ಸ್ವಿಗ್ಗಿಯಿಂದ ``ಸ್ವಿಗ್ಗಿ ಸ್ಕಿಲ್ಸ್ ಅಕಾಡೆಮಿ’’ ಆರಂಭ

varthajala
0

·       ವಿತರಣಾ ಪ್ರತಿನಿಧಿಗಳು ಮತ್ತು ಅವರ ಮಕ್ಕಳಿಗೆ ಕಲಿಕೆಗಾಗಿ ಈ ಅಕಾಡೆಮಿ

·       ಡೆಲಿವರಿ ಪಾರ್ಟ್ನರ್ ಆ್ಯಪ್ ಮೂಲಕ ಇಂಗ್ಲೀಷ್ ಕಲಿಕೆ, ಐಟಿ, ವ್ಯಕ್ತಿಗತ ಆರ್ಥಿಕತೆ ಮತ್ತು ಕಂಪ್ಯೂಟರ್ ಕೌಶಲ್ಯಗಳ ಕಲಿಕೆ

·       ಸ್ವಿಗ್ಗಿಯೊಂದಿಗೆ ಇರುವ ವಿತರಣಾ ಪ್ರತಿನಿಧಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮ

·       ಈಗಾಗಲೇ ವಿತರಣಾ ಪ್ರತಿನಿಧಿಗಳ 24,000 ಕ್ಕೂ ಹೆಚ್ಚು ಮಕ್ಕಳು ಆನ್ ಲೈನ್ ಶಿಕ್ಷಣ ಕಂಟೆಂಟ್ ಗಳನ್ನು ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ

·       ಗೂಗಲ್ ನ ರೀಡ್ ಅಲಾಂಗ್ ಮತ್ತು ಖಾನ್ ಅಕಾಡೆಮಿಯೊಂದಿಗೆ ಸ್ವಿಗ್ಗಿ ಒಡಂಬಡಿಕೆ


ಬೆಂಗಳೂರು, ಸೆಪ್ಟೆಂಬರ್ 13, 2022: ಭಾರತದ ಆನ್-ಡಿಮ್ಯಾಂಡ್ ಕನ್ವೀನಿಯನ್ಸ್ ಪ್ಲಾಟ್ ಫಾರ್ಮ್ ಆಗಿರುವ ಸ್ವಿಗ್ಗಿ ಇಂದು ಸ್ವಿಗ್ಗಿ ಸ್ಕಿಲ್ಸ್ ಅಕಾಡೆಮಿಯನ್ನು ಘೋಷಣೆ ಮಾಡಿದೆ. ಇದು ತನ್ನ ವಿತರಣಾ ಪ್ರತಿನಿಧಿಗಳು ಮತ್ತು ಅವರ ಮಕ್ಕಳಿಗೆ ಕ್ಯುರೇಟೆಡ್, ಮಲ್ಟಿಸ್ಕಿಲ್ಲಿಂಗ್ ಮತ್ತು ಮಲ್ಟಿಲಿಂಗ್ವಲ್ ಕಲಿಕೆಯ ಮೂಲಕ ತರಬೇತಿಯನ್ನು ನೀಡಲಿದೆ.

ಸ್ವಿಗ್ಗಿ ಸ್ಕಿಲ್ಸ್ ಅಕಾಡೆಮಿಯು ವಿವಿಧ ಕಲಿಕೆ ಅವಕಾಶಗಳು ಮತ್ತು ಅಭಿವೃದ್ಧಿ ಅವಕಾಶಗಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸುವ ಮೂಲಕ ಸ್ವಿಗ್ಗಿಯ ಡೆಲಿವರಿ ಪ್ರತಿನಿಧಿಗಳು ವೃತ್ತಿಪರರಾಗಿ ಮತ್ತು ವೈಯಕ್ತಿಕವಾಗಿ ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ. ಅಲ್ಲದೇ, ಭವಿಷ್ಯಕ್ಕೆ ಸಿದ್ಧವಾಗುವ ವೃತ್ತಿಪರರನ್ನಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯಲು ಒಂದು ಮೆಟ್ಟಿಲಾಗಿ ಕಾರ್ಯನಿರ್ವಹಣೆ ಮಾಡುತ್ತದೆ.

ಸ್ವಿಗ್ಗಿಯ ವಿತರಣೆ ಪ್ರತಿನಿಧಿಗಳ ಆಕಾಂಕ್ಷೆಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನಡೆಸಿರುವ ವಿವರವಾದ ಅಧ್ಯಯನ ಆಧಾರದ ಮೇಲೆ ಅಕಾಡೆಮಿಯ ಕೋರ್ಸ್ ಗಳ ವಿಷಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವರ ಪ್ರಸ್ತುತ ಪಾತ್ರ ಮತ್ತು ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು, ಸ್ವಿಗ್ಗಿಯ ಹೊಸ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು, ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಗೌರವವನ್ನು ಹೆಚ್ಚಿಸಲು ಹಾಗೂ ಸ್ವಿಗ್ಗಿಯ ಹೆಚ್ಚಿನ ಅವಕಾಶಗಳಿಗೆ ಅವರನ್ನು ಸಿದ್ಧಪಡಿಸುವ ದಿಸೆಯಲ್ಲಿ ಸಹಾಯ ಮಾಡುವ ಕೌಶಲ್ಯಗಳನ್ನು ಪಡೆದುಕೊಳ್ಳುವ ಮೂಲಕ ಆಕಾಂಕ್ಷೆಗಳನ್ನು ಹೊಂದಿದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಇದೇ ರೀತಿ, ಸ್ವಿಗ್ಗಿ ಸ್ಕಿಲ್ಸ್ ಅಕಾಡೆಮಿ

 

ಎಲ್ಲಾ ನಾಲ್ಕು ಸ್ತಂಭಗಳ ಮೇಲೆ ರಚನೆಯಾಗಿದೆ. ಅವುಗಳಲ್ಲಿ ಪ್ರಮುಖವಾದವು:-

·       ಎಲ್ಲರಿಗೂ ಕೌಶಲ್ಯಗಳು(ಸ್ಕಿಲ್ಸ್ ಫಾರ್ ಆಲ್)- ಅಕಾಡೆಮಿಯಲ್ಲಿ ಇಂಗ್ಲೀಷ್ ಮಾತನಾಡುವುದು, ಸಮಯ ನಿರ್ವಹಣೆ, ನೈರ್ಮಲ್ಯ ಮತ್ತು ಉತ್ತಮ ಉಡುಗೆ ಧರಿಸುವುದು, ಕಂಪ್ಯೂಟರ್ ಬಳಕೆ, ವೈಯಕ್ತಿಕ ಹಣಕಾಸು ನಿರ್ವಹಣೆ ಹಾಗೂ ಮಾನಸಿಕ-ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಸೇರಿದಂತೆ ಮತ್ತಿತರೆ ವಿಚಾರಗಳ ಬಗೆಗಿನ ಕೋರ್ಸ್ ಗಳು ಇರಲಿವೆ.

        ಮಕ್ಕಳಿಗೆ ಕೌಶಲ್ಯಗಳು(ಸ್ಕಿಲ್ಸ್ ಫಾರ್ ಚಿಲ್ಡ್ರನ್)- ಸುಮಾರು ಶೇ.40 ರಷ್ಟು ಸ್ವಿಗ್ಗಿ ವಿತರಣಾ ಪ್ರತಿನಿಧಿಗಳು ಮಕ್ಕಳನ್ನು ಹೊಂದಿದ್ದಾರೆ. ಈ ಮಕ್ಕಳಲ್ಲಿ ಶೇ.70 ಕ್ಕೂ ಹೆಚ್ಚು ಮಕ್ಕಳು 5 ವರ್ಷಕ್ಕಿಂತ ಹೆಚ್ಚಿನವರಾಗಿದ್ದಾರೆ. ಸುಮಾರು 30,000 ಮಕ್ಕಳು  ಒಡಹುಟ್ಟಿದವರಾಗಿದ್ದಾರೆ, ಸಂಬಂಧಿಕರಾಗಿದ್ದಾರೆ ಹಾಗೂ ವಿತರಣಾ ಪ್ರತಿನಿಧಿಗಳ ಬಂಧುಗಳಾಗಿದ್ದು, ಇವರಿಗೆ ಸ್ವಿಗ್ಗಿ ಸ್ಕಿಲ್ಸ್ ಅಕಾಡೆಮಿಯ ಮೂಲಕ ಶೈಕ್ಷಣಿಕ ಬೆಂಬಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ವಯೋಮಾನದ ಮಕ್ಕಳು ವೃತ್ತಿ ಸಮಾಲೋಚನೆ ಮತ್ತು ಉನ್ನತ ಗುಣಮಟ್ಟದ ಆನ್ ಲೈನ್ ಶೈಕ್ಷಣಿಕ ವಿಷಯವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ ಮತ್ತು ವಿತರಣಾ ಪಾಲುದಾರರು ಸ್ವಿಗ್ಗಿಯಿಂದ ಹೊರ ಬಂದ ನಂತರವೂ ಈ ಅವಕಾಶವನ್ನು ಪಡೆದುಕೊಳ್ಳುವುದನ್ನು ಮುಂದುವರಿಸಲಿದ್ದಾರೆ. ಆರಂಭದ ಮೊದಲ ಕೆಲವು ದಿನಗಳಲ್ಲಿ 24,000 ಮಕ್ಕಳು ಈಗಾಗಲೇ ಸ್ವಿಗ್ಗಿ ಸ್ಕಿಲ್ಸ್ ಅಕಾಡೆಮಿಯನ್ನು ಆಯ್ಕೆ ಮಾಡಿಕೊಂಡಿವೆ. ಅದರ ಪಾಲುದಾರರು ಮತ್ತು ಅವರ ಕುಟುಂಬಗಳ ನಡುವೆ ಕಲಿಕೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಸ್ವಿಗ್ಗಿಯ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿ ಗುರುತಿಸಲಾಗಿದೆ.

        ಪ್ರಗತಿಗೆ ಕೌಶಲ್ಯಗಳು(ಸ್ಕಿಲ್ಸ್ ಫಾರ್ ಗ್ರೋತ್)- ಫ್ಲೀಟ್ ಮ್ಯಾನೇಜರ್ ಅಥವಾ ಟೀಂ ಲೀಡ್ ನಂತಹ ಸ್ವಿಗ್ಗಿಯಲ್ಲಿ ಹೊಸ ಜವಾಬ್ದಾರಿಗಳನ್ನು ಅನ್ವೇಷಣೆ ಮಾಡಲು ಅಥವಾ ನಿಭಾಯಿಸಲು ಬಯಸುವವರಿಗೆ ಕೋರ್ಸನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ಈ ಹುದ್ದೆಗಳಿಗೆ ಅರ್ಹವಾದ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿದ ಔಪಚಾರಿಕವಾದ ರಚನೆಯನ್ನು ಹೊಂದಿದೆ. ಈ ಕೋರ್ಸ್ ಗೆ ಆಯ್ಕೆ ಮಾಡಿಕೊಳ್ಳುವ ಪಾಲುದಾರರು ಸ್ವಿಗ್ಗಿ ಪಾಲುದಾರಿಕೆಯನ್ನು ಹೊಂದಿರುವ ವಿವಿಧ ರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ ಪ್ರಮಾಣೀಕರಣಗಳನ್ನು ಸ್ವೀಕರಿಸುತ್ತವೆ.

        ಜೀವನಕ್ಕಾಗಿ ಕೌಶಲ್ಯಗಳು(ಸ್ಕಿಲ್ಸ್ ಫಾರ್ ಲೈಫ್)- ಮೆಟ್ರಿಕ್ಯುಲೇಶನ್, ಮಧ್ಯಂತರ ಶಿಕ್ಷಣ, ಉನ್ನತ ಶಿಕ್ಷಣ ಅಥವಾ ವೃತ್ತಿಪರ ಪ್ರಮಾಣೀಕರಣಗಳನ್ನು ಪೂರ್ಣಗೊಳಿಸಲು ಕಾರ್ಯನಿರ್ವಾಹಕರನ್ನು ಬೆಂಬಲಿಸುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಮಾಡಿಕೊಳ್ಳಲಾಗಿದೆ.

 

ಪ್ರಮುಖ ಪರಿಣತರೊಂದಿಗೆ ಪಾಲುದಾರಿಕೆ

ಗೂಗಲ್ ನ ಧ್ವನಿ ಆಧಾರಿತ ರೀಡಿಂಗ್ ಟೂಲ್ ಆಗಿರುವ ರೀಡ್ ಅಲಾಂಗ್, ಮಕ್ಕಳಿಗೆ ಸ್ಪಷ್ಟವಾಗಿ ಓದಲು ಕಲಿಸುವ ಮತ್ತು ವಿವಿಧ ಕೋರ್ಸ್ ಗಳು ಹಾಗೂ ಪ್ರಮಾಣೀಕೃತ ಕೋರ್ಸ್ ಗಳನ್ನು ನೀಡುವ ಲಾಭ ರಹಿತ ಶಿಕ್ಷಣ ಸಂಸ್ಥೆಯಾಗಿರುವ ಖಾನ್ ಅಕಾಡೆಮಿಯೊಂದಿಗೆ ಸ್ವಿಗ್ಗಿ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

 

ಸ್ವಿಗ್ಗಿಯು ಈ ವರ್ಷದ ಜೂನ್ ನಲ್ಲಿ ಮುಂಬೈ ಮತ್ತು ಹೈದ್ರಾಬಾದ್ ನಲ್ಲಿ ``ಸ್ಕಿಲ್ಸ್ ಫಾರ್ ಆಲ್’’ ಮತ್ತು ``ಸ್ಕಿಲ್ಸ್ ಫಾರ್ ಚಿಲ್ಡ್ರನ್’’ ಅಡಿಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ``ಸ್ಕಿಲ್ಸ್ ಫಾರ್ ಆಲ್’’ನಲ್ಲಿ ಇಂಗ್ಲೀಷ್ ಮಾತನಾಡುವುದು ಮತ್ತು ಹಣಕಾಸು ನಿರ್ವಹಣೆ ಕೋರ್ಸ್ ಗಳನ್ನು ಹೇಳಿಕೊಡಲಾಯಿತು. ವಿತರಣಾ ಪ್ರತಿನಿಧಿಗಳ ಮಕ್ಕಳಿಗೆ ``ಸ್ಕಿಲ್ಸ್ ಫಾರ್ ಚಿಲ್ಡ್ರನ್’’ ನಡಿ ಗಣಿತ ಕಲಿಕೆ ಮತ್ತು ರೀಡಿಂಗ್ ಕಾಂಪ್ರಿಹೆನ್ಷನ್ ಕೋರ್ಸ್ ಗಳನ್ನು ಕಲಿಸಲಾಗಿದೆ. ಈ ಎರಡು ಕೋರ್ಸ್ ಗಳು ಈಗಾಗಲೇ ಸ್ವಿಗ್ಗಿಯ ಸಂಪೂರ್ಣ ಫ್ಲೀಟ್ ನ 3 ಲಕ್ಷಕ್ಕೂ ಅಧಿಕ ವಿತರಣಾ ಪಾಲುದಾರರಿಗೆ ಲಭ್ಯವಿವೆ. ಮುಂದಿನ ಕೆಲವೇ ತಿಂಗಳುಗಳಲ್ಲಿ `ಸ್ಕಿಲ್ಸ್ ಫಾರ್ ಗ್ರೋತ್’ ಮತ್ತು `ಸ್ಕಿಲ್ಸ್ ಫಾರ್ ಲೈಫ್’ ಕೋರ್ಸ್ ಗಳು ಲಭ್ಯವಾಗಲಿವೆ.

 

ಈ ಬಗ್ಗೆ ಮಾತನಾಡಿದ ಸ್ವಿಗ್ಗಿಯ ಕಾರ್ಯಾಚರಣೆ ಮುಖ್ಯಸ್ಥ ಮಿಹಿರ್ ರಾಜೇಶ್ ಶಾ ಅವರು, ``ಈ ಡಿಜಿಟಲ್ –ಫಸ್ಟ್ ಆರ್ಥಿಕತೆಯಲ್ಲಿ ನಮ್ಮ ವಿತರಣಾ ಪ್ರತಿನಿಧಿಗಳು ತಮ್ಮ ಬೆಳವಣಿಗೆ ಮತ್ತು ಹೆಚ್ಚು ಹೆಚ್ಚು ಅವಕಾಶಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಸ್ವಿಗ್ಗಿಯೊಳಗೆ ಹಾಗೂ ಹೊರಗೆ ಅವರನ್ನು ಅತ್ಯುತ್ತಮ ಕೌಶಲ್ಯಭರಿತರು ಮತ್ತು ವಿಶ್ವಾಸದಿಂದ ಮುನ್ನಡೆಯುವಂತೆ ಮಾಡಿ ಯಶಸ್ವಿಯಾಗಿ ಭವಿಷ್ಯಕ್ಕೆ ಸಜ್ಜುಗೊಳ್ಳುವಂತೆ ಮಾಡುವ ಉದ್ದೇಶದಿಂದ ಈ ಕೋರ್ಸ್ ಗಳನ್ನು ಪರಿಚಯಿಸಿದ್ದೇವೆ’’ ಎಂದು ತಿಳಿಸಿದರು.

 

ಈ ಉಪಕ್ರಮದ ಬಗ್ಗೆ ಮಾತನಾಡಿದ ಸ್ವಿಗ್ಗಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಿರೀಶ್ ಮೆನನ್ ಅವರು, ``ಸ್ವಿಗ್ಗಿ ಸ್ಕಿಲ್ಸ್ ನೊಂದಿಗೆ ನಮ್ಮ ಪ್ರತಿನಿಧಿಗಳ ಬೆಳವಣಿಗೆ ಮತ್ತು ಪ್ರಗತಿಗೆ ಅವಕಾಶವನ್ನು ಸೃಷ್ಟಿಸುವ ಗುರಿಯೊಂದಿಗೆ ನಮ್ಮ ಜವಾಬ್ದಾರಿಯನ್ನು ಪೂರೈಸುವ ನಿಟ್ಟಿನಲ್ಲಿ ನಾವು ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ನಮ್ಮ ವಿತರಣಾ ಪ್ರತಿನಿಧಿಗಳಿಗೆ ಸುಸಜ್ಜಿತವಾದ ಕಲಿಕೆ ಮತ್ತು ಅಭಿವೃದ್ಧಿಯ ಮಾರ್ಗವನ್ನು ಒದಗಿಸುವುದು ಅವರ ಪ್ರಸ್ತುತ ಪಾತ್ರದಲ್ಲಿ ಅವರಿಗೆ ಪ್ರಯೋಜನವನ್ನು ನೀಡುವುದಲ್ಲದೇ ಅವರ ದೀರ್ಘಾವಧಿಯ ಆಕಾಂಕ್ಷೆಗಳನ್ನು ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ’’ ಎಂದು ತಿಳಿಸಿದರು.

 

ಸ್ವಿಗ್ಗಿ ಸ್ಕಿಲ್ಸ್ ಅಕಾಡೆಮಿಯಲ್ಲಿ ನೋಂದಣಿ ಮಾಡಿಕೊಂಡಿರುವ ಮುಂಬೈನ ವಿತರಣಾ ಪ್ರತಿನಿಧಿ ಚಂದ್ರಕಾಂತ್ ಯಾದವ್ ಅವರು ಮಾತನಾಡಿ, ``ಸ್ವಿಗ್ಗಿಯ ಈ ಉಪಕ್ರಮವು ನಮ್ಮ ಜ್ಞಾನವನ್ನು ಸುಧಾರಣೆ ಮತ್ತು ವಿಸ್ತರಣೆ ಮಾಡುವುದಷ್ಟೇ ಅಲ್ಲ, ನಮ್ಮ ವೃತ್ತಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಮ್ಮ ವಿತರಣೆ ಕೆಲಸದ ಜೊತೆ ಜೊತೆಯಲ್ಲೇ ಈ ಕೋರ್ಸ್ ಗಳನ್ನು ಕಲಿಯಲು ಅವಕಾಶವಿರುವುದು ನಮಗೆ ದೊಡ್ಡ ಪ್ರಯೋಜನವಾಗಿದೆ. ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಭವಿಷ್ಯದಲ್ಲಿ ನನ್ನ ಸ್ವಂತ ವ್ಯವಹಾರವನ್ನು ಆರಂಭಿಸಬಹುದೆಂದು ನಾನು ಭಾವಿಸಿದ್ದೇನೆ’’ ಎಂದು ಹೇಳಿದರು.

 

ಮುಂಬೈನ ಮತ್ತೋರ್ವ ವಿತರಣಾ ಪ್ರತಿನಿಧಿ ಸಂಜಯ್ ಅನ್ನದಾತೆ ಅವರು ಮಾತನಾಡಿ, ``ನಮಗೆ ಮತ್ತು ನಮ್ಮ ಮಕ್ಕಳಿಗೆ ಸ್ವಿಗ್ಗಿ ಸಹಾಯ ಮಾಡುತ್ತಿರುವುದಕ್ಕೆ ನಮಗೆ ಅತ್ಯಂತ ಸಂತಸವಾಗುತ್ತಿದೆ. ಸಾಮಾನ್ಯವಾಗಿ ಪಾಲುದಾರರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಆದರೆ, ನಮ್ಮ ಮಕ್ಕಳನ್ನೂ ಈ ಕೋರ್ಸ್ ನಲ್ಲಿ ಅಡಕ ಮಾಡಿರುವುದು ಸಂತಸವಾಗಿದೆ. ನಮ್ಮ ಮಕ್ಕಳು ಶಾಲೆಯಿಂದ ಮನೆಗೆ ಮರಳಿದ ನಂತರ ಇಂಗ್ಲೀಷ್ ಅಥವಾ ಗಣಿತವನ್ನು ಈ ಕಾರ್ಯಕ್ರಮದ ಮೂಲಕ ಕಲಿಯಬಹುದಾಗಿದೆ’’ ಎಂದರು.

ಕಳೆದ ಏಪ್ರಿಲ್ ನಲ್ಲಿ ಸ್ವಿಗ್ಗಿ `ಸ್ಟೆಪ್ –ಅಹೆಡ್’ ಎಂಬ ಹೊಸ ಕಾರ್ಯಕ್ರಮವನ್ನು ಪರಿಚಯಿಸಿತ್ತು. ಇದು ಉದ್ಯಮದ ಮೊದಲ ವೇಗವರ್ಧಿತ ಕಾರ್ಯಕ್ರಮವಾಗಿದ್ದು, ನಿಗದಿತ ವೇತನ ಮತ್ತು ಹೆಚ್ಚುವರಿ ಪ್ರಯೋಜನಗಳೊಂದಿಗೆ ಪೂರ್ಣ ಸಮಯ, ವ್ಯವಸ್ಥಾಪಕ-ಮಟ್ಟದ ಉದ್ಯೋಗಿಗಳಾಗಿ ಪರಿವರ್ತನೆಗೊಳ್ಳಲು ಅದರ ವಿತರಣಾ ಪ್ರತಿನಿಧಿಗಳಿಗೆ ಸಹಕಾರಿಯಾಗುತ್ತಿದೆ. `ಸ್ವಿಗ್ಗಿ ಸ್ಕಿಲ್ಸ್’ ಅಕಾಡೆಮಿಯೊಂದಿಗೆ ಸ್ವಿಗ್ಗಿ ಮತ್ತು ಅದರಾಚೆಗಿನ ವಿತರಣಾ ಪ್ರತಿನಿಧಿಗಳ ಬೆಳವಣಿಗೆಯನ್ನು ಸಕ್ರಿಯಗೊಳಿಸುವ ಕೌಶಲ್ಯಗಳನ್ನು ನಿರ್ಮಾಣ ಮಾಡಲು ಹಾಗೂ ಗೌರವಿಸಲು ಎಲ್ಲಾ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಸ್ವಿಗ್ಗಿ ಗಮನಹರಿಸಿದೆ.


Tags

Post a Comment

0Comments

Post a Comment (0)