ಕಷ್ಟ ಬಂದಾಗ *ಅಯ್ಯೋ* ಎಂದು ಕೊರಗಬಾರದು

varthajala
0

 ನಮಸ್ಕಾರ 🙏

ನನ್ನೊಳಗೆ ಭಗವಂತನಿದ್ದಾನೆ ಅವನೇ ಎಲ್ಲವನ್ನೂ ನಡೆಸುತ್ತಾನೆ ಎನ್ನುವ ಆತ್ಮಬಲ ನಮ್ಮ ದುಃಖವನ್ನು ಪರಿಹರಿಸುತ್ತದೆ. ಹಿರಿಯರು, ಜ್ಞಾನಿಗಳು ಹೇಳುವಂತೆ *ಎಂದೂ ನಮಗೆ ಕಷ್ಟ ಬರಬಾರದು* ಎಂದು ಭಗವಂತನ ಹತ್ತಿರ ಕೇಳಿ ಕೊಳ್ಳಬಾರದು ಮತ್ತು ಕಷ್ಟ ಬಂದಾಗ *ಅಯ್ಯೋ* ಎಂದು ಕೊರಗಬಾರದು. *ಕಷ್ಟ ಬಂದಾಗ ಅದನ್ನು ಸಹಿಸಲು ಮತ್ತು ಅದರಿಂದ ಹೊರಗೆ ಬರುಲು ಶಕ್ತಿ ಕೊಡು ಅಂತ ದೇವರಲ್ಲಿ ಕೇಳುಕೊಳ್ಳಬೇಕು.* 

ಭಗವಂತನ ಮೇಲೆ ನಂಬಿಕೆ ಇಟ್ಟು ಬಂದಿದ್ದನ್ನು ಬಂದಂತೆ ಧೈರ್ಯದಿಂದ ಎದುರಿಸಬೇಕು. ನಾವು ಎಷ್ಟು ಕಷ್ಟ ಅನುಭವಿಸುತ್ತೇವೆಯೋ  ಅಷ್ಟೇ ಸಂತೋಷವನ್ನು ಭಗವಂತ ನಮಗೆ ಕೊಟ್ಟೆ ಕೊಡುತ್ತಾನೆ. ಕಾಯುವ ಮನಸ್ಸು ಮತ್ತು ತಾಳ್ಮೆ ಇರಬೇಕು ಅಷ್ಟೇ. ನಾವು ಮಾಡುವ ಕೆಲಸ ಒಳ್ಳೆಯದಾಗಿದ್ದರೆ ನಮಗೆ ಒಳ್ಳೆಯದೇ ಆಗುವುದು. ಆದ್ದರಿಂದ ನಮ್ಮ ಕೈಲಾದಷ್ಟು ಪರರಿಗೆ ಒಳ್ಳೆಯದನ್ನು ಮಾಡೋಣ, ಸನ್ಮಾರ್ಗದಲ್ಲಿ ನಡೆಯೋಣ. ನಾವೆಲ್ಲರೂ ಭಗವಂತನ ಕೃಪೆಗೆ ಪಾತ್ರರಾಗೋಣ.

 *ನಿಮಗೂ ನಿಮ್ಮ ಕುಟುಂಬಕ್ಕೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು 🌹🌹🙏*

Post a Comment

0Comments

Post a Comment (0)