ಐಐಎಂಎಚ್ಆರ್ ನ ಪಿ.ಜಿ.ಡಿ.ಎಂ ಕೋರ್ಸ್ ನ ಘಟಿಕೋತ್ಸವ: ಡಿಜಿಟಲ್ ಆರೋಗ್ಯ ಕ್ಷೇತ್ರದ ಬೆಳವಣಿಗೆ ಅಗಾಧ - ಸೌರಭ್ ಗುಪ್ತಾ

varthajala
0

 ಬೆಂಗಳೂರು, ಜು, 23; ಆರೋಗ್ಯ ಕ್ಷೇತ್ರ ಅಗಾಧವಾಗಿ ಬೆಳವಣಿಗೆಯಾಗುತ್ತಿದ್ದು, ವಿಶೇಷವಾಗಿ ಡಿಜಿಟಲ್ ಹೆಲ್ತ್ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಕಿಮ್ಸ್ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಸೌರಭ್ ಗುಪ್ತ ಹೇಳಿದ್ದಾರೆ.



ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ _ಐಐಎಚ್ಎಂಆರ್ ನ ಪಿ.ಜಿ.ಡಿ.ಎಂ ಕೋರ್ಸ್ ನ 2020-22 ರ ಸಾಲಿನ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ  ಜಾಗತಿಕವಾಗಿ 820 ದಶಲಕ್ಷ ಹೂಡಿಕೆಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿರುವವರು ಶಿಸ್ತಿನಿಂದ ಕಾರ್ಯನಿರ್ವಹಿಸುವುದು ಅಗತ್ಯವಿದೆ. ಶೇ 70ರಷ್ಟು ಸಮಯವನ್ನು ವೈದ್ಯಕೀಯ ಕ್ಷೇತ್ರದಲ್ಲಿರುವವರು ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಜತೆ ಕಳೆಯುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿರುವವರು ಕುಟುಂಬದ ಜೊತೆ ಕಾಲ ಕಳೆಯುವುದು ಕಡಿಮೆ. ಹಾಗಾಗಿ ರೋಗಿಗಳ ಜೊತೆ ಸಂಬಂಧ ಗಟ್ಟಿಯಾಗುತ್ತವೆ. ಜೊತೆಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿದೆ ಎಂದು  ಅಭಿಪ್ರಾಯಪಟ್ಟರು.

ಟೆಕ್ ಮಹೀಂದ್ರ ಸಂಸ್ಥೆಯ ತರಬೇತಿ ವಿಭಾಗದ ಮುಖ್ಯಸ್ಥ ಜಮಲ್ ಖಾನ್ ಮಾತನಾಡಿ, ಆರೋಗ್ಯ ಕ್ಷೇತ್ರ ನಾಗಾಲೋಟದಲ್ಲಿ ಬೆಳವಣಿಗೆಯಾಗುತ್ತಿದೆ. ವೈದ್ಯಕೀಯ ನಿರ್ವಹಣೆ ಕುರಿತು ಅಧ್ಯಯನ ನಡೆಸಿರುವ ವಿದ್ಯಾರ್ಥಿಗಳು ಪ್ರತಿ ವಿಚಾರದಲ್ಲಿ ಶಿಸ್ತು, ಸಂಯಮ ಮತ್ತು ಜನ ಸಾಮಾನ್ಯರೊಂದಿಗೆ ಉತ್ತಮ ಸಂಪರ್ಕ ಬೆಳಸಿಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಕಿವಿ ಮಾತು ಹೇಳಿದರು.

ಐಐಎಂಎಚ್ ಆರ್ ಸಂಸ್ಥೆಯ ನಿರ್ದೇಶಕರಾದ ಡಾ.ಉಷಾ ಮಂಜುನಾಥ್ ಮಾತನಾಡಿ, ಐಐಎಚ್ ಎಂ ಆರ್ ಆರೋಗ್ಯ ನಿರ್ವಹಣಾ ಕ್ಷೇತ್ರದಲ್ಲಿ ದಕ್ಷಿಣ ಭಾರತದ ಪ್ರಮುಖ ಸಂಸ್ಥೆಯಾಗಿದ್ದು, ಆರೋಗ್ಯ, ಆಸ್ಪತ್ರೆ. ಔಷಧ ವಲಯದ ನಿರ್ವಹಣೆಗೆ ಒತ್ತು ನೀಡುತ್ತಿದೆ. ಆರೋಗ್ಯ ಮಾಹಿತಿ ತಂತ್ರಜ್ಞಾನ ನಿರ್ವಹಣೆಯಲ್ಲಿ ಎರಡು ವರ್ಷಗಳ ಪೂರ್ಣಾವಧಿಯ ಸ್ನಾತಕೋತ್ತರ ಕೋರ್ಸ್‍ಗೆ ಅತ್ಯುತ್ತಮ ಬೇಡಿಕೆ ಇದೆ. ಬೆಂಗಳೂರಿಗೆ ಟಾಪ್ 50 ಬಿ-ಸ್ಕೂಲ್‍ನಲ್ಲಿ 19 ನೇ ಶ್ರೇಯಾಂಕ ನೀಡಲಾಗಿದೆ ಎಂದು ಹೇಳಿದರು.

ನಮ್ಮ ವಿದ್ಯಾರ್ಥಿಗಳು ಹಾಕಿದ ಕಠಿಣ ಪರಿಶ್ರಮ ಮತ್ತು ಸಂಸ್ಥೆ ನೀಡುವ ಗುಣಮಟ್ಟದ ಶಿಕ್ಷಣದಿಂದ ಶೇ 100 ರಷ್ಟು ಉದ್ಯೋಗ ಪಡೆಯಲು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು.

ಬೆಂಗಳೂರು ಐಐಐಟಿ ಮಾಜಿ ನಿರ್ದೇಶಕ ಪೆÇ್ರೀ. ಸಡಗೋಪನ್ ಮಾತನಾಡಿ, ವಿದ್ಯಾರ್ಥಿ ಜೀವನದಿಂದ ವೃತ್ತಿಪರ ಜೀವನಕ್ಕೆ ಪರಿವರ್ತನೆಗೊಳ್ಳುತ್ತಿರುವ ಇವರು ಆರೋಗ್ಯ ವ್ಯವಸ್ಥೆಯ  ರಾಯಭಾರಿಗಳಾಗಿದ್ದಾರೆ. ಮಾದರಿಯಾಗಿ ತಮ್ಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದಾರೆ. ಈಗಾಗಲೇ ಆರೋಗ್ಯ ವಲಯದ ಭಾಗವಾಗಿರುವ ಇವರು ಮಹತ್ವದ ಸಾಧನೆ ಮಾಡಲಿ ಎಂದು ಹಾರೈಸಿದರು.

ಪೆÇರ್ಟಿಯೇ ಮೆಡಿಕಲ್ ಸಚಿನ್ ಕುಮಾರ್, ಐಐಎಚ್‍ಎಂಆರ್ ನ ಸಂಸ್ಥಾಪಕ ಟ್ರಸ್ಟೀ ಡಾ. .ಅಶೋಕ್ ಅಗರ್ವಾಲ್, ಟ್ರಸ್ಟಿ  ಬಸಿತ್ ಡಾ. ಯಸ್ ಡಿ ಗುಪ್ತ, ಮತ್ತಿತರರು ಘಟಿಕಲೋತ್ಸವದಲ್ಲಿ ಪಾಲ್ಗೊಂಡಿದ್ದರು.

Post a Comment

0Comments

Post a Comment (0)