e-NAC ಪ್ರಮಾಣ ಪತ್ರಗಳನ್ನು ಪಡೆದಿಲ್ಲದಿರುವ ತರಬೇತಿದಾರರ ಪ್ರಸ್ತಾವನೆ ಸಲ್ಲಿಸಲು ಅವಧಿ ವಿಸ್ತರಣೆ

varthajala
0

ಜಿಲ್ಲ್ಲೆಯ ಎಲ್ಲಾ ಸರ್ಕಾರಿ / ಅನುದಾನಿತ / ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ 2013-2014 ಮತ್ತು 2013-2015ನೇ ಸಾಲಿನ ಹಾಗೂ ಹಿಂದಿನ ಸಾಲಿನಲ್ಲಿ ಪ್ರವೇಶ ಪಡೆದು ತರಬೇತಿ ಪಡೆದು ಉತ್ತೀರ್ಣರಾದ e-NTC ಹಾಗೂ ಮೇ 2018ರ ಪರೀಕ್ಷೆಯ ವರೆಗಿನ e-NAC  ಗಳನ್ನು ಪಡೆದಿಲ್ಲದಿರುವ ತರಬೇತಿದಾರರ ಪ್ರಸ್ತಾವನೆಯನ್ನು ಸೂಕ್ತ ನಮೂನೆಯಲ್ಲಿ (A1 & B1) ಇಲಾಖೆಯು ದಿನಾಂಕ 24/12/2021 ರಂದು ನೀಡಿರುವ ಪತ್ರದಂತೆ ದಿನಾಂಕ 15/01/2022 ರೊಳಗಾಗಿ ನೀಡಲು ತಿಳಿಸಲಾಗಿತ್ತು.

ತದನಂತರ ಪತ್ರ ದಿನಾಂಕ 19/04/2022 ರಲ್ಲಿ ಪ್ರಸ್ತಾವನೆಯನ್ನು ದಿನಾಂಕ 30/04/2022 ರೊಳಗಾಗಿ ಶೀಘ್ರವಾಗಿ ಸಲ್ಲಿಸಲು ತಿಳಿಸಿದ್ದರೂ ಸಹ ಯಾವುದೇ ಪ್ರಸ್ತಾವನೆಯನ್ನು ಸ್ವೀಕರಿಸದೇ ಇರುವುದರಿಂದ ದಿನಾಂಕ 05/05/2022 ರ ಪತ್ರದಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಲು 30/05/2022ನ್ನು ಅಂತಿಮ ದಿನಾಂಕವನ್ನಾಗಿ ನೀಡಲಾಗಿದೆ. ಅಂತಿಮ ದಿನಾಂಕದ ನಂತರ ಸಲ್ಲಿಸುವ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ. ಸಂಬಂಧಿಸಿದಂತೆ ನಂತರದ ಯಾವುದೇ ಬೆಳವಣಿಗೆಗೆ ಆಯಾ ಸಂಸ್ಥೆಯ ಪ್ರಾಚಾರ್ಯರನ್ನು ಹಾಗೂ ಆಡಳಿತ ಮಂಡಳಿಯನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)