೋಲಿತ ಬರಹದ ಸಾಹಿತ್ಯಯಾತ್ರೆ 45 ವರ್ಷ ಕಂಡಿದೆ . 

ಹಲವಾರು ಪ್ರಕಾಶಕರು ಇವರ ಪುಸ್ತಕಗಳನ್ನು ಹೆಮ್ಮೆಯಿಂದ 90ಕ್ಕೂ ಅಧಿಕ ಗ್ರಂಥಗಳನ್ನು ಪ್ರಕಟಿಸಿರುವುದೇ ಇವರ ಅಜಾತಶತೃತ್ವಕ್ಕೆ ದ್ಯೋತಕ ಎಂದು ನಗರದ ನಯನ ಸಭಾಂಗಣದಲ್ಲಿ ಪ್ರೋ ಮಲ್ಲೇಪುರಂ ಜಿ ವೆಂಕಟೇಶ 70 ಅಭಿನಂದನಾ ಸಮಿತಿ ಮತ್ತು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರೋ ಮಲ್ಲೇಪುರಂ ಗ್ರಂಥ ಪ್ರಕಟಣೆಯ ನಲ್ವತೈದು ವರ್ಷಗಳ ಯಾನದ ನೆನಪು ; ಪ್ರಕಾಶಕ- ಮುದ್ರಕರ ಸ್ನೇಹ ಸಮ್ಮಿಲನ ಮತ್ತು ಗೌರವಾರ್ಪಣೆಯ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. 


ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು . ಸಮಾರಂಭದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಲೆ ಪುಟ್ಟಸ್ವಾಮಯ್ಯ ಮತ್ತು ತಂಡದವರು ಪ್ರೋ .ಮಲ್ಲೇಪುರಂ ರವರನ್ನು ಅತ್ಮೀಯವಾಗಿ ಅಭಿನಂದಿಸಿದರು. 

ಹಿರಿಯ ಪ್ರಕಾಶಕರಾದ ಮೈಸೂರಿನ ತ.ವೆಂ.ವೆA ಸ್ಮಾರಕ ಗ್ರಂಥಮಾಲೆಯ ಟಿ.ಎಸ್.ಛಾಯಾಪತಿ , ಇಸ್ಕಾನ್ ಟಚ್‌ಸ್ಟೋನ್ ಫೌಂಡೇಷನ್‌ನ ಕುಲಶೇಖರ ಚೈತನ್ಯ ದಾಸ್ ಮೊದಲಾದವರಿಗೆ ಗೌರವಾರ್ಪಣೆ ನಡೆಯಿತು . ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ , ಲಯನ್ ಬಿ.ಆರ್ .ಅಶೋಕ ಕುಮಾರ್ , ಅಭಿನಂದನಾ ಸಮಿತಿಯ ಡಾ.ಕೆ.ಜಿ.ಲಕ್ಷಿö್ಮÃನಾರಾಯಣಪ್ಪ , ಡಾ.ಪ್ರಕಾಶ್ ಆರ್ ಪಾಗೋಜಿ, ಡಾ.ಸಂತೋಷ್. ಹಾನಗಲ್ ಉಪಸ್ಥಿತರಿದ್ದರು.

Post a Comment

0Comments

Post a Comment (0)