ಅಡ್ವಾನ್ಸ್ ಜಲಸಾಹಸ ಮತ್ತು ಭೂಸಾಹಸ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಜೂನ್ 30, (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಂಗಸಂಸ್ಥೆಯಾದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಯುವಜನರಲ್ಲಿ ಸಾಹಸ ಮತ್ತು ಕ್ರೀಡಾ ಪ್ರವೃತ್ತಿ ಬೆಳೆಸಲು ರಾಜ್ಯದ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 16 ರಿಂದ 29 ವರ್ಷದೊಳಗಿನ ದೈಹಿಕವಾಗಿ ಸದೃಡವಾಗಿರುವ ಯುವಕ- ಯುವತಿಯರಿಗೆ ಬೇಸಿಕ್ ಮತ್ತು ಅಡ್ವಾನ್ಸ್ ಜಲಸಾಹಸ ಮತ್ತು ಭೂ ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಿದೆ.

ಅಡ್ವಾನ್ಸ್ ತರಬೇತಿಗೆ ನೋಂದಾಯಿಸುವ ಯುವಕ- ಯುವತಿಯರು ಬೇಸಿಕ್ ತರಬೇತಿಯಲ್ಲಿ    ‘ಎ’ ಗ್ರೇಡ್ ಪಡೆದಿರಬೇಕು. ಶಿಬಿರಕ್ಕೆ ಅರ್ಹವಾಗಿರುವ ಶಿಬಿರಾರ್ಥಿಗಳು ದೈಹಿಕ / ವೈದ್ಯಕೀಯ ಪರೀಕ್ಷೆಗೆ ನೀಡಿದ ನಿಗದಿತ ದಿನಾಂಕದಂದು ಬೆಂಗಳೂರು ನಗರದಲ್ಲಿ ಹಾಜರಾಗಿರಬೇಕು.

ಆಸಕ್ತಿಯಳ್ಳ ಅಭ್ಯರ್ಥಿಗಳು ಜುಲೈ 12 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‍ಸೈಟ್   www.dyes.karnataka.gov.in  ನಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 080-22210454 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Tags

Post a Comment

0Comments

Post a Comment (0)