ಮಾನವೀಯ ಮೌಲ್ಯಗಳ ಸಾಕಾರಮೂರ್ತಿ ಡಾ: ಅಂಬರೀಷ್ .ಜಿ.

varthajala
0



ಬಹುಶ: ಅಂಬರೀಷ್ ಎನ್ನುವ ನಾಲ್ಕಕ್ಷರದಲ್ಲೇ ಅಂತಹ ಒಂದು ಮಾನವೀಯ ಮೌಲ್ಯಗಳಿಗೆ ಸದಾ ಮಿಡಿಯುವ ಮನಸ್ಸು, ಸೆಳೆತ, ಇತರರಿಗಾಗೇ ಜೀವಿಸುವಂತಹ ಸಧ್ಗುಣ ರಕ್ತದ ಕಣ ಕಣಗಳಲ್ಲೇ ಬೆರೆತಿರುತ್ತದೆ ಎನ್ನಿಸುತ್ತದೆ.

ಇಲ್ಲಿ ಈಗ ಹೇಳ ಹೊರಟಿರುವುದು ಡಾ.ಅಂಬರೀಷ್ ಎಂಬ ಮಹಾನ್ ಚೈತನ್ಯದ, ನಿಜ ಸಮಾಜ ಸೇವಕರೆಂಬ ಸಾಧಕರ ಬಗ್ಗೆ.
ಶ್ರೀ ಗೋಂದಾಳ್ ಅನಂತಮೂರ್ತಿ ಮತ್ತು ಶ್ರೀಮತಿ ಗಿರಿಜಮ್ಮನವರ ಸುಪುತ್ರ ಡಾ.ಜಿ. ಅಂಬರೀಷ್‌ರವರು ತಮ್ಮ ಈ ಕಿರಿ ವಯಸ್ಸಿನಲ್ಲೇ ಹಿರಿಯ ಸಾಧಕರಿಗಿಂತಲೂ ಮಿಗಿಲಾದ ಸಾರ್ಥಕ ಕಾಯಕಗಳಲ್ಲಿ ತೊಡಗಿಸಿಕೊಂಡವರು. ಇವರು ಸಾಧಿಸದ ಸಾಧನೆಗಳಿಲ್ಲ, ಮಾಡಿರದ ಸೇವೆಗಳಿಲ್ಲ, ಸ್ಪಂದಿಸದೇ ಇರುವ ಮನಗಳಿಲ್ಲ.


ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಸರ್ಕಾರಿ ಶಾಲೆಯಲ್ಲಿ ಇವರ ಪ್ರೌಢ ಶಿಕ್ಷಣ, ರವೀದ್ರನಾಥ್ ಠಾಗೋರ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಅಮೇರಿಕಾದ ಫ್ಲೋರಿಡಾದ ವೇದಾಂಗ ಜ್ಯೋತಿಷ್ಯ ಯೋಗ ಸಂಸ್ಕೃತಮ್ ಯೂನಿವರ್ಸಿಟಿಯಲ್ಲಿ ಪಿ.ಜಿ.ಡಿಪ್ಲೋಮಾ, ಪಿ.ಹೆಚ್.ಡಿ. ಇನ್ ಜ್ಯೋತಿಷ್ಯ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್, ಡಾಕ್ಟರೇಟ್ ಇನ್ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ ಯು.ಎಸ್.ಎ, ಅಮೇರಿಕಾ ಹೀಗೆ ಇವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಬಗ್ಗೆ ಹೇಳುತ್ತಾ ಹೋದರೆ ಆಕಾಶಕ್ಕೆ ಏಣಿ ಹಾಕಿ ಹತ್ತುತ್ತಿರುವಂತೆ ಭಾಸವಾಗುತ್ತದೆ.

ರಾಷ್ಟç ಪ್ರಶಸ್ತಿಗಳಾದ “ಭಾರತ ಜ್ಯೋತಿ”, ರಾಷ್ಟಿçಯ ವಿಭೂಷಣಾ” ಪ್ರಶಸ್ತಿಗಳು, ರಾಜ್ಯ ಪ್ರಶಸ್ತಿಗಳಾದ “ಸಮಾಜ ಸೇವಾ ರತ್ನ”, “ಭಾರತ ವಿಕಾಸ ರತ್ನ”, ಕರ್ನಾಟಕ ಸಹಕಾರ ರತ್ನ ಸೇರಿದಂತೆ ಹತ್ತು ಹಲವು ರಾಜ್ಯ ಪ್ರಶಸ್ತಿಗಳು, ನಾಡಿನ ಪ್ರತಿಷ್ಠಿತ ಸಂಸ್ಥೆಗಳ ಪ್ರಶಸ್ತಿಗಳು ಇವರ ಸಮಾಜ ಸೇವಾ ಕೈಂಕರ್ಯಗಳ ಕಾಯಕವೆಂಬ ಸೇವಾ ಪೀಠವನ್ನು ಅಲಂಕರಿಸಿವೆ. ಇವರ ನಿಷ್ಕಂಳಕ ಸಮಾಜ ಸೇವೆಯನ್ನು ಮನಗಂಡು ಅಮೇರಿಕಾದ “ಕಿಂಗ್ಸ್” ಯು.ಎಸ್.ಎ ಯೂನಿವರ್ಸಿಟಿಯು “ಗೌರವ ಡಾಕ್ಟರೇಟ್”ನೀಡಿ ಗೌರವಿಸಿದೆ.
ಯಶವಂತಪುರದ ಶ್ರೀ ದಾರಿ ಆಂಜನೇ ಸ್ವಾಮಿ ದೇಗುಲದ ಹಾಗೂ ಟಿ. ದಾಸರಹಳ್ಳಿಯ ಶ್ರೀ ಭವಾನಿ ಕ್ಷೇತ್ರಗಳಿಗೆ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಎಸ್.ಡಿ.ಎ.ಎಸ್. ಕ್ರೆಡೀಟ್ ಕೊ-ಆಪರೇಟೀವ್ ಸೊಸೈಟಿ ”ಹಂಸ” ಜ್ಯೋತಿಷ್ಯ ವಿದ್ಯಾಕೇಂದ್ರ ಸೇರಿದಂತೆ ಹಲವಾರು ಸಂಸ್ಥೆಗಳಿಗೆ ಅಧ್ಯಕ್ಷರೂ ಆಗಿದ್ದಾರೆ. ಬೆಂಗಳೂರಿನ ಭ್ರಷ್ಟಾಚಾರ ನಿರ್ಮೂಲನ ಘಟಕ, ಯಶವಂತಪುರದ ಬಾಬಾ ಸಾಹೇಬ ಅಂಬೇಡ್ಕರ್ ದಲಿತ ವೇದಿಕೆಗಳಿಗೆ ಗೌರವ ಅಧ್ಯಕ್ಷರ ಪೀಠವನ್ನೂ ಅಲಂಕರಿಸಿದ್ದಾರೆ. ರಾಷ್ಟಿçಯ ನಾಡಿ ಜ್ಯೋತಿಷ್ಯ ಪರಿಷತ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಸ್ಥೆಗಳ ಸದಸ್ಯರಾಗಿರುವ ಡಾ.ಅಂಬರೀಷ್‌ರವರು ಇವೆಲ್ಲದಕ್ಕೂ ಕಳಸವಿಟ್ಟಂತೆ “ಆಪ್ತಬಂಧು”ಎ0ಬ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ರುವುದೇ ಸಾಕ್ಷಿ. ಹೀಗೆ ಹೇಳುತ್ತಾ ಹೋದರೆ ಅಕ್ಷರಗಳಿಗೇ ಬರ ಬರುವಂತಹ ಅಭೂತಪೂರ್ವ ಸಾಧನೆಗಳ ಶಿಖರವೇರಿರುವ ಶ್ರೀ ಅಂಬರೀಷ್‌ರವರು ಕೈಗೊಂಡಿರುವ ಸಮಾಜ ಸೇವೆಯ ಬಗ್ಗೆಯಂತೂ ಅದರಲ್ಲೂ ಪ್ರಸ್ತುತ ಕಾಡುತ್ತಿರುವ ಕರೋನಾದ ಕರಾಳ ದಿನಗಳ ವೇಳೆಯಲ್ಲಿ ಇವರು ಸ್ಪಂದಿಸುತ್ತಿರುವ ವೈಖರಿ ನಿಜಕ್ಕೂ ಇಂತಹ ನಿಸ್ವಾರ್ಥ ಸೇವೆ ಮಾಡುತ್ತಿರುವ ಮಹನೀಯರಿಗೆ ಭಾರತದ ಅತ್ಯುನ್ನತ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು.

ಕಳೆದ ವರ್ಷದಿಂದ ಇಡೀ ವಿಶ್ವವನ್ನೇ ಬೆಂಬಿಡದ ಭೂತದಂತೆ ಕಾಡುತ್ತಿರುವ, ಲಕ್ಷಾಂತರ ಜೀವಗಳನ್ನು ಕ್ಷಣಮಾತ್ರದಲ್ಲಿ ನುಂಗುತ್ತಿರುವ ಕರೋನಾದ ಕರಾಳ ಛಾಯೆಯ ದಿನಗಳಲ್ಲಿ ತಮ್ಮ ಶ್ರೀ ದಾರಿ ಆಂಜನೇಯ ಸ್ವಾಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಸುಮಾರು 2 ಸಾವಿರ ಜನರಿಗೆ ಆ್ಯಂಟಿಜನ್ ಟೆಸ್ಟ್ ತಪಾಸಣೆ, ಕರೋನಾ ಭೀತಿಗೆ ತುತ್ತಾಗಿ ಲಾಕ್ ಡೌನ್ ಆದಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ತಪ್ಪದೇ ಒಪ್ಪೊತ್ತಿನ ತುತ್ತಿಗೂ ಹಾಹಾಕಾರ ಪಡುತ್ತಿದ್ದ ಒಂದು ಸಾವಿರ ಕೂಲಿ ಕಾರ್ಮಿಕರು, ಬಡವರು, ದೀನ ದಲಿತರಿಗೆ ಊಟದ ಪ್ಯಾಕೇಟ್‌ಗಳನ್ನು ವಿತರಿಸಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಸೆಕ್ಯೂರಿಟಿ ಗಾರ್ಡ್ಗಳಿಗೆ ನಿವೃತ್ತ ಪೋಲಿಸ್ ಅಧಿಕಾರಿ ಶ್ರೀ ಸಂಗ್ರಾಮ್ ಸಿಂಗ್ ನೇತೃತ್ವದಲ್ಲಿ ತಲಾ 25 ಕೆ.ಜಿ ಅಕ್ಕಿ ಮೂಟೆಗಳನ್ನು ವಿತರಿಸಿದ್ದಾರೆ. ಅದೆಷ್ಟೋ ಬಡ ಪುರೋಹಿತರಿಗೆ, ಬಡ ಅಡುಗೆ ಭಟ್ಟರಿಗೆ ರೇಷನ್ ಕಿಟ್, ಹಣ್ಣು ತರಕಾರಿಗಳನ್ನು ಒದಗಿಸಿದ್ದಾರೆ. ಸಾವಿರಾರು ಜನರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ನೀಡಿದ್ದಾರೆ. 



ಅನಿವಾರ್ಯ ಸಂಧರ್ಭಗಳಲ್ಲಿ ಕರೋನಾ ಪೀಡಿತ ಕುಟುಂಬಗಳ ಮನೆಗಳಿಗೆ ಸ್ವತ: ತೆರಳಿ ಆತ್ಮಸ್ಥೆöÊರ್ಯ, ಧೈರ್ಯ ತುಂಬಿ ಫುಡ್ ಕಿಟ್‌ಗಳನ್ನು, ಕೊವೀಡ್ ಕಿಟ್‌ಗಳನ್ನು ತಲುಪಿಸುವ ಮಹತ್ಕಾರ್ಯದ ಮೂಲಕ ಕರೋನ ವಾರಿಯರ್ ಆಗಿಯೂ ಮಹತ್ತರ ಸೇವೆ ಸಲ್ಲಿಸುತ್ತಿದ್ದಾರೆ.
ಕೇವಲ ಕರೋನಾ ವೇಳೆಯಲ್ಲಿ ಮಾತ್ರವಲ್ಲದೇ ಮೊದಲಿನಿಂದಲೂ ಅದೆಷ್ಟೋ ಜನರಿಗೆ ಉದ್ಯೋಗಾವಕಾಶವನ್ನು ನೀಡಿದ್ದಾರೆ ಬಡವರಿಗೆ ರೇಷನ್ ಕಾರ್ಡ್, ವಿಧವೆಯರಿಗೆ ಮಾಸಿಕ ವೇತನ, ಹಿರಿಯರಿಗೆ ಹಿರಿಯ ನಾಗರೀಕರ ಕಾರ್ಡ್ಗಳು ದೊರೆಯುವಂತೆ ಮಾಡಿದ್ದಾರೆ. ಸ್ವಂತ ಉದ್ಯೋಗ ಮಾಡಲು ಅರಸಿ ಬಂದ ಯುವಕ, ಯುವತಿಯರಿಗೆ ಆರ್ಥಿಕ ನೆರವನ್ನೂ ನೀಡಿದ್ದಾರೆ. ಇಷ್ಟೇ ಅಲ್ಲದೇ ಕ್ರಿಕೆಟ್, ಕಬಡ್ಡಿ, ಟೆನ್ನಿಸ್, ವಾಲಿಬಾಲ್ ಮೊದಲಾದ ಕ್ರೀಡೆಯಲ್ಲಿ ನಿಜ ಆಸಕ್ತಿಯುಳ್ಳ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರ್ತಿಸಿ ಅವರಿಗೆ ಎಲ್ಲ ರೀತಿಯ ತುಂಬುಹೃದಯದ ಪ್ರೋತ್ಸಾಹ ನೀಡಿ ಹುರುದುಂಬಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಅವರವರ ಕ್ಷೇತ್ರದಲ್ಲಿ ಯಾವ ರೀತಿ ನೆರವು ನೀಡಬೇಕೋ ಅದೇ ರೀತಿ ಅವರನ್ನು ಎಲ್ಲಾ ರೀತಿಯಿಂದಲೂ ಪ್ರೋತ್ಸಾಹಿಸುತ್ತಿದ್ದಾರೆ. ಶ್ರೀ ಗೌರಿ ಪ್ರಸಾದ್ ರವರು ಸ್ಥಾಪಿಸಿರುವ ಅವಕಾಶ ವಂಚಿತ ಪ್ರತಿಭಾವಂತ ಗಾಯಕ, ಗಾಯಕರಿಯರಿಗೆಂದೇ “ಅಕ್ಷರ ಕಲ್ಚರಲ್ ಅಕಾಡೆಮಿ” ಮ್ಯೂಸಿಕಲ್ ಸಂಸ್ಥೆಯ ಬೆನ್ನೆಲುಬಾಗಿರುವ ಶ್ರೀ ಅಂಬರೀಷ್ ರವರು ಇತ್ತೀಚೆಗಷ್ಟೇ ಸದರಿ ಸಂಸ್ಥೆಯಿ0ದ ಲೋಕಾರ್ಪಣೆಗೊಂಡ “ಹೊಂಬೆಳಕು” ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ತುಂಬು ಹೃದಯದಿಂದ ಪ್ರೋತ್ಸಾಹಿಸಿದ್ದರು.
ಮಾನವನಾಗಿ ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಇಹಲೋಕ ತ್ಯಜಿಸಲೇಬೇಕು. ಮನೋಭಾವದ ಶ್ರೀ ಅಂಬರೀಷ್‌ರವರು ಕೋಟಿ ಕೋಟಿ ಇದ್ದರೂ ಒಂದು ಹತ್ತು ರೂಪಾಯಿಯನ್ನು ದಾನ ಮಾಡಲು ಹಿಂದೆ ಮುಂದೆ ನೋಡುವ ಅದೆಷ್ಟೋ “ದೊಡ್ಡ” ಮಂಡಿಗೆ ನಿಜವಾದ ಸಮಾಜ ಸೇವೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಅದರಲ್ಲೂ ಕರಾಳ ಕರೋನಾದ ಮೃತ್ಯುಛಾಯೆಯ ಕತ್ತಲಿನಲ್ಲಿ, ಕತ್ತಲು ಬೆಳಕಾಗುವಲ್ಲಿ ಇಂದಿದ್ದ ವ್ಯಕ್ತಿ ನಾಳೆಯ ಕಾಣದೇ ಶಾಶ್ವತವಾಗಿ ಕಣ್ಮರೆಯಾಗುತ್ತಿರುವಂತಹ ಕ್ಷಣಿಕ ಬದುಕಿನ ನಡುವೆ ಸಾರ್ಥಕ ಸೇವಾ ಕೈಂಕರ್ಯಗಳನ್ನು ಕೈಗೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ನಿಜ ಬದುಕಿನಲ್ಲಿ ಅಕ್ಷರಶ: ಹೇಗೆ ಅನಾವರಣಗೊಳಿಸಿಕೊಂಡು ಬದುಕನ್ನು ಸಾಕ್ಷಾತ್ಕಾರದತ್ತ ಕೊಂಡೊಯ್ಯಬಹುದೆ0ದು, ಒಂದು ಸಮಾಜಕ್ಕೆ ಹೇಗೆ ಆಸ್ತಿಯಾಗಬಹುದೆಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ.
ಇವರ ಇಂತಹ ಮಹತ್ತರ ಕಾಯಕಗಳಿಗೆ ಶ್ರೀಯುತ ಡಿ. ಸುರೇಶ್ ಗೌಡರೇ ಸ್ಪೂರ್ತಿ ಎಂದು ನಮ್ರತೆಯಿಂದ ಹೇಳುವ ಶ್ರೀಯುತರು ಘನತೆವೆತ್ತ ಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್‌ನಾರಾಯಣ್, ಶಾಸಕ ಎಸ್.ಮುನಿ ರಾಜು ಹಾಗೂ ಬಿ.ಬಿ.ಎಂ.ಪಿ ಸದಸ್ಯ ಎನ್. ಜಯಪಾಲ್ ರವರನ್ನೊಳಗೊಂಡ0ತೆ ಇನ್ನೂ ಅನೇಕ ಮಹನೀ ಯರನ್ನು ಸ್ಮರಿಸುತ್ತಾರೆ. ಇಂತಹ ಒಬ್ಬ ಮಹಾನ್ ಸಾಧಕರ ಬಗ್ಗೆ ಬರೆಯಲು ಕೆಲವು ಪುಟಗಳು ಸಾಲದಾದರೂ ಇವರ ಬಗ್ಗೆ ಬರೆಯಲು ಒಂದು ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ. ಡಾ. ಅಂಬರೀಷ್ ರವರಂತಹ ನಿಸ್ವಾರ್ಥ ಸಮಾಜ ಸೇವಕರ ಬಳಗ ಇನ್ನೂ ಬೆಳೆಯಲಿ, ಸದಾ ನಂದಾದೀಪವಾಗಿಬೆಳಗುತ್ತಿರಲೆ0ಬುದೇ ನಮ್ಮ ಆಶಯ.


- ವಿ.ಎಸ್.ಕುಮಾರ್
7892346105 / 9844604465

Tags

Post a Comment

0Comments

Post a Comment (0)