ಲೇಖಕ ಎನ್.ವ್ಹಿ.ರಮೇಶ್ ಅವರ 17 ಪುಸ್ತಕಗಳ ಲೋಕಾರ್ಪಣೆ

varthajala
0

ಪುಸ್ತಕ ಕನ್ನಡ ಪುಸ್ತಕ ಲೋಕದಲ್ಲಿ ಒಂದು ವಿನೂತನ ಪ್ರಯೋಗ

ಮಾಧ್ಯಮ ಸಮಾಲೋಚಕ – ಅಂಕಣಕಾರ - ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

ಆಯೋಜನೆ : ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ,ಮೈಸೂರು


ಲೇಖಕ ಎನ್.ವ್ಹಿ.ರಮೇಶ್ ಅವರ 17 ಪುಸ್ತಕಗಳ ಲೋಕಾರ್ಪಣೆ ಹಾಗೂ  ಕವಿಗೋಷ್ಠಿಯು ಮೇ 1, ಭಾನುವಾರ ಮೈಸೂರಿನ ಜಯನಗರ, ಹೊಸ ಕೋರ್ಟಿನ ಎದುರಿನ ನೇಗಿಲಯೋಗಿ ಸಭಾಂಗಣದಲ್ಲಿ ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ ಆಯೋಜಿಸಿತ್ತು.

ಬೆಂಗಳೂರು ಆಕಾಶವಾಣಿ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಕಾರ್ಯಕ್ರಮ ಉದ್ಘಾಟಿಸಿದರು, ಕನ್ನಡ ಪ್ರಭ ಪತ್ರಿಕೆ ಸ್ಥಳೀಯ ಸಂಪಾದಕ ಅಂಶಿ ಪ್ರಸನ್ನಕುಮಾರ್ ಪುಸ್ತಕಗಳ ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ನಿ.ಗಿರಿಗೌಡ ಸದಸ್ಯರು, ಕರ್ನಾಟಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ,ಡಿ.ಎನ್.ಲೋಕಪ್ಪ ಸದಸ್ಯರು, ಕರ್ನಾಟಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ.,ಎನ್.ಸತ್ಯನಾರಾಯಣ ನಿವೃತ್ತ ಪೊಲೀಸ್ ಅಧಿಕಾರಿ, ಮೈಸೂರು.,ಶ್ರೀಮತಿ ಎ.ಹೇಮಗಂಗಾ ರಾಜ್ಯಾಧ್ಯಕ್ಷರು, ಸಿರಿಗನ್ನಡ ವೇದಿಕೆ ಹಾಗೂ ಸಂಸ್ಕತಿ ಪೋಷಕರು. ಭಾಗವಹಿಸಿದ್ದರು.ಶ್ರೀಮತಿ ಹರಿಪ್ರಸಾದ್ ರೇಡಿಯೋ-ರಂಗಭೂಮಿಯ ಕಲಾವಿದರು, ಸಾಹಿತಿಗಳು, ನಿವೃತ್ತ ವಿಜ್ಞಾನಿ  ಸಿ.ಎಫ್.ಟಿ.ಆರ್.ಐ ಹಾಗೂ ಪ್ರಧಾನ ಸಂಪಾದಕರು, ಬಾಲ ವಿಜ್ಞಾನ. ಅಧ್ಯಕ್ಷತೆ ವಹಿಸಿದ್ದರು.

ಎನ್.ವಿ .ರಮೇಶ್ (ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು,ಆಕಾಶವಾಣಿ) ಅವರು ರಚಿಸಿರುವ ಪುಸ್ತಕಗಳು ಕನ್ನಡ ಪುಸ್ತಕ ಲೋಕದಲ್ಲಿ ಒಂದು ವಿನೂತನ ಪ್ರಯೋಗ, ಸ್ತುತ್ಯಾರ್ಹ ಪ್ರಯತ್ನ. ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ದುಡಿದ ರಮೇಶ್ ಅವರು ತಮ್ಮ ಅನುಭವ ಕಥಾಮೃತವನ್ನು ಇಲ್ಲಿ ಓದುಗರೊಂದಿಗೆ ಹಂಚುವುದರ ಜೊತೆಗೆ ಸಾಂಸ್ಕತಿಕ  ಕ್ಷೇತ್ರಕ್ಕೆ ತಮ್ಮದೇ ಆದ ಅಕ್ಷರ ಕಾಣಿಕೆ ಸಲ್ಲಿಸಿದ್ದಾರೆ. ಎಲ್ಲೂ ಕ್ಲಿಷ್ಟ ಪದಗಳ ಆಡಂಬರವಿಲ್ಲ, ನಾಟಕೀಯ ಶೈಲಿಯ ಶೋಕಿಯಿಲ್ಲ. ಸರಳ, ನೇರ ವಿಷಯ ಮಂಡನೆ. ಆಪ್ತ ಸಂಗಾತಿ ಮಾತಿಗೆ 

ತೊಡಗಿದಂತಿರುವ ಆಪ್ಯಾಯಮಾನವಾದ ರಮೇಶ್ ಅವರ ಬರವಣಿಗೆಯ ರೀತಿ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.ರೇಡಿಯೊ ಮೂಲೆಪಾಲಾಯಿತು ಅಂದುಕೊಂಡರೂ ಈ  ಮೊಬೈಲ್ ಹಾಗೂ ಆನ್‍ಲೈನ್ ಯುಗದಲ್ಲಿ ಶ್ರವಣ ಮಾಧ್ಯಮವು ‘ಪಾಡ್ ಕೋಸ್ಟ್,’ ‘ಕ್ಲಬ್ ಹೌಸ್’, ‘ಆಲೆಕ್ಸ’ ಗಳ ಮೂಲಕ ಪುನಃ ಜೀವತಳೆಯುತ್ತಿದೆ. ಈ ಸಂದರ್ಭದಲ್ಲಿ  ಆಕಾಶವಾಣಿಯಲ್ಲಿ ಸಾಕಷ್ಟು ಪಳಗಿದ ರಮೇಶ್ ಅಂಥವರ ಆಳವಾದ ಪರಿಣಿತಿ, ಅನುಭವ ಸಂಪತ್ತು ಸಮಾಜಕ್ಕೆ ಅತ್ಯವಶ್ಯಕವೆನಿಸುತ್ತದೆ ಎಂದು ಪುಸ್ತಕ ಪರಿಚಯ ಮಾಡಿದ ಮಾಧ್ಯಮ  ಸಮಾಲೋಚಕ – ಅಂಕಣಕಾರ - ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಎನ್.ವ್ಹಿ.ರಮೇಶ್‍ರವರ ಪುಸ್ತಕಗಳ ಬಗ್ಗೆ ಪರಿಚಯವನ್ನು  ಡಾ. ಲೀಲಾ ಪ್ರಕಾಶ್, ಶ್ರೀ ಎ.ಎಸ್.ನಾಗರಾಜು, ಶ್ರೀಮತಿ ಉಷಾ ನರಸಿಂಹನ್ , ಶ್ರೀ ಕಾಳಿಹುಂಡಿ ಶಿವಕುಮಾರ್ ಮತ್ತಿರರು ಮಾಡಿಕೊಟ್ಟರು.    


Post a Comment

0Comments

Post a Comment (0)