ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಉಳಿಸುವಿಕೆ ಬಗ್ಗೆ.

varthajala
0


ಕೇರಳದ ಕಾಸರಗೋಡಿನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ  ಫೆಬ್ರವರಿ 2 ಮತ್ತು 3ರಂದು ಕನ್ನಡ ಸ್ನಾತಕೋತ್ತರ ಪ್ರವೇಶಕ್ಕಾಗಿ ಸ್ಥಳದಲ್ಲಿಯೇ ತತ್‌ಕ್ಷಣ ಪ್ರವೇಶಾತಿ ನೀಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಹಂತದಲ್ಲಿ ಕನ್ನಡವನ್ನು ಅಧ್ಯಯನ ಮಾಡುವ, ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆರ್ಥಿಕ ನೆರವನ್ನು ಒದಗಿಸಲು ಉದ್ದೇಶಿಸಿದೆ ಎಂದು ಕೇಂದ್ರ ಕಸಾಪ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಇದಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸಿ, ಅವುಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೂಲಕ, ಈ ನೆರವನ್ನು ಕ್ರೋಡೀಕರಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾಸರಗೋಡು ಕೇಂದ್ರೀಯ ವಿವಿಯಲ್ಲಿ ಕನ್ನಡ ಎಂ.ಎ. ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ರೂ. 25,000-00 ಗಳ ಪ್ರೋತ್ಸಾಹಕ ಧನವನ್ನು ನೀಡಲಾಗುತ್ತಿದೆ.

ಕಾಸರಗೋಡಿನ ಪೆರಿಯೇ ತೇಜಸ್ವಿನಿ ಹಿಲ್ಸ್ನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಂದು ಬೆಳಗ್ಗೆ 10ರಿಂದ ಪ್ರವೇಶ ಪರೀಕ್ಷೆ ನಡೆಯಲಿದೆ. ಕನಿಷ್ಠ 25 ವಿದ್ಯಾರ್ಥಿಗಳು ಸೇರಿಕೊಂಡರೆ ಕನ್ನಡ ವಿಭಾಗ ಉಳಿಯುತ್ತದೆ. 

ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುವ ಮೂಲಕ ಕನ್ನಡವನ್ನು ಉಳಿಸಬೇಕಿದೆ ಎಂದು ತಿಳಿಸಿದ್ದಾರೆ. 


ಕಾಸರಗೋಡು ಹಿರಿಯ ಸಾಹಿತಿ ಕೈಯ್ಯಾರ ಕಿಞ್ಞಣ್ಣ ರೈ ಹಾಗೂ ರಾಷ್ಟçಕವಿ ಮಂಜೇಶ್ವರದ ಗೋವಿಂದ ಪೈ ಅವರ ಕಾರ್ಯಕ್ಷೇತ್ರವಾಗಿದ್ದು, ಇಲ್ಲಿಗೆ ಸಮೀಪದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಕನ್ನಡ ಎಂ.ಎ. ವಿದ್ಯಾರ್ಥಿಗಳು ಈ ಕೇಂದ್ರೀಯ ವಿವಿಯನ್ನು ಸೇರುವಂತಾಗಬೇಕು. ಹಾಗಾಗಿ ಫೆಬ್ರವರಿ 2 ಮತ್ತು 3ರಂದು ಸ್ಥಳದಲ್ಲಿಯೇ ನಡೆಯುವ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬೇಕೆಂದು ಅವರು ವಿನಂತಿಸಿದ್ದಾರೆ. ಜೊತೆಗೆ ಕನ್ನಡ ಸ್ಥಾನವನ್ನು ಉಳಿಸಲು ಎಲ್ಲರೂ ವಿದ್ಯಾರ್ಥಿಗಳಿಗೆ ಕಂಕಣ ತೊಡಬೇಕೆಂದು ಕಳಕಳಿ ಪ್ರಾರ್ಥನೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನಾಡೋಜ ಡಾ. ಮಹೇಶ ಜೋಶಿ (9448490240, 8073006874), ಹಾಗೂ ಪ್ರೊ. ಮೋಹನ್ ಎ.ಕೆ. ಮುಖ್ಯಸ್ಥರು, ಕನ್ನಡ ವಿಭಾಗ, ಕಾಸರಗೋಡು ಕೇಂದ್ರೀಯ ವಿವಿ (9448215487)

ಇವರನ್ನು ಸಂಪರ್ಕಿಸಬಹುದು. 


Post a Comment

0Comments

Post a Comment (0)