`ನೀರುಗಾಲುವೆ ಮತ್ತು ರಾಜಕಾಲುವೆ ಒತ್ತುವರಿಗೆ ಅಧಿಕಾರಿಗಳೆ ನೇರ ಹೊಣೆ'

varthajala
0

ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಆವರಣದಲ್ಲಿ ಎಸ್.ಡಬ್ಲ್ಯೂ. ಡಿ.(ಮಳೆ ನೀರುಗಾಲುವೆ) ಮತ್ತು ನಗರದಲ್ಲಿ ರಾಜಕಾಲುವೆ ಒತ್ತುವರಿಯಿಂದ  ಉಂಟಾದ ಪ್ರವಾಹಕ್ಕೆ ಕಾರಣ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ದಾಖಲೆಗಳನ್ನು ಬಿಡುಗಡೆ  ಮತ್ತು ದೂರು ನೀಡುವ ಬಗ್ಗೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಅಮರೇಶ್ ರವರು ಮತ್ತು ಟ್ರಸ್ಟಿಯಾದ ಬಿ.ಹೆಚ್.ವಿರೇಶ್ ರವರು  ಮಾಧ್ಯಮಗಳಿಗೆ ಮಾಹಿತಿ ನೀಡಿದರು.


ಎಸ್.ಅಮರೇಶ್ ರವರು ಮಾತನಾಡಿ ಬಿ.ಬಿ.ಎಂ.ಪಿ.ವ್ಯಾಪ್ತಿಯಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದ ಉಂಟಾದ ಪ್ರವಾಹಕ್ಕೆ ಬಿ.ಬಿ.ಎಂ.ಪಿ.ಅಧಿಕಾರಿಗಳು ಮತ್ತು ಇಂಜನಿಯರ್ ಗಳ ಭಷ್ಟಚಾರ ಮತ್ತು ಕರ್ತವ್ಯ ಲೋಪ ಎಸೆಗಿದ್ದಾರೆ .

2007 ಮತ್ತು 2008ರಲ್ಲಿ ಕೇಂದ್ರ ಸರ್ಕಾರದ ಜೆ.ಎನ್.ಯು.ಐ.ಆರ್.ಎಮ್.ಯೋಜನೆ ಅಡಿಯಲ್ಲಿ ಬೆಂಗಳೂರುನಗರ ಅಭಿವೃದ್ದಿಗೆ ಸಾವಿರಾರು ಕೋಟಿ ನೀಡಿದ್ದಾರೆ.

ಇದರಲ್ಲಿ ನೂರಾರು ಕೋಟಿ ರೂಪಾಯಿ ಎಸ್.ಡ್ಲ್ಯೂ.ಡಿ.ಕಾಮಗಾರಿಗಳು ನಡೆಸದೇ ಹಣ ಬಿಡುಗಡೆ ಗೊಳಿಸಲಾಗಿದೆ.

ಈ ಹಿಂದೆ ಬಿ.ಬಿ.ಎಂ.ಪಿ.ಆಯುಕ್ತರು ಒತ್ತುವರಿಯಾದ ಸಾವಿರಾರು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.

ಒತ್ತುವರಿ ಮಾಡಿಕೊಂಡ 1988ಒತ್ತುವರಿ ಕಟ್ಟಡಗಳನ್ನು ತೆಗೆದುಹಾಕಲಾಗಿದೆ ಉಳಿದ 763ಕಟ್ಟಡಗಳ ತೆರವುಗೊಳಿಸುವುದು ಬಾಕಿ ಇದೆಯೆಂದು ಬಿ.ಬಿ.ಎಂ.ಪಿ.ವತಿಯಿಂದ ಸಿ.ಎ.ಜಿ.ಯ ಗಮನಕ್ಕೆ ತಂದಿದೆ. ಕಟ್ಟಡ ತೆರವುಗೊಳಿಸಿದ ಅವಶೇಷಗಳು ಇಲ್ಲ, ತೆರವು ಹೆಸರಿನಲ್ಲಿ ಹಣ ಲೂಟಿ ಮಾಡಿದರು.

ಪ್ರಭಾವಿ ಪ್ರತಿಷ್ಟಿತ ವ್ಯಕ್ತಿಗಳು,ಸಂಸ್ಥೆಗಳು ಯಾವುದೇ  ಪ್ರಭಾವಕ್ಕೆ ಸರ್ಕಾರ  ಮಣಿಯದೇ ಒತ್ತುವರಿ ತೆರವು ಮಾಡಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರಿಗೆ ಮನವಿ ಮಾಡಿದರು.

ಬಿ.ಹೆಚ್.ವಿರೇಶ್ ರವರು ಮಾತನಾಡಿ ರಾಜಕಾಲುವೆ ಮತ್ತು ನೀರುಗಾಲುವೆ ಮೇಲೆ ಭಾಗ ಮುಚ್ಚುವುದು ಮತ್ತು ರಾಜಕಾಲುವೆ ಹರಿಯುವ ಜಾಗ ಕಾಂಕ್ರೀಟ್ ಕರಣ ಮಾಡುವುದು ಮತ್ತು ಗಾಲುವೆಗಳನ್ನು ಕಿರಿದಾಗಿ ಮಾಡುವುದರಿಂದ ಮಳೆ ನೀರು ರಸ್ತೆ ಹರಿದು ಜಲಪ್ರವಾಹ ಉಂಟಾಗುತ್ತದೆ.

ಮಳೆ ನೀರು ಸರಾಗವಾಗಿ ಸಾಗಲು ಕಠಿಣ ಕ್ರಮ ಕೈಗೊಂಡು ಒತ್ತುವರಿ ತೆರವು ಗೊಳಿಸಿದರೆ ಮಾತ್ರ ಇಂತಹ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿದರು.

Post a Comment

0Comments

Post a Comment (0)