ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಫೆಬ್ರವರಿ 28 (ಕರ್ನಾಟಕ ವಾರ್ತೆ) : ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಚಿತ್ರಕಲಾ ಕ್ಷೇತ್ರದಲ್ಲಿ ಸಂಶೋಧನಾ / ಕಲಾ ಅಧ್ಯಯನ ಮಾಡಲು ಆಸಕ್ತಿ ಹೊಂದಿದ ಸಾಧಕರು, ಪರಿಣತರಿಂದ 2019-20 ರ ಸಾಲಿನ 'ಲಲಿತಕಲಾ ಶಿಷ್ಯವೇತನ (ಫೇಲೋಶೀವ್) ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನಿಷ್ಠ ವಯೋಮಿತಿ 28 ವರ್ಷಗಳು ಈ ಶಿಷ್ಯವೇತನ ಕಾಲಾವಧಿಯು ಒಂದು ವರ್ಷದ್ಯಾಗಿದ್ದು, ಅಸಕ್ತರು ನೇರವಾಗಿ ದೃಶ್ಯಕಲೆಗೆ ಸಂಬಂಧಿಸಿದ ವಿಷಯಗಳನ್ನು ಆರಿಸಿಕೊಂಡು ಇಲ್ಲವೆ ಅಕಾಡೆಮಿ ಸೂಚಿಸುವ ವಿಷಯಗಳ ಕುರಿತು ಅಧ್ಯಯನ/ಸಂಶೋಧನೆ ನಡೆಸಿ ಆ ಕುರಿತು ಕಲಾಕೃತಿ ರಚನೆ, ಪ್ರದರ್ಶನ ಇಲ್ಲವೆ ಸಂಶೋಧನಾ ಪ್ರಬಂಧಗಳ ಮೂಲಕ ಪೂರ್ಣಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ಸಂಶೋಧನೆಗೆ ಆಯ್ಕೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ 5-6 ವುಟಗಳ ಸಾರಲೇಖನವನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ. ಸಾರಲೇಖನ ಮಾದರಿಯನ್ನು ಅಕಾಡೆಮಿಯಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು 15 ಮಾರ್ಚ್ ಫೆಬ್ರವರಿ 2022 ಕೊನೆಯ ದಿನಾಂಕವಾಗಿದೆ.

ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳನ್ನು ಸಂದರ್ಶನದ ಮೂಲಕ ಸಾಮಾನ್ಯ ವರ್ಗದ ಅರ್ಹ 5, ವಿಶೇಷ ಘಟಕ ಯೋಜನೆಯಡಿ 5 ಕಲಾವಿದರು / ಸಂಶೋಧಕರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಶಿಷ್ಯವೇತನದ ಮೊತ್ತ ರೂ. 1,00,000/- ಗಳನ್ನು ಒಂದು ಲಕ್ಷ ರೂಪಾಯಿ) ನೀಡಲಾಗುವುದು.
ನಿಗದಿತ ಅರ್ಜಿ ನಮೂನೆ ಮತ್ತು ನಿಯಮಾವಳಿಯನ್ನು ಲಲಿತಕಲಾ ಅಕಾಡೆಮಿಯ ವೆಬ್ ಸೈಟ್ ಇಲ್ಲವೆ ಅಕಾಡೆಮಿಯ ಕಛೇರಿಯಿಂದ ಖುದ್ದಾಗಿ ಪಡೆದುಕೊಳ್ಳಬಹುದು. ಅಂಚೆ ಮೂಲಕ ಅರ್ಜಿಯನ್ನು ತರೆಸಿಕೊಳ್ಳಲು ಇಚ್ಛಿಸುವವರು ನಿಗದಿತ ಅಂಚೆ ಚೀಟಿ ಹಚ್ಚಿದ ಸ್ವ ವಿಳಾಸದ ಲಕೋಟೆಯನ್ನು ಅಕಾಡೆಮಿಗೆ ಕಳುಹಿಸಿ ಅರ್ಜಿಗಳನ್ನು ತರಸಿಕೊಳ್ಳಬಹುದು.
 ಹೆಚ್ಚಿನ ವಿವರಗಳಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002  ಹಾಗೂ ದೂರವಾಣಿ ಸಂಖ್ಯೆ: 080-22480297 ನ್ನು ಸಂಪರ್ಕಿಸಬಹುದು.


Post a Comment

0Comments

Post a Comment (0)