ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನೋತ್ಸವ ಆಚರಣೆ

varthajala
0
ಬೆಂಗಳೂರು, ಜನವರಿ 14, (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಎನ್.ಎಸ್.ಎಸ್. ಕೋಶದ ವತಿಯಿಂದ ದಿನಾಂಕ 12.01.2022 ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ  ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನೋತ್ಸವನ್ನು ಆಚರಿಸಲಾಯಿತು.
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಆನ್‍ಲೈನ್ ಮುಖೇನ ತಮ್ಮ ಸಂದೇಶವನ್ನು ಸಭಿಕರಿಗೆ ತಿಳಿಸಿ ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸಿದರು. 12 ನೇ ಜನವರಿ 2022 ರಂದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಯುವಜನಸಂಬಂಧಿ ವಿವೇಕಾನಂದರ ವಿಚಾರಧಾರೆ, ಪ್ರಬಂಧ / ಆಶು ಭಾಷಣ, ವಿಚಾರ ಸಂಕಿರಣ ಸ್ಪರ್ಧೆಗಳನ್ನು ಉನ್ನತ ಶಿಕ್ಷಣ ಇಲಾಖೆ, ಆರ್.ಡಿ.ಪಿ.ಆರ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಇಲಾಖೆಯ ವತಿಯಿಂದ ಆಯೋಜಿಸಲಾಗಿತ್ತು.
13 ನೇ ಜನವರಿ 2022 ರಂದು ರಂದು ರಾಷ್ಟ್ರೀಯ ಏಕೀಕರಣ ಕುರಿತು ಮಾಹಿತಿ ನೀಡುವ ಹಾಡು, ನಾಟಕ, ವಿಕಲಚೇತನ್ನರನು ಒಳಗೊಂಡಂತೆ ಯುವಸಂಸದ್, ಯುವ ಸಭೆ ಗ್ರಾಮ ಸಭೆ ಕಾರ್ಯಕ್ರಮಗಳು, ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗದಲ್ಲಿ ಯುವ ಜನತೆ ತೊಡಗಿಸಿಕೊಳ್ಳುವಂತೆ ಅವರುಗಳನ್ನು ಪೆÇ್ರೀತ್ಸಾಹಿಸುವುದಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಯಿತು. ದಿನಾಂಕ 14.01.2022 ರಂದು ಯುವಜನತೆಗೆ ಪೌಷ್ಟಿಕತೆ ಹಾಗೂ ಆರೋಗ್ಯ ವರ್ಧನೆ, ಆರೋಗ್ಯ ಶಿಬಿರ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದರ ಕಾರ್ಯಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರಿಗೆ ಇಲಾಖೆಯವರಿಂದ ಆಯೋಜಿಸಲಾಗಿತ್ತು.
15 ನೇ ಜನವರಿ 2022 ರಂದು ದೇಶೀಯ ಕ್ರೀಡೆ, ಫಿಟ್  ಇಂಡಿಯಾ ರನ್, ಯೋಗಾಸನ, ಗ್ರಾಮೀಣ ಕ್ರೀಡೆಗಳ ಕಾರ್ಯಕ್ರಮಗಳನ್ನು ಕ್ರೀಡಾ ವಿಜ್ಞಾನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯ್.ಡಿ.ಪಿ.ಆರ್ ನಗರಾಭಿವೃದ್ಧಿ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯು ಹಮ್ಮಿಕೊಳ್ಳುತ್ತಿದೆ. 16 ನೇ ಜನವರಿ 2022 ರಂದು ಮಾದಕ ವಸ್ತು ಬಳಕೆಯ ನಿಯಂತ್ರಣ, ಮಹಿಳಾ ದೌರ್ಜನ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಒಳಾಡಳಿತ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ವಿಕಲಚೇತನ ಇಲಾಖೆ ವಹಿಸಿಕೊಂಡು ನಡೆಸುತ್ತಿದೆ. 17 ನೇ ಜನವರಿ 2022 ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಾನೂನುಗಳ ಸೇವೆ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಾರ್ತಾ ಇಲಾಖೆಯವರು ಹಮ್ಮಿಕೊಳ್ಳುತ್ತಿದ್ದಾರೆ.

18 ನೇ ಜನವರಿ 2022 ರಂದು ಕೌಶಲ್ಯ ಕರ್ನಾಟಕ ಕಾರ್ಯಕ್ರಮದ ಪ್ರಯುಕ್ತ ಯುವಜನತೆಯಲ್ಲಿನ ಸ್ಥಳೀಯ ಕೌಶಲ್ಯ ಆಸಕ್ತಿ ಹಾಗೂ ಸಾಮಥ್ರ್ಯಕ್ಕೆ ತಕ್ಕಂತೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು, ಸ್ಥಳೀಯ ಘನ ತ್ಯಾಜ್ಯದ ಮರುಬಳಕೆ ಪ್ಲಾಸ್ಟಿಕ್ ಪರಿವರ್ತನಗೆ ಲಭ್ಯವಿರುವ ತಂತ್ರಜ್ಞಾನ, ಉದ್ಯಮಶೀಲತೆ ಹೂಡಿಕೆ ಕುರಿತು ತರಬೇತಿ ಎಂ.ಎಸ್.ಎಂ.ಇ ಸ್ವಸಹಾಯ ಗುಂಪುಗಳ ಯೋಜನೆಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್‍ಡಿಪಿಆರ್ ನಗರಾಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ನಿರ್ದೇಶಕರು, ಎಂ.ಎಸ್.ಎಂ.ಇ. ಇವರುಗಳ ಸಹಯೋಗದಿಂದ ಹಮ್ಮಿಕೊಳ್ಳಲಾಗುತ್ತಿದೆ .

ಈ ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರೇμÉ್ಮ ಸಚಿವರಾದ ಡಾ. ಕೆ.ಸಿ.ನಾರಾಯಣ ಗೌಡರವರು, ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್ ಅಶ್ವಥ್ ನಾರಾಯಣ ರವರು, ಯುವಸಬಲೀರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಹಾಗೂ ಆಯುಕ್ತರು ಉಪಸ್ಥಿತರಿದ್ದರು.
Tags

Post a Comment

0Comments

Post a Comment (0)