ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಪುನರ್‍ರಚನೆ

varthajala
0

ಬೆಂಗಳೂರು ಜನವರಿ 03, (ಕರ್ನಾಟಕ ವಾರ್ತೆ) : ಗುಲ್ಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕರಾದ ಡಾ.ಸುರೇಶ್‍ಜಂಗೆ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್ ರಚಿಸಿದ್ದು, ವಿಭಾಗವಾರು ಮತ್ತು ಭಾಷಾವಾರು ಸದಸ್ಯರುಗಳನ್ನು ನೇಮಿಸಿ ಆದೇಶಿಸಿರುವಂತೆ ಬೆಂಗಳೂರು ಕಂದಾಯ ವಿಭಾಗದಿಂದ ಡಾ.ಚಂದ್ರಶೇಖರ್, ಮೈಸೂರು ಕಂದಾಯ ವಿಭಾಗದಿಂದ ಡಾ.ಆನಂದ್ ಕರ್ಲಾ, ಬೆಳಗಾವಿ ಕಂದಾಯ ವಿಭಾಗದಿಂದ ಡಾ.ಗುರುರಾಜ್ ಎಸ್. ಹಡಗಲಿ, ಕಲಬುರಗಿ ಕಂದಾಯ ವಿಭಾಗದಿಂದ ಡಾ.ಸಂಗಮೇಶ್ ಎಸ್. ಹಿರೇಮಠ, ಬೆಂಗಳೂರು ನಗರದಿಂದ ಶ್ರೀಕಾಂತ್ ಪಿ.ಎಸ್. ಮಹಿಳಾ ವಿಭಾಗದಿಂದ ಶ್ರೀಮತಿ ನಿವೇದಿತಾ, ಡಾ.ಸುಮಾ ಎಸ್. ನಿರ್ಣಿ, ವಿಜ್ಞಾನ ಕ್ಷೇತ್ರದಿಂದ ಡಾ. ಚಂದ್ರಕಾಂತ ಕೆಳಮನಿ, ಮಾನವಿಕ ಶಾಸ್ತ್ರದ ಕ್ಷೇತ್ರದಿಂದ ಮಾರುತಿ ಕಟ್ಟಿಮನಿ, ಮಕ್ಕಳ ಸಾಹಿತ್ಯ ಕ್ಷೇತ್ರದಿಂದ ಜಂಬುನಾಥ ಶರಣಪ್ಪ ಕಂಚ್ಚಾಣಿ, ಗ್ರಂಥಾಲಯ ವಿಜ್ಞಾನ ಕ್ಷೇತ್ರದಿಂದ ಡಾ. ವಿನಾಯಕ ಎಂ. ಬಂಕಾಪೂರ ಪ್ರಸಾರಾಂಗದಿಂದ ಪ್ರೊ.ಸಿದ್ಧಪ್ಪ, ರಾಜ್ಯ ಗ್ರಂಥಾಲಯ ಪ್ರಾಧಿಕಾರದಿಂದ ಡಾ. ಎ.ವೈ.ಅಸುಂಡಿ, ತೆಲುಗು ಭಾಷಾ ಪರಿಣಿತರಾದ ಶ್ರೀಮತಿ ಝಾನ್ಸಿ ಪಾಪುದೇಸಿ, ಹಿಂದಿ ಪರಿಣಿತರಾದ ಶ್ರೀಮತಿ ರಿತು ಹಾಗೂ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಅಧ್ಯಕ್ಷರು, ಕರ್ನಾಟಕ ಪ್ರಕಾಶಕರ ಸಂಘ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಅಧ್ಯಕ್ಷರು, ಕರ್ನಾಟಕ ವಿಜ್ಞಾನ ಪರಿಷತ್ತು, ಅಧ್ಯಕ್ಷರು, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿ ಡಾ. ಸತೀಶಕುಮಾರ ಎಸ್. ಹೊಸಮನಿ, ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರನ್ನು ನೇಮಿಸಿ ಸರ್ಕಾರವು ಆದೇಶ ಹೊರಡಿಸಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಎಸ್ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0Comments

Post a Comment (0)