ಎನ್ ಸಿಸಿ ವಾರ್ಷಿಕ ತರಬೇತಿ ಶಿಬಿರ ಉದ್ಘಾಟನೆ ....

varthajala
0

ಬೆಂಗಳೂರು : 2  ಕರ್ನಾಟಕ ಬೆಟಾಲಿಯನ್ ಎನ್ ಸಿಸಿ ವತಿಯಿಂದ ನಗರದ ಜಾಲಹಳ್ಳಿಯ ಬಿಇಎಲ್ ಶಾಲಾ ಆವರಣದಲ್ಲಿ 10 ದಿನಗಳ ಕಾಲ  ಎನ್ ಸಿಸಿ ವಾರ್ಷಿಕ ತರಬೇತಿ ಶಿಬಿರ ಏರ್ಪಡಿಸಲಾಗಿದೆ.






ಇಂದು ಈ ಎನ್ ಸಿಸಿ ಶಿಬಿರವನ್ನು ಕರ್ನಲ್ ಡಬ್ಲೂ ಜೆ ಕೆ ಸಿಂಗ್ ಚಾಲನೆ ನೀಡಿದ್ರು.ಈ ವೇಳೆ ಮಾತಾಡಿದ ಸಿಂಗ್ ,ಎನ್ ಸಿ ಸಿಯ ಸ್ಥಾಪನೆ ಮತ್ತು ,ಧ್ಯೇಯೋದ್ದೇಶದ ಕುರಿತು ತಿಳಿಸಿದ್ರು.ವಿದ್ಯಾರ್ಥಿಗಳನ್ನು ಸೈನ್ಯಕ್ಕೆ ಆಕರ್ಷಿಸಲು ಎನ್ ಸಿಸಿ ಪ್ರೇರಕ ಶಕ್ತಿಯಾಗಿದೆ.ಶಿಸ್ತು, ಬದ್ದತೆ ಜೊತೆಗೆ ನಾಯಕತ್ವ ಗುಣವನ್ನು ಎನ್ ಸಿಸಿ ಕಲಿಸುತ್ತದೆ ಎಂದ್ರು.

ಈ ಶಿಬಿರದ ಮುಖ್ಯ ಧ್ಯೇಯ್ಯೋದ್ದೇಶ ಒಗ್ಗಟ್ಟು ಮತ್ತು ಶಿಸ್ತು‌.ಈ ಶಿಬಿರದಲ್ಲಿ ಇಬ್ಬರು ಮುಖ್ಯ ಎನ್ ಸಿಸಿ ಅಧಿಕಾರಿಗಳು, ನಾಲ್ಕು ಸಹಾಯಕ ಎನ್ ಸಿಸಿ ಅಧಿಕಾರಿಗಳು,15 ಪಿಐ ಸಿಬ್ಬಂದಿಗಳು ಸೇರಿದಂತೆ 334 ಎಸ್ ಡಿ/ ಎಸ್ ಡಬ್ಲೂ ಎನ್ ಸಿಸಿ ಕೆಡೆಟ್ ಗಳು ಭಾಗಿಯಾಗಿದ್ದಾರೆ.ಈ ಕ್ಯಾಂಪ್ ನಲ್ಲಿ ಅನೇಕ ತರಬೇತಿಗಳು ನಡೆಯಲಿವೆ.ಈ ವೇಳೆ ಬಿಇಎಲ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನರಸಿಂಹ ಕುಮಾರ್ ಸೇರಿದಂತೆ ಬಿಇಎಲ್ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Post a Comment

0Comments

Post a Comment (0)