KUM. RASAGNYA : ಕು|| ರಸಜ್ಞ ಎಸ್. ಭರತನಾಟ್ಯ ರಂಗಪ್ರವೇಶ

varthajala
0

 ಮೇ 7 ರಂದು ಕು|| ರಸಜ್ಞ ಎಸ್. ಭರತನಾಟ್ಯ ರಂಗಪ್ರವೇಶ

ಅಯೋಜನೆ : ಸ್ಫೂರ್ತಿ ಸ್ಕೂಲ್ ಆಫ್ ಡ್ಯಾನ್ಸ್, ಬೆಂಗಳೂರು






ಖ್ಯಾತ ಹೃದ್ರೋಗ ತಜ್ಞ ಡಾ. ಎಲ್.ಶ್ರೀಧರ್ ಮತ್ತು ಡಾ.ಎಸ್.ಪದ್ಮಶ್ರೀ ರವರ ಪುತ್ರಿ ಕು|| ರಸಜ್ಞ ಎಸ್. ಭರತನಾಟ್ಯ ರಂಗಪ್ರವೇಶವನ್ನು ಮೇ 7, ಶನಿವಾರ ಸಂಜೆ 5.30ಕ್ಕೆ ನಗರದ ಜಯನಗರ 8ನೇ ಬ್ಲಾಕ್ನ ಜೆ.ಎಸ್.ಎಸ್ ಆಡಿಟೋರಿಯಂನಲ್ಲಿ ಸ್ಫೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ನವರು ಆಯೋಜಿಸಿದ್ದಾರೆ.

ಸ್ಫೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ನ  ಗುರು ವಿದುಷಿ ಸುಮ ರಾಜೇಶ್ ರವರರಲ್ಲಿ ಭರತನಾಟ್ಯ ಅಭ್ಯಾಸ ಮಾಡಿರುವ ರಸಜ್ಞ ತನ್ನ ರಂಗಪ್ರವೇಶಕ್ಕೆ ಇದೀಗ ಸಜ್ಜಾಗಿದ್ದಾಳೆ . ಸಣ್ಣ ವಯಸ್ಸಿನಂದಲೇ ನೃತ್ಯಾಭ್ಯಾಸದಲ್ಲಿ ಒಲವು ಬೆಳೆಸಿಕೊಂಡು ಪೋಷಕರ ಪ್ರೋತ್ಸಾಹದೊಡನೆ ಈ ದೈವೀಕ ಕಲೆಯಲ್ಲಿ ಉತ್ತಮ ಸಾಧನೆ ಮಾಡಲು ಹೊರಟಿರುವ ರಸಜ್ಞ ಕರ್ನಾಟಕ ರಾಜ್ಯ ಬೋರ್ಡ್ ಜ್ಯೂನಿಯರ್ ಲೆವಲ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಉತ್ತೀಣ೵ಳಾಗಿ , ಮೀರಜ್ನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ಮಧ್ಯಮ ಲೆವೆಲ್ ಪರೀಕ್ಷೆಯನ್ನು ಪೂಣ೵ಗೊಳಿಸಿದ್ದಾಳೆ . 8ನೇ ತರಗತಿಯಲ್ಲಿ ಓದುತ್ತಿರುವ ಬಹುಮಖ ಪ್ರತಿಭೆಯ ಈಕೆ ಓದಿನಲ್ಲೂ ಮುಂದು , ಉತ್ತಮ ಚಚಾ೵ಪಟು , ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಳು .

ನಟುವಾಂಗದಲ್ಲಿ ಗುರು ವಿದುಷಿ ಸುಮ ರಾಜೇಶ್ , ವಿದ್ವಾನ್ ಡಿ ಎಸ್ ಶ್ರೀವತ್ಸ - ಗಾಯನ , ಮೃದಂಗ- ವಿ.ನಾರಾಯಣಸ್ವಾಮಿ, ಕೊಳಲು- ವಿ.ಮಹೇಶ್ ಸ್ವಾಮಿ , ವೀಣ- ವಿ.ಗೋಪಾಲ್ ವೆಂಕಟರಮಣ, ಚಿ|| ಸಹಿಷ್ಣು ಶ್ರೀಧರ ಶಾಸ್ತ್ರೀ – ನಿರೂಪಣೆಯೊಂದಿಗೆ  ರಂಗಪ್ರವೇಶದ ಸಂಭ್ರಮ ರಂಗೇರಲಿದೆ. .

 ಜಯದೇವ ಇನ್ಸ್ ಟ್ಯೂಟ್  ಆಫ್ ಕಾರ್ಡಿಯಾಲಜಿಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್ .ಮಂಜುನಾಥ್ , ಉಡುಪ ಫೌಂಡೇಷನ್ ಟ್ರಸ್ಟೀ ಸಂಧ್ಯಾ ಉಡುಪ ಹಾಗು ಪದ್ಮಾಲಯ ಡ್ಯಾನ್ಸ್ ಫೌಂಡೇಷನ್ನ ಸಹ ಕಲಾತ್ಮಕ ನಿರ್ದೇಶಕಿ ಜನನಿ ಮುರಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ .


Post a Comment

0Comments

Post a Comment (0)