ಅಕ್ಷಯ ತೃತೀಯ: ಈ ದಿನ ಸತ್ಪಾತ್ರರಿಗೆ ದಾನ ಮಾಡಿ ಆಧ್ಯಾತ್ಮಿಕ ಲಾಭ ಪಡೆದುಕೊಳ್ಳಿ !

varthajala
0

 ಅಕ್ಷಯ ತೃತೀಯಾದ ದಿನ ಮಾಡಿದ ದಾನವು ಅಕ್ಷಯವಾಗುವುದು, ಈ ದಿನ ಸತ್ಪಾತ್ರರಿಗೆ ದಾನ ಮಾಡಿ ಆಧ್ಯಾತ್ಮಿಕ ಲಾಭ ಪಡೆದುಕೊಳ್ಳಿ ! 

ಅಕ್ಷಯ ತೃತೀಯಾ ನಿಮಿತ್ತ ಹಿಂದೂ‌ ಜನಜಾಗೃತಿ ಸಮಿತಿಯ ವತಿಯಿಂದ ಸಂತರ ವಿಶೇಷ  ಪ್ರವಚನ !

3500 ಕ್ಕೂ ಅಧಿಕ ಜಿಜ್ಞಾಸುಗಳು ಪ್ರವಚನದ ಲಾಭ ಪಡೆದರು !

ಅಕ್ಷಯ ತೃತೀಯಾದ ದಿನ ಮಾಡಿದ ದಾನವು ಅಕ್ಷಯವಾಗುವುದು, ಈ ದಿನ ಸತ್ಪಾತ್ರರಿಗೆ ದಾನ ಮಾಡಿ ಆಧ್ಯಾತ್ಮಿಕ ಲಾಭ ಪಡೆದುಕೊಳ್ಳಿ ! - ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮೇ ೩ ರಂದು ಅಕ್ಷಯ ತೃತೀಯಾ ಬರುತ್ತಿದೆ, ಈ ನಿಮಿತ್ತ ಹಬ್ಬದ ಮಹತ್ವ ಎಲ್ಲ ಹಿಂದೂಗಳಿಗೆ ತಿಳಿಯಬೇಕು, ಜೊತೆಗೆ ಪ್ರಸ್ತುತ ಕಾಲದಲ್ಲಿ ಧರ್ಮದ ಮೇಲೆ ನಡೆಯುತ್ತಿರುವ ಆಘಾತಗಳು ಮತ್ತು ಅದಕ್ಕೆ ಪರಿಹಾರವಾಗಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸಾಧನೆಯನ್ನು ಹೆಚ್ಚಿಸುವ ಮಹತ್ವದ ಕುರಿತು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ೨೯ ಏಪ್ರಿಲ್ ಶುಕ್ರವಾರದಂದು, ಅಕ್ಷಯ ತೃತೀಯಾ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆನ್‌ಲೈನ್ ಮೂಲಕ ಆಯೋಜಿಸಿದ್ದ ವಿಶೇಷ ಸತ್ಸಂಗದಲ್ಲಿ ಮಾತನಾಡುತ್ತಿದ್ದರು. ಸುಮಾರು 3700 ಕ್ಕೂ ಅಧಿಕ ಜಿಜ್ಞಾಸುಗಳು ಈ ಸತ್ಸಂಗದ ಲಾಭ ಪಡೆದರು. ಈ ಸತ್ಸಂಗದ ಆಯೋಜನೆಯ ಉದ್ದೇಶವನ್ನು ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಕರ್ನಾಟಕ ಭಾಗದ ಸಮನ್ವಯರಾದ ಶ್ರೀ. ವಿಜಯ ರೇವಣಕರ ಇವರು ತಿಳಿಸಿದರು.

ಈ ಹಬ್ಬವನ್ನು ವಿಶೇಷವಾಗಿ ಜೈನರು, ಬೌದ್ದರು ಸೇರಿ ಎಲ್ಲರೂ ಸಹ ವಿಶ್ವದಾದ್ಯಂತ ಆಚರಣೆ ಮಾಡುತ್ತಾರೆ. ಈ ದಿನ ಪಿತೃಗಳಿಗೆ ಎಳ್ಳು ತರ್ಪಣೆ ನೀಡಬೇಕು ಅದರಿಂದ ಅತೃಪ್ತ ಪೂರ್ವಜರಿಗೆ ಗತಿ ಸಿಗುವುದು ಎಂದು ಧರ್ಮಶಾಸ್ತ್ರವು ಹೇಳುತ್ತದೆ ಎಂದರು ಮತ್ತು ಅವರು ಎಳ್ಳು ತರ್ಪಣೆ ಮಾಡುವ ವಿಧಿಯನ್ನು ವಿವರಿಸಿದರು. ಅಕ್ಷಯ ತೃತೀಯಾದ ಕಾಲಾವಧಿಯಲ್ಲಿ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ. ಆದರೆ ನಾವು ದಾನ ನೀಡುವಾಗ ಸತ್ಪಾತ್ರರಿಗೆ ನೀಡುವುದು ಆವಶ್ಯಕವಾಗಿದೆ.
ಅಧ್ಯಾತ್ಮದ ಪ್ರಸಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಸಂಸ್ಥೆಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನವಾಗಿದೆ. ಪ್ರಸ್ತುತ ಹಿಂದೂ ಧರ್ಮ ಸಂಕಟದಲ್ಲಿರುವುದರಿಂದ ಧರ್ಮದ ಸಂಸ್ಥಾಪನೆಯನ್ನು ಮಾಡುವ ಕಾರ್ಯಕ್ಕೆ ದಾನವನ್ನು ಮಾಡುವುದು, ಧರ್ಮದ ಕಾರ್ಯ ಮಾಡುವುದು ಶ್ರೇಷ್ಟವಾಗಿದೆ. ಅದಕ್ಕಾಗಿ ಅಕ್ಷಯ ತೃತೀಯಾ ಪವಿತ್ರ ದಿನದಿಂದ ಪ್ರಾರಂಭ ಮಾಡಬೇಕು ಎಂದು ಕರೆ ನೀಡಿದರು.

ಇಂದು ದೇಶದಲ್ಲಿ ಧರ್ಮ-ಅಧರ್ಮದ ನಡುವೆ ದಿನನಿತ್ಯ ಸಂಘರ್ಷ ನಡೆಯುತ್ತಿದೆ. ಕರ್ನಾಟಕದಲ್ಲಿ ಹಿಜಾಬ್ ದಿಂದ ಪ್ರಾರಂಭವಾದಂತಹ ಈ ಧಾರ್ಮಿಕ ಸಂಘರ್ಷ ಇಂದು ಪ್ರತಿ ದಿನವು ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳುತ್ತಿದೆ.  ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ, ಸದ್ಯ ನಮ್ಮ ಧರ್ಮವು ಸಂಕಟದಲ್ಲಿದೆ. ಅದರ ಪುನರುತ್ಥಾನಕ್ಕಾಗಿ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು. ೨೦೨೫ ರಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರವು  ಉದಯವಾಗುವುದು ಮತ್ತು ಅದಕ್ಕಾಗಿ ನಾವು ಸಹ ಸಂಘಟಿತರಾಗಿ ಕಾನೂನು ಮಾರ್ಗದಲ್ಲಿ ಈ ಕಾರ್ಯದಲ್ಲಿ ಭಾಗಿಯಾಗುವುದು ಅತ್ಯಂತ ಅನಿವಾರ್ಯವಾಗಿದೆ ಎಂದರು.

 ವಿದ್ಯಾರಣ್ಯರು-ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ ಧರ್ಮ ರಕ್ಷಣೆ ಕಾರ್ಯ‌ಮಾಡಿದಂತೆ ನಾವು ಗುರುಗಳ-ಸಂತರ ಮಾರ್ಗದರ್ಶನಲ್ಲಿ ಕಾರ್ಯ ಮಾಡಬೇಕು ಎಂದರು !

ಶ್ರೀ. ಗುರುಪ್ರಸಾದ್ ಗೌಡ
ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಸಂಪರ್ಕ : 9343017001

Post a Comment

0Comments

Post a Comment (0)