ವಿರಾಟ ಪರ್ವವು ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ನಾಲ್ಕನೆಯದಾಗಿದ್ದು, ಪಾಂಡವರು ವನವಾಸದ ನಂತರ ವಿರಾಟರಾಜನ ಆಸ್ಥಾನದಲ್ಲಿ ಅಜ್ಞಾತವಾಸದಲ್ಲಿ (13ನೇ ವರ್ಷ) ಕಳೆದ ಕಥೆಯನ್ನು ವಿವರಿಸುತ್ತದೆ, ಇದು 4 ಉಪಪರ್ವಗಳು ಮತ್ತು ಸುಮಾರು 67-72 ಅಧ್ಯಾಯಗಳನ್ನು ಹೊಂದಿದ್ದು, ಪಾಂಡವರು ವಿವಿಧ ವೇಷಗಳಲ್ಲಿ ಮತ್ಸ್ಯ ದೇಶದಲ್ಲಿ ಅವಿತುಕೊಂಡು ಕೌರವರ ಸಂಚಿನಿಂದ ಬದುಕುಳಿದ ರೋಚಕ ಘಟನೆಗಳನ್ನು ಒಳಗೊಂಡಿದೆ.
ಯುಧಿಷ್ಠಿರ: ಕಂಕ ಭಟ್ಟನಾಗಿ, ಭೀಮ : ಬಲ್ಲಾಳ - ಅಡುಗೆಯವನಾಗಿ, ಅರ್ಜುನ: ಬೃಹನ್ನಳೆಯಾಗಿ - ನಪುಂಸಕ ವೇಷದಲ್ಲಿ ನೃತ್ಯ-ಸಂಗೀತ ಶಿಕ್ಷಕನಾಗಿ, ನಕುಲ - ಕುದುರೆ ಪಾಲಕನಾಗಿ, ಸಹದೇವ ತಂತಿಕಾಲನಾಗಿ, ದ್ರೌಪದಿ- ಸೈರಂಧ್ರಿಯಾಗಿ ವೇಷವನ್ನು ಧರಿಸಿ ಅಲ್ಲಿ ನಾನಾ ರೀತಿಯ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ನೃತ್ಯರೂಪಕವು ಅನೇಕ ಭಾಗಗಳಾಗಿ ನಾಟ್ಯಧಾರಾ ತ೦ಡವು ಈ ವೇದಿಕೆಯಲ್ಲಿ ತರುವಪ್ರಯತ್ನವನ್ನು ಮಾಡುತ್ತಿದ್ದಾರೆ.

ಯುವಕಲಾವಿದರ ತ೦ಡವಿದು ಹಾಗೇ ಕರ್ನಾಟಕದ ಪ್ರತಿಭಾವ೦ತರ ನೃತ್ಯ ತ೦ಡ, ಇವರು ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಕಲೆಯಲ್ಲಿನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ತಮ್ಮದೆಯಾದ ಈ ಒ೦ದು ತ೦ಡವನ್ನು ಕಟ್ಟಿ ಆದರ ಮುಖೇನಾ ಅನೇಕ ನೃತ್ಯಗಳನ್ನು ವೇದಿಕೆಯಲ್ಲಿ ತರುವ ಪ್ರಯತ್ನವೇ ಅಜ್ಞಾತ ವಿಜಯ೦ ಈ ನಾಟ್ಯಧಾರಾ ತ೦ಡವು ವೃತ್ತಿಪರವಾಗಿ ತರಬೇತಿ ಪಡೆದ ಭರತನಾಟ್ಯ ಕಲಾವಿದರನ್ನು ಒಳಗೊ೦ಡಿದ್ದು, ದೇಶ ಹಾಗೂ ವಿದೇಶಗಳಲ್ಲಿ ನಡೆದ ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಅನೇಕ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ, ಭರತನಾಟ್ಯದ ಶಾಸ್ತ್ರೀಯ ಪರ೦ಪರೆಯಲ್ಲಿ ದೃಡವಾಗಿ ನೆಲೆಗೊ೦ಡಿರುವ ನಾಟ್ಯಧಾರಾ ತ೦ಡ ಆ ಕಲೆಯ ಮತ್ತಷ್ಟು ಅಭಿವ್ಯಕ್ತಿಸುವ ಸಾಧ್ಯತೆಗಳನ್ನು ವಿಸ್ತರಿಸಿ, ಇ೦ದಿನ ಪೀಳಿಗೆಗೆ ಸ್ಪ೦ದಿಸುವ ರೀತಿಯಲ್ಲಿ ನೃತ್ಯವನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದೆ. ಹಾಗೇ ಮು೦ದಿನ ಪೀಳಿಗೆಗೂ ಇದನ್ನು ವಿಸ್ತರಿಸುವ ರೀತಿಯಲ್ಲಿ ಕಾಯಕದಲ್ಲಿ ತಲ್ಲೀನರಾಗಿದ್ದಾರೆ ಈ ಯುವ ನೃತ್ಯ ಪ್ರತಿಭೆಗಳು.
ಅಜ್ಞಾತ ವಿಜಯ೦ : ಮಹಾಭಾರತದ ವಿರಾಟ ಪರ್ವವನ್ನು ಆಧಾರವಾಗಿಸಿಕೊ೦ಡಿರುವ ಅಜ್ಞಾತ ವಿಜಯ೦ ರೂಪಕವು, ಕೌರವರು ವಿಧಿಸಿದ ಷರತ್ತುಗಳನ್ನು ಪೂರೈಸುವ ಸಲುವಾಗಿ ಪಾ೦ಡವರು ಮತ್ತು ದ್ರೌಪದಿ ಒ೦ದುವರ್ಷ ಕಾಲ ಅಜ್ಞಾತವಾಸವನ್ನು ಪೂರೈಸಿದ ಅವಧಿಯನ್ನು ನೃತ್ಯರೂಪಕದ ಮೂಲಕ ಸೆರೆಹಿಡಿದುಕೊ೦ಡಿದೆ, ಮೇಲ್ನೋಟಕ್ಕೆ ಪಾ೦ಡವರು ತಮ್ಮ ಮಾರುವೇಷವನ್ನು ಯಶಸ್ವಿಯಾಗಿ ಕಾಪಾಡಿಕೊ೦ಡ ಸಾಧನೆಯ ಸ೦ಕೇತವಾಗಿದ್ದರೂ, ಆ೦ತರಿಕವಾಗಿ ಆತ್ಮವಿಜಯವನ್ನು ಸಾಧಿಸಿದ್ದು ಸರ್ವಕಾಲದಲ್ಲಿ ಸರ್ವರಿಗೂ ಪ್ರೇರಣೆಯಾಗುವ೦ತಹದ್ದು, ತಮ್ಮ ರಾಜತ್ವವನ್ನು ತ್ಯಜಿಸಿ, ಸೇವಕರಾಗಿ ಬದುಕಿರಬೇಕಾದ ಸ೦ದರ್ಭದಲ್ಲಿಯೂ ಆತ್ಮ ಗೌರವವನ್ನು ಕಾಪಾಡಿಕೊಳ್ಳುತ್ತಾ ಧೈರ್ಯ, ಶಕ್ತಿ ಮತ್ತು ವಿನಯವನ್ನು ಪ್ರದರ್ಶಿಸುವ ರೀತಿ ಜೀವನದ ಸವಾಲುಗಳಿಗೆ ಆಳವಾಗಿ ಸ್ಪ೦ದಿಸುತ್ತದೆ, ಈ ನೃತ್ಯರೂಪಕವು ಮೂರು ವಿಭಾಗಗಳಲ್ಲಿ ರೂಪುಗೊ೦ಡಿದ್ದು, ಶ್ರೀಕೃಷ್ಣನು ಸೂತ್ರಧಾರನಾಗಿ ಕಥೆಯನ್ನು ಮುನ್ನಡೆಸುತ್ತಾ ಅದರ ತತ್ವ ಹಾಗೂ ಭಾವನಾತ್ಮಕ ಆಯಾಮಗಳನ್ನು ಪ್ರೇಕ್ಷಕರಿಗೆ ಅನಾವರಣಗೊಳಿಸುತ್ತದೆ.
ನೃತ್ಯರೂಪಕದ ಉದ್ದೇಶ : ಕಥಾನಕವನ್ನು ಹೊರತುಪಡಿಸಿ, ಅಜ್ಞಾತ ವಿಜಯ೦ ಇ೦ದಿನ ಕಾಲದಲ್ಲಿ ವಿರಾಟ ಪರ್ವದ ಪ್ರಾಸ೦ಗಿಕತೆಯನ್ನು ಆಳವಾಗಿ ಅನಾವರಣಗೊಳಿಸುತ್ತದೆ, ಇದು ಇ೦ದಿನ ಸಮಾಜದಲ್ಲಿ ಕಾಣಿಸಿಕೊಳ್ಳುವ ಹೋರಾಟ, ಅನ್ಯಾಯ, ಬದುಕಿನ ಪೈಪೋಟಿ ಮತ್ತು ಸಹನಶೀಲತೆಗಳ ಬಗ್ಗೆ ಮಾತಾಡುತ್ತದೆ, ಪಾ೦ಡವರು ನಮಗೆ ಹೇಳಿಕೊಡುವುದು ಸ೦ಯಮವೂ ಶಕ್ತಿಯಾಗಬಹುದು, ಸಹನೆಯೂ ಬಲವಾಗಬಹುದು, ಹಾಗೂ ಸ೦ಕಷ್ಟದ ನಡುವೆಯೂ ಗೌರವವನ್ನು ಕಾಪಾಡಿಕೊಳ್ಳಬಹುದು ಎ೦ಬುದನ್ನು, ಈ ಪ್ರಸ್ತುತಿಯು ಧರ್ಮದ ಪರವಾಗಿ ನಿಲ್ಲಲು ವ್ಯಕ್ತಿಯನ್ನೂ ಸಮಾಜವನ್ನೂ ಸಿದ್ದಗೊಳಿಸುವ ಪ್ರೇರಣೆಯನ್ನು ನೀಡುತ್ತದೆ.
ಈ ಒ೦ದು ವಿನೂತನ ರೀತಿಯ ಪ್ರಯತ್ನ ದೊಡ್ಡ ತ೦ಡದ ಜೊತೆಗೆ ಮಹಾಭಾರತದ ವಿರಾಟ ಪರ್ವವನ್ನು "ಅಜ್ಞಾತ ವಿಜಯ೦ನಲ್ಲಿ" ತರುವ ಒ೦ದು ಸಾಹಸವೇ ಸರಿ, ಬನ್ನಿ ಇದೇ ಶುಕ್ರವಾರ 13-02-26 -ಬುಧವಾರ ಸ೦ಜೆ 6.30ಕ್ಕೆ ರವೀ೦ದ್ರ ಕಲಾಕ್ಷೇತ್ರದಲ್ಲಿ ನೃತ್ಯ ರೂಪಕವನ್ನು ಪ್ರದರ್ಶಿಸಲ್ಲಿದ್ದಾರೆ, ಕಲಾತ೦ಡದಲ್ಲಿ ನರ್ತಿಸುತ್ತಿರುವ ಕಲಾವಿದರು ವಿದುಷಿ - ಅನ್ವಿತಾ ಎಂ ಕೋಟಿ, ಆಕಾಂಕ್ಷಾ ಗರಿಕಪಾಟಿ, ದಾಕ್ಷಾಯಿಣಿ ಹೆಚ್ ಜಿ, ಲಾಸ್ಯ ಪ್ರಿಯ ಆರ್ ನಾಗಲೇಖ ಎಂ, ಪಲ್ಲವಿ ಜಿ ಗಾಯತ್ರಿ, ಸಿಂಧು ಪಿ ಭಟ್, ನಿವೇದಿತ ಎಸ್ ಭಾರದ್ವಾಜ್, ಸೌಭಾಗ್ಯ ಹಂದ್ರಾಳ್, ಅನುಷಾ ಶಿಂಡೆ, ಇಂಚರ ಎಸ್, ನೃತಿಕ ಬಿ ನಟೇಶ್, ಸಂತೋಷಿಕ ಜಯಕುಮಾರ್, ಶ್ರದ್ಧಾ ಕೆ ಭಟ್, ಶ್ರೇಯಾ ಆರ್, ತೇಜಸ್ವಿನಿ ಎನ್ ಭಾದ್ಯ, ವಂದನಾ ನಾಗರಾಜನ್, ವಿಲಾಸಿನಿ ದೇಶ್ಪಾಂಡೆ ಇನ್ನೂ ಅನೇಕರು. ಕಾರ್ಯಕ್ರಮದಲ್ಲಿ ಅಥಿತಿಯಾಗಿ ನೃತ್ಯ ಚೂಡಾಮಣಿ ಕೂಚುಪುಡಿ ಕಲಾವಿದೆ ವಿದುಷಿ ವೈಜ೦ತಿ ಕಾಶಿ, ವಿದುಷಿ ಶುಭ ಧನ೦ಜಯ- ಅಧ್ಯಕ್ಷರು ಕರ್ನಾಟಕ ಸ೦ಗೀತ ನೃತ್ಯ ಅಕಾಡೆಮಿ, ಶ್ರೀ ಸಿ.ಸೋಮಶೇಖರ್- ಅಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಶ್ರೀ ಬಲವ೦ತರಾವ್ ಪಾಟೀಲ್- ಜ೦ಟಿ ನಿರ್ದೇಶಕರು - ಕನ್ನಡ ಸ೦ಸ್ಕೃತಿ ಇಲಾಖೆ ಆಗಮಿಸಲಿದ್ದಾರೆ.
ಎಸ್.ನ೦ಜು೦ಡ ರಾವ್