MSIL : ಎಂಎಸ್ಐಎಲ್ ಪ್ರಸಕ್ತ ಸಾಲಿನಲ್ಲಿ ರೂ.91 ಕೋಟಿ ನಿವ್ವಳ ಲಾಭ

varthajala
0

ಬೆಂಗಳೂರು, ಆಗಸ್ಟ್ 25 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಸರ್ಕಾರದ ಸಂಸ್ಥೆಯಾದ ಮೈಸೂರ್ ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಂಸ್ಥೆಯು 2021-22 ನೇ ಸಾಲಿನಲ್ಲಿ ರೂ.2901 ಕೋಟಿಗಳ ವಹಿವಾಟು ನಡೆಸಿ, ಒಟ್ಟು ರೂ.91 ಕೋಟಿಯಷ್ಟು ನಿವ್ವಳ ಲಾಭ ಗಳಿಸಿದೆ.  ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.33 ರಷ್ಟು ಹೆಚ್ಚು ಲಾಭ ಗಳಿಸಿದ್ದು, 2022-23ನೇ ಸಾಲಿನಲ್ಲಿ, ರೂ.3350 ಕೋಟಿಯ ವಹಿವಾಟು ನಡೆಸಲು ಯೋಜಿಸಲಾಗಿದೆ. ಇದರಿಂದ ಅಂದಾಜು ರೂ.110 ಕೋಟಿಯಷ್ಟು ನಿವ್ವಳ ಲಾಭ ಗಳಿಸುವ ನಿರೀಕ್ಷೆ ಹೊಂದಿದೆ.


ಸಂಸ್ಥೆಯು ಯಶಸ್ವಿಯಾಗಿ 6 ದಶಕಗಳನ್ನು ಪೂರೈಸುವತ್ತ ಮುನ್ನಡೆದಿದ್ದು, ಚಿಲ್ಲರೆ ಮದ್ಯ ಮಾರಾಟ, ಚಿಟ್ ಫಂಡ್, ವಿದ್ಯಾ ಮತ್ತು ಲೇಖಕ್ ಬ್ರಾಂಡ್ ನ ನೋಟ್ ಶುಸ್ತಕಗಳು ಮತ್ತು ಲೇಖನ ಸಾಮಗ್ರಿ, ಸೋಬಾರ್ ವಾಟರ್ ಹೀಟರ್, ಪ್ರವಾಸ ಮತ್ತು ಪ್ರಯಾಣ, ಜನರಿಕ್  ಔಷಧಿ ಹಾಗೂ ಇನ್ನಿತರೇ ಉತ್ಪನ್ನಗಳ ಮಾರಾಟ ಮತ್ತು ಸೇವೆಗಳು ತೊಡಗಿಸಿಕೊಂಡಿದೆ.
ಅನಧಿಕೃತ ಚಿಟ್‍ ಕಂಪನಿಗಳಿಂದ ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸಲು ಎಂಎಸ್ಐಎಲ್ ಸಂಸ್ಥೆಯು ಚಿಟ್ ಫಂಡ್ ವ್ಯವಹಾರವನ್ನು ನಡೆಸುತ್ತಿದ್ದು, ಪ್ರಸ್ತುತ 26 ಚಡ್ ಶಾಖೆಗಳನ್ನು ಹೊಂದಿದ್ದು 2 ಲಕ್ಷಕ್ಕೂ ಅಧಿಕ ಚಂದಾದಾರರು ಈವರೆಗೂ ಚಿಟ್ ಫಂಡ್ ಅನುಕೂಲವನ್ನು ಪಡೆದಿರುತ್ತಾರೆ.

ರಾಜ್ಯಾದ್ಯಂತ ಎಂಎಸ್ಐಎಲ್ ಸಂಸ್ಥೆಯ ಒಟ್ಟು 980 ಮದ್ಯ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮದ್ಯವನ್ನು ಎಂಆರ್ಪಿ ದರದಲ್ಲಿ ಒದಗಿಸುವ ಉದ್ದೇಶ ಎಂಎಸ್ಐಎಲ್ ಸಂಸ್ಥೆಯದ್ದಾಗಿದೆ. ಮುಂದುವರೆದು, ಎಂಎಸ್ಐಎಲ್ ಸಂಸ್ಥೆಯು ಸುಮಾರು 5 ದಶಕಗಳಿಂದ ಅತ್ಯುತ್ತಮ ಗುಣಮಟ್ಟದ ವಿದ್ಯಾ ಹಾಗೂ ಲೇಖಕ್ ನೋಟ್ ಮಸ್ತಕಗಳನ್ನು ವಿದ್ಯಾರ್ಥಿ ವೃಂದಕ್ಕೆ ಒದಗಿಸುತ್ತಾ ಬಂದಿದೆ. ನೋಟ್ ಮಸ್ತಕಗಳ ಉತ್ಪಾದನೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಂಸ್ಥೆಯು ಉತ್ತೇಜನ ನೀಡುತ್ತಿದ್ದು ಹಲವಾರು ಜನರಿಗೆ ಪರೋಕ್ಷವಾಗಿ ಉದ್ಯೋಗವನ್ನು ಒದಗಿಸಲಾಗಿರುತ್ತದೆ.

ನವೀಕರಿಸಬಹುದಾದ ಇಂಧನದ ಬಳಕೆಗೆ ಸರ್ಕಾರವು ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ಎಂಎಸ್ಐಎಲ್ ಸಂಸ್ಥೆಯು ಸೋಲಾರ್ ಉತ್ಪನ್ನಗಳನ್ನು ಕೂಡ ಮಾರಾಟ ಮಾಡುತ್ತಿದೆ. ಎಂಎಸ್ಐಎಲ್ ಸಂಸ್ಥೆಯು ಪ್ರಧಾನ ಮಂತ್ರಿ ಜನೌಷಧಿ ಯೋಜನೆಯಲ್ಲಿಯೂ ಭಾಗಿಯಾಗಿದ್ದು, ಎಲ್ಲಾ ವರ್ಗದ ಜನರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಜನರಿಕ್ ಔಷಧಿಯನ್ನು ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ 87 ಜನೌಷಧಿ ಮಳಿಗೆಗಳನ್ನು ವಿವಿಧ ಸರ್ಕಾರಿ, ಆಸ್ಪತ್ರೆಗಳ ಆವರಣಗಳಲ್ಲಿ ಪ್ರಾರಂಭಿಸಿ ಕಾರ್ಯನಿರ್ವಹಿಸಲಾಗುತ್ತಿದೆ.

ಪ್ರವಾಸ ಮತ್ತು ಪ್ರಯಾಣ ಉದ್ಯಮದಲ್ಲಿ ಇರುವ ಅವಕಾಶಗಳನ್ನು ಮನಗಂಡು ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸ ಪ್ಯಾಕೇಜ್ಗಳನ್ನು ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ದರಗಳಲ್ಲಿ ನಡೆಸುತ್ತಿದೆ.

ಸಂಸ್ಥೆಯ ಕಾರ್ಯಕ್ಷಮತೆಯನ್ನು ಗುರುತಿಸಿ ವಿಶ್ವದಾದ್ಯಂತ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಸಂಶೋಧನೆ ನಡೆಸಿ ಏಷ್ಯಾ ಒನ್ ಮ್ಯಾಗಜಿನ್ ಹಾಗೂ URS Media Internationalರವರು ವಿಕಾಶ್ ಕುಮಾರ್ ವಿಕಾಶ್, ಐ.ಪಿ.ಎಸ್, ವ್ಯವಸ್ಥಾಪಕ ನಿರ್ದೇಶಕರು ಇವರಿಗೆAsiaone Global Indian of the year 2021-22 ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಈ ಪ್ರಶಸ್ತಿಯನ್ನು ದಿನಾಂಕ: 25/08/2022 ರಂದು ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಪ್ರಧಾನ ಮಾಡಲಾಗಿದೆ. ವಿವಿಧ ದೇಶಗಳಲ್ಲಿನ ರಾಯಭಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಸ್ಥೆಗಳ ಮಾಲೀಕರು, ಹೂಡಿಕೆದಾರರು ಹಾಗೂ ವೃತ್ತಿಪರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

Post a Comment

0Comments

Post a Comment (0)