ಕಲಾಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿದ ವೈವಿಧ್ಯಮಯ ಕಾರ್ಯಕ್ರಮಗಳು

VK NEWS
0

ಬೆಂಗಳೂರು : ಸಪ್ತಸ್ವರ ನೃತ್ಯಾಲಯ ಕಲ್ಚರಲ್ ಆರ್ಟ್ಸ್ ಸೆಂಟರ್ ಗುರುಗಳಾದ ವಿದುಷಿ ಶ್ರೀಮತಿ ಮಂಜುಳಾ ಜಗದೀಶ್ ರವರು ತಮ್ಮ ನೃತ್ಯ ಶಾಲೆಯ 15ನೇ ವಾರ್ಷಿಕೋತ್ಸವ “ನೃತ್ಯ ಕಲಾಪರ್ಣ – 2026” ಶೀರ್ಷಿಕೆ ಅಡಿಯಲ್ಲಿ ಬೆಂಗಳೂರು ಮಲ್ಲತ್ತಹಳ್ಳಿ ಕಲಾಗ್ರಾಮ  ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನೃತ್ಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.



 ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರು ವಿದುಷಿ ಶ್ರೀಮತಿ ಮಂಜುಳಾ ಜಗದೀಶ್ ರವರ ಮಾರ್ಗದರ್ಶನದಲ್ಲಿ ಹಲವಾರು ಶಾಸ್ತ್ರೀಯ ಶೈಲಿಯ ಅನೇಕ ನೃತ್ಯಗಳು, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯರಿಂದ ವಿಶೇಷವಾದ ನೃತ್ಯರೂಪಕಗಳಾದ  "ನವರಸರಂಜಿನಿ", "ಭೈರವಂ", ಜಾನಪದ, ಕೋಲಾಟ, ಸಮಕಾಲೀನದಂತಹ ಕರ್ನಾಟಕದ ಕರಾವಳಿಯ ಹೆಮ್ಮೆಯ ಯಕ್ಷಗಾನ, ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಿ  ಸಭಾಂಗಣದಲ್ಲಿ ಆಸಿನರಾಗಿದ್ದ ಸಭಿಕರನ್ನು ಮಂತ್ರಮುಗ್ದರಾಗುವಂತೆ ಮಾಡಿ, ಒಂದು ಹೊಸ ಲೋಕವನ್ನೇ ಸೃಷ್ಟಿಸಿದರೆಂದರೆ ತಪ್ಪಾಗಲಾರದು. 

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನೃತ್ಯ ಲಹರಿ ಕಲಾ ಕೇಂದ್ರದ  ನಿರ್ದೇಶಕರಾದ ಗುರು ವಿದುಷಿ ರೂಪಾ ಗಿರೀಶ್, ನಾಟ್ಯೇಶ್ವರ ನೃತ್ಯ ಶಾಲೆಯ ಕಲಾತ್ಮಕ ನೃತ್ಯ ಗುರುಗಳಾದ ಕಲಾಯೋಗಿ ಶ್ರೀ ಕೆ. ಪಿ. ಸತೀಶ್ ಬಾಬು ಹಾಗೂ ಶ್ರೀಮತಿ ವಾಣಿ ಸತೀಶ್ ಬಾಬು ಅತಿಥಿಗಳಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಎಲ್ಲಾ ಆಹ್ವಾನಿತ ಅತಿಥಿಗಳಿಂದ ಮಕ್ಕಳನ್ನು ಕುರಿತಾಗಿ ಹಾಗೂ ಸಂಸ್ಥೆಯ ಗುರುಗಳ ಪರವಾಗಿ ಅನಿಸಿಕೆ, ಆಶೀರ್ವಚನ ಹಾಗೂ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಹಾಗೂ ಮಕ್ಕಳ ಜವಾಬ್ದಾರಿ ಕುರಿತಾಗಿ ಚಿಕ್ಕ ಚೊಕ್ಕ ಹಿತನುಡಿಗಳು ಪ್ರೇಕ್ಷಕರಿಗೆ ಮದನೀಡಿತು. ಒಟ್ಟಾರೆ ಇಡೀ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.

Post a Comment

0Comments

Post a Comment (0)