ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಮೇ 16, (ಕರ್ನಾಟಕ ವಾರ್ತೆ) : ಕಳೆದ 60 ವರ್ಷಗಳಿಂದ ಗ್ರಾಮೀಣ ಹಾಗೂ ನಗರ ಭಾಗದ ಆರ್ಥಿಕವಾಗಿ ಹಿಂದುಳಿದ ಯುವತಿಯರಿಗೆ / ಮಹಿಳೆಯರಿಗೆ ವೃತ್ತಿಪರ ತರಬೇತಿ ನೀಡುತ್ತಿರುವ ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆಯು 2022ನೇ ಸಾಲಿನ ವೃತ್ತಿಪರ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿದೆ.

SSLC / PUCಪಾಸ್ ಅಥವಾ ಫೇಲ್ ಆದ 17 ರಿಂದ 35 ವರ್ಷದೊಳಗಿನ  ಯುವತಿಯರು ಅರ್ಜಿ ಸಲ್ಲಿಸಬಹುದಾಗಿದ್ದು,  ಮೇ 30 .ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ತರಬೇತಿ ಪಡೆದ ಅಭ್ಯರ್ಥಿಗಳು ಬಾಲವಾಡಿ, ಶಿಶುವಿಹಾರ, ಹಗಲು ಪೋಷಣಾ ಕೇಂದ್ರ, ವಿಶೇಷ ಮಕ್ಕಳ ಶಾಲೆ, ಗಾರ್ಮೆಂಟ್ಸ್‍, ಕಂಪನಿಗಳಲ್ಲಿ ಶಾಲಾ ಪೂರ್ವಶಿಕ್ಷಕಿಯಾಗಿ ಕೆಲಸ ಮಾಡಲು ಅರ್ಹರಾಗುತ್ತಾರೆ.

ತರಬೇತಿ ಅವಧಿ 10 ತಿಂಗಳಾಗಿದ್ದು, ಜೂನ್ 10ರಿಂದ ಬೆಂಗಳೂರಿನ ಜಯಮಹಲ್‍ ಬಡಾವಣೆಯ ಬಾಲಸೇವಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ಆರಂಭವಾಗಲಿದೆ. ತರಬೇತಿಯು ಸಂಪೂರ್ಣ ಉಚಿತವಾಗಿದ್ದು , ಅವಶ್ಯಕತೆ ಇರುವವರಿಗೆ ವಸತಿ ಮತ್ತು ಊಟದ ಸೌಲಭ್ಯವಿದೆ. ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನ ವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ: 080-23330846 /22925898 ಹಾಗೂ ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆ, ಬಾಲಸೇವಿಕಾ ತರಬೇತಿ ಕೇಂದ್ರ, ನಂ . 135, 3ನೇ ಅಡ್ಡರಸ್ತೆ , ನಂದಿದುರ್ಗರಸ್ತೆ , ಜಯಮಹಲ್‍ ಬಡಾವಣೆ ,ಬೆಂಗಳೂರು – 46 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Tags

Post a Comment

0Comments

Post a Comment (0)