ಹರಿದಾಸರ ಮಿಲನ ಹಾಗೂ ದಾಸೋಪಾಸನ ಕಾರ್ಯಕ್ರಮ

varthajala
0

 ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗವು ವಾರ್ಷಿಕೋತ್ಸವ ಮತ್ತು ಹರಿದಾಸರ ಮಿಲನ, ಹಾಗೂ ದಾಸೋಪಾಸನ ಕಾರ್ಯಕ್ರಮ ಹಮ್ಮಿಕೊಂಡಿರುತ್ತದೆ.

ದಿನಾಂಕ 22-5-2022ರ ಭಾನುವಾರದಂದು ನಡೆಯಲಿದ್ದು, ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಸುರೇಶ್ ಕಲ್ಲೂರ ಅವರು ತಿಳಿಸಿದ್ದಾರೆ. ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ಜರುಗಲಿರುವ ಈ ಕಾರ್ಯಕ್ರಮವು ಬೆಳಿಗ್ಗೆ 10-00ರಿಂದ ರಾತ್ರಿ 8-00 ಗಂಟೆಯವರೆವಿಗೂ ನಡೆಯಲಿದೆ.

ಅಧ್ಯಾತ್ಮ ಬಂಧುಗಳು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಹರಿವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಿದೆ.

ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಸಾನ್ನಿಧ್ಯ ವಹಿಸಲಿದ್ದು, 200ಕ್ಕೂ ಹೆಚ್ಚು ಕಲಾವಿದರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ನಡೆಯಲಿದೆ. ಹಾಗೂ ಸ್ವಾಮೀಜಿಗಳ ಮೆರವಣಿಗೆಯೂ ನಡೆಯಲಿದೆ ಎಂದು ಕಾರ್ಯದರ್ಶಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


Post a Comment

0Comments

Post a Comment (0)