ಗುಣಮಟ್ಟದ ಮಾನ್ಯತೆ ದೊರಕಿರುವ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘ

varthajala
0

ಬಳ್ಳಾರಿ ಜ 05. ಒಂದು ಶತಮಾನದ ಸಾರ್ಥಕ ಶಿಕ್ಷಣ ಸೇವೆಯನ್ನು ಸಲ್ಲಿಸಿರುವ ವೀರಶೈವ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾಗಿ ಕಳೆದ ನಾಲ್ಕು ದಶಕಗಳಿಂದ ತಾಂತ್ರಿಕ ಶಿಕ್ಷಣ ನೀಡುತ್ತಿರುವ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನೀರಿ0ಗ್ ವಿಭಾಗ, ಮೆಕ್ಯಾನಿಕಲ್ ಇಂಜಿನೀರಿ0ಗ್ ವಿಭಾಗ, ಎಲೆಕ್ಟಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನೀರಿ0ಗ್ ವಿಭಾಗ,ಗಳಿಗೆ ಈ ರಾಷ್ಟಿçಯ ಗುಣಮಟ್ಟದ ಮಾನ್ಯತೆ ದೊರಕಿರುವ ಸಂಸ್ಥೆಗೆ ಹೆಮ್ಮೆಯ ಗತಿ ಮೂಡಿಸಿದೆ. ಅಲ್ಲದೇ ಈಗಾಗಲೇ ಕಂಪ್ಯೂಟರ್ ಸೈನ್ಸ್ ಇಂಜಿನೀರಿ0ಗ್ ವಿಭಾಗಕ್ಕೆ ಮಾನ್ಯತೆ ದೊರಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯವು ಉತ್ತರ ಕನಾಟಕದ ಕಲಬುರ್ಗಿ ವಿಭಾಗಮಟ್ಟದ ಎಲ್ಲಾ ಇಂಜಿನೀರಿ0ಗ್ ಕಾಲೇಜುಗಳಲ್ಲಿ, ಅಲ್ಲದೇ ಕನಾಟಕ ರಾಜ್ಯದ ಕೆಲವೇ ಕೆಲವು ಅತ್ಯುತ್ತಮ ಇಂಜಿನೀರಿ0ಗ್ ಕಾಲೇಜುಗಳಲ್ಲಿ ಈ ಮಾನ್ಯತೆ ಪಡೆದಿರುತ್ತವೆ. ಹಾಗು ನೆರೆಯ ರಾಜ್ಯಗಳಲ್ಲಿ ಒಂದೇ ಇಂಜಿನೀರಿ0ಗ್ ಕಾಲೇಜಿನ ಪ್ರಮುಖ ವಿಭಾಗಗಳಿಗೆ ಈ ಮಾನ್ಯತೆ ದೊರಕಿರುವ ಸಂಸ್ಥೆಯಾಗಿದೆ ಎಂಬ ಹೊಗಳಿಕೆ, ಹೆಸರುವಾಸಿಗೆ ಪಾತ್ರ ವಾಗಿದೆ. 

ಈ ಗುಣಮಟ್ಟದ ಮಾನ್ಯತೆಯನ್ನು ಮಹಾವಿದ್ಯಾಲಯವು ಸಾಧಿಸಲು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಹಾಗು ಉಪಾಧ್ಯಕ್ಷರಾದ ಅಲ್ಲಂಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿಜೆ. ಶಾಂತವೀರನಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್‌ಗೌಡರು ಇವರುಗಳು, ಪ್ರಾಂಶುಪಾಲರಾದ ಡಾ|| ಟಿ.ಹನುಮಂತರೆಡ್ಡಿ, ಉಪಪ್ರಾಂಶುಪಾಲರು ಹಾಗು ಎಲೆಕ್ಟಾçನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನೀರಿ0ಗ್ ವಿಭಾಗದ ಮುಖ್ಯಸ್ಥರು ಡಾ|| ಸವಿತಾ ಸೊನೋಳಿ, ಡೀನ್-ಅಕಾಡಮಿಕ್ ಡಾ|| ಹೆಚ್.ಗಿರೀಶ, ಡೀನ್-ಪರೀಕ್ಷ ವಿಭಾಗ  ಡಾ|| ಬಿ.ಶ್ರೀಪತಿ, ಸಿವಿಲ್ ಇಂಜಿನೀರಿ0ಗ್ ವಿಭಾಗದ ಮುಖ್ಯಸ್ಥರು ಡಾ||ಹೆಚ್.ಎಂ.ಮಲ್ಲಿಕಾರ್ಜುನ, ಮೆಕ್ಯಾನಿಕಲ್ ಇಂಜಿನೀರಿ0ಗ್ ವಿಭಾಗದ ಮುಖ್ಯಸ್ಥರು, ಡಾ|| ಕೋರಿನಾಗರಾಜ್, ಮಹಾವಿದ್ಯಾಲಯದ ಎನ್.ಬಿ.ಏ.ಕೋಆರ್ಡಿನೇಟರ್‌ಗಳು - ಡಾ||ಅನುರಾಧ ಎಸ್.ಜಿ,ರಘುಕುಮಾರ್ ತಂಡದವರಿಗೆ, ಐ.ಕ್ಯೂ.ಏ.ಸಿ.-ಕ್ವಾಲಿಟಿ ವಿಭಾಗದ ಮುಖ್ಯಸ್ಥರಾದ ಡಾ||ವೀರಗಂಗಾಧರ ಸ್ವಾಮಿ , ಹಾಗು ಮಹಾವಿದ್ಯಾಲಯದ ಭೋಧಕ, ಭೊಧಕೇತರ ಸಿಬ್ಬಂದಿ ವರ್ಗದವರ ಪರಿಶ್ರಮಕ್ಕೆ  ಅಭಿನಂದಿಸಿದರು.

Tags

Post a Comment

0Comments

Post a Comment (0)