ಬೆಂಗಳೂರು ಮೂಲದ DSATM ವಿದ್ಯಾಸಂಸ್ಥೆಗೆ ಅಗ್ರ NAAC ಶ್ರೇಯಾಂಕದ ಮಾನ್ಯತೆ:

varthajala
0

ಈಗಾಗಲೇ ತನ್ನ ಮೊದಲ ದಶಕವನ್ನು ಆಚರಿಸಿಕೊಂಡಿರುವ ದಯಾನಂದ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (DSATM) ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಅಪರೂಪದ ಸಾಧನೆ ನಿರ್ವಹಿಸುತ್ತಿದೆ. ಸದ್ಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC)ಯಿಂದ ಮಾನ್ಯತೆ ಪಡೆದುಕೊಂಡಿರುವ ವಿದ್ಯಾಸಂಸ್ಥೆ ಸರಿಸುಮಾರು ಅರ್ಧ ಡಜನ್‌ಗಿಂತಲೂ ಹೆಚ್ಚು ವಿಶಿಷ್ಟ ಸಾಧನೆಗಳ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ. NAAC ಶ್ರೇಯಾಂಕವನ್ನು ಗಮನಾರ್ಹ ಮಾನದಂಡವೆಂದು ಪರಿಗಣಿಸಲಾಗುತ್ತದೆ. DSATM ಸಂಸ್ಥೆಗೆ A+ ಮಾನ್ಯತೆ ನೀಡಲಾಗಿದ್ದು, ಇದು ಎರಡನೇ ಅತ್ಯುನ್ನತ ದರ್ಜೆಯಾಗಿದೆ ಹಾಗೂ ಈ ಶ್ರೇಣಿ ತಲುಪಿದ ರಾಜ್ಯಮಟ್ಟದ ಏಕೈಕ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ದಯಾನಂದ ಸಾಗರ್‌ ವಿದ್ಯಾಸಂಸ್ಥೆ ಪಾತ್ರವಾಗಿದೆ. ಈ ಶ್ರೇಯಾಂಕ ಪಡೆದಿರುವ ರಾಷ್ಟ್ರಮಟ್ಟದಲ್ಲಿ ಕೆಲವೇ ಸಂಸ್ಥೆಗಳಲ್ಲಿ ಈ ಸಂಸ್ಥೆಯೂ ಒಂದಾಗಿದ್ದು, ಕನಕಪುರ ರಸ್ತೆಯಲ್ಲಿರುವ 219 ವಿದ್ಯಾರ್ಥಿಗಳನ್ನು ಹೊಂದಿರುವ ಎಂಜಿನಿಯರ್‌ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (VTU) ಮಾನ್ಯತೆ ಪಡೆದುಕೊಂಡಿದ್ದು, ನಗರದ ಅತ್ಯುತ್ತಮ ದರ್ಜೆಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿದೆ ಹಾಗೂ ಇದು ಪ್ರತಿಷ್ಠಿತ ದಯಾನಂದ ಸಾಗರ್ ಸಂಸ್ಥೆಗಳ ಭಾಗವಾಗಿದೆ.
ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳನ್ನು NAAC ನಿಗದಿಪಡಿಸಿದ ನಿಯತಾಂಕಗಳ ಆಧಾರದ ಮೇಲೆ A/B/C/D ಎಂದು ವರ್ಗೀಕರಿಸಲಾಗಿದೆ. ಈ ಶ್ರೇಣಿಗಳು ಅತ್ಯುತ್ತಮ, ಉತ್ತಮ, ತೃಪ್ತಿಕರ ಮತ್ತು ಅತೃಪ್ತಿಕರ ಕಾರ್ಯಕ್ಷಮತೆ ಮಟ್ಟಗಳಿಗೆ ಅನುಗುಣವಾಗಿರುತ್ತವೆ. ಪ್ರತಿ ಪ್ಯಾರಾಮೀಟರ್‌ GPA ಒದಗಿಸುವ ಗುಣಮಟ್ಟದ ಮಾಹಿತಿಯ ಆಧಾರದ ಮೇಲೆ ಒಟ್ಟಾರೆ ಅಂಕಗಳನ್ನು ಅಂದಾಜಿಸಲಾಗುತ್ತದೆ. ಒಟ್ಟು 7 ಪ್ಯಾರಾಮೀಟರ್‌ಗಳಿರುವುದರಿಂದ, NAAC ಮೌಲ್ಯಮಾಪನದ ಅಂತಿಮ ಫಲಿತಾಂಶವನ್ನು ಲೆಕ್ಕಾಚಾರ ಮಾಡಲು ಅವುಗಳ 7 GPA ಗಳನ್ನು ಸಂಯೋಜಿಸಲಾಗುತ್ತದೆ; ಅಂದರೆ CGPA.
ವಿದ್ಯಾಸಂಸ್ಥೆಯ ಈ ವಿಶಿಷ್ಟ ಸಾಧನೆಯ ಕುರಿತು ಮಾತನಾಡಿದ ದಯಾನಂದ ಸಾಗರ್ ಸಂಸ್ಥೆಗಳ ಆಡಳಿತ ಮಂಡಳಿಯ ರೋಹನ್ ಪ್ರೇಮ್ ಸಾಗರ್ ಸಂತಸ ವ್ಯಕ್ತಪಡಿಸಿದರು. “A+ ನ್ಯಾಕ್‌ ಶ್ರೇಯಾಂಕದ ಮಾನ್ಯತೆ ಪಡೆದಿರುವ DSATM ಸಂಸ್ಥೆಯನ್ನು 3.26 - 3.50 ಬ್ಯಾಂಡ್ ಅಡಿಯಲ್ಲಿ ಗುರುತಿಸಲಾಗಿದೆ; ಇದು ಶ್ರೇಯಾಂಕದ ಹಂತಗಳಲ್ಲಿ ಎರಡನೇ ಅತ್ಯುತ್ತಮ ಸ್ಥಾನ. ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸದಸ್ಯರು ಮತ್ತು ಸಮುದಾಯ, ಶೈಕ್ಷಣಿಕ ಪಾಲುದಾರರು, ಸರ್ಕಾರಿ ಏಜೆನ್ಸಿಗಳು ಮತ್ತು ಇತರ ಸಂಶೋಧನೆ ಮತ್ತು ಅಧ್ಯಯನ ಕೇಂದ್ರಗಳಿಗೆ ಉನ್ನತ NAAC ಶ್ರೇಯಾಂಕ ಲಭಿಸುವುದೆಂದರೇ, ಆ ಸಂಸ್ಥೆಗಳ ಆಡಳಿತ, ಶೈಕ್ಷಣಿಕ ಗುಣಮಟ್ಟ ಹಾಗೂ ಇತರ ನಿರ್ಣಾಯಕ ನಿಯತಾಂಕಗಳ ಸದೃಢತೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಉತ್ತಮ ಫಲಿತಾಂಶಗಳನ್ನು ನೀಡಲು DSATM ಈಗ ತನ್ನ ಅತ್ಯಂತ ವ್ಯವಸ್ಥಿತ ಕಾರ್ಯಚಟುವಟಿಕೆಗಳ ಮೂಲಕ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಸಿದ್ಧವಾಗಿದೆ. ರಾಷ್ಟ್ರೀಯ ಏಜೆನ್ಸಿಗಳು/ಸರ್ಕಾರ/ಉದ್ಯಮ ಸಂಸ್ಥೆಗಳು ಪ್ರಕಟಿಸಿದ ವಿವಿಧ ಶ್ರೇಯಾಂಕಗಳು/ದರ್ಜೆಗಳ ಪ್ರಕಾರ DSATM ತನ್ನ ಒಟ್ಟಾರೆ ಸಾಧನೆಗಳನ್ನು ಉತ್ತಮವಾಗಿ ನಿರ್ವಹಿಸಿದೆ. ಭವಿಷ್ಯದಲ್ಲಿ DSATM ವಿದ್ಯಾಸಂಸ್ಥೆ ರಾಜ್ಯ ಮತ್ತು ದೇಶದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ತಮಗಿದೆ’ ಎಂದು ಅವರು ಹೇಳಿದರು.
DSATM ಸಂಸ್ಥೆಯ ಇತರ ಸಾಧನೆಗಳೆಂದರೆ, ಇನ್‌ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ (IIC- MHRD) 4 ಸ್ಟಾರ್‌ ಗಳು (3.0 ಆವೃತ್ತಿ) 2021ರ ಪ್ರಶಸ್ತಿಯೂ ಸೇರಿದಂತೆ, 2019 ರಿಂದ ಸತತವಾಗಿ ವಾರ್ಷಿಕ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. 2020ರಲ್ಲಿ AICTE-CII ಸಮೀಕ್ಷೆ ಪ್ಲಾಟಿನಂ ಪ್ರಶಸ್ತಿ ಪಡೆದುಕೊಂಡಿದ್ದು ಮತ್ತು ನವದೆಹಲಿಯಲ್ಲಿ MHRD ಕ್ಲೀನ್ ಮತ್ತು ಸ್ಮಾರ್ಟ್ ಕ್ಯಾಂಪಸ್ ಪ್ರಶಸ್ತಿ, 2021ರಲ್ಲಿ ಬ್ಯಾಂಡ್-ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಅಚೀವ್ಮೆಂಟ್ (ARIIA) ಶ್ರೇಯಾಂಕದ ಅತ್ಯುತ್ತಮ ಅಟಲ್ ಶ್ರೇಯಾಂಕದ ಗೌರವಕ್ಕೆ ಸಂಸ್ಥೆ ಪಾತ್ರವಾಗಿದೆ. AICTE, ನವದೆಹಲಿಯಿಂದ ಅನುಮೋದಿಸಲಾಗಿದೆ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಿಂದ ಸಂಯೋಜಿತವಾಗಿರುವ ಈ ಸಂಸ್ಥೆ VTU ಅಡಿಯಲ್ಲಿ ಉತ್ತೀರ್ಣದ ಶೇಕಡಾವಾರು ಅಗ್ರ 5 ನೇ ಸ್ಥಾನದಲ್ಲಿದೆ; ಒಟ್ಟಾರೆ ಶೇ. 85%ರಷ್ಟು ಉತ್ತೀರ್ಣ ಸರಾಸರಿಯನ್ನೂ ಹೊಂದಿದೆ. ಸಂಸ್ಥೆಯ 6 B.E ಶಾಖೆಗಳು NBA, ನವದೆಹಲಿಯಿಂದ ಮಾನ್ಯತೆ ಪಡೆದಿವೆ.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಒಂದು ಸ್ವಾಯತ್ತ ಸಂಸ್ಥೆ. ಇದು ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದ ನಂತರ ತನ್ನ ನಿರ್ದಿಷ್ಟ ನಿಯತಾಂಕಗಳ ಆಧಾರದ ಮೇಲೆ ಮಾನ್ಯತೆ ನೀಡುತ್ತದೆ. ಈ ನ್ಯಾಕ್ ಕೌನ್ಸಿಲ್ ಅನ್ನು 1994ರಲ್ಲಿ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಸ್ಥಾಪಿಸಿತು. ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲು NAAC ಮಾನ್ಯತೆ ಕಡ್ಡಾಯ. ನಿರ್ದಿಷ್ಟವಾಗಿ ಹೇಳುವುದಾದರೆ, ರಾಜ್ಯದ ವಿಶ್ವವಿದ್ಯಾನಿಲಯಗಳು NAAC ಮಾನ್ಯತೆ ಪಡೆಯದಿದ್ದಲ್ಲಿ ಯುಜಿಸಿಯಿಂದ ಅನುದಾನ ಮತ್ತು ಹಣಕಾಸಿನ ನೆರವು ದೊರೆಯುವುದಿಲ್ಲ. ಯಾವ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂಬುದರ ಆಧಾರದ ಮೇಲೆ NAAC ಮಾನ್ಯತೆ ನಿಯತಾಂಕಗಳು ನಿರ್ಧಾರಿತಗೊಂಡಿರುತ್ತವೆ. ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನ, ಪಠ್ಯಕ್ರಮದ ಅಂಶಗಳು, ಮೂಲಸೌಕರ್ಯ ಮತ್ತು ಕಲಿಕೆಯ ಸಂಪನ್ಮೂಲಗಳು, ಆಡಳಿತ, ನಾಯಕತ್ವದ ಗುಣಗಳು ಮತ್ತು ನಿರ್ವಹಣೆ, ಸಂಶೋಧನೆ, ನಾವೀನ್ಯತೆ ಮತ್ತು ವಿಸ್ತರಣೆ, ವಿದ್ಯಾರ್ಥಿ ಸಹಕಾರ ಮತ್ತು ಪ್ರಗತಿ, ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸ ಇವುಗಳೇ ನ್ಯಾಕ್‌ ಶ್ರೇಯಾಂಕದ ಪ್ರಮುಖ ಮಾನದಂಡಗಳು.


Tags

Post a Comment

0Comments

Post a Comment (0)