BIG NEWS : ಕ ಸಾ ಪ ಪ್ರಗತಿಪರ ರೈತರಿಗಾಗಿ ಮೀಸಲಿದ್ದ ʻಶ್ರೀಮತಿ ಲಿಂಗಮ್ಮ - ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಪ್ರಕಟ

varthajala
0

 

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಪ್ರಗತಿಪರ ರೈತರಿಗೆ ನೀಡುವ ʻಶ್ರೀಮತಿ ಲಿಂಗಮ್ಮ ಮತ್ತು ಡಾಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಪ್ರಕಟಿಸಿದೆ೨೦೨೨ನೆಯ ಸಾಲಿನ ಪ್ರಸ್ತುತ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಕೆ.ಆರ್‌,ಪೇಟೆಯ ಪ್ರಗತಿಪರ ಕೃಷಿಕ  ಶ್ರೀ ಕೆಎಸ್‌ ಸೋಮಶೇಖರ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಿರಿಯ ಸಮಾಜ ಸೇವಕರಾದ  ಡಾಚಿಕ್ಕಕೊಮಾರಿಗೌಡ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ದತ್ತಿನಿಧಿ ಸ್ಥಾಪಿಸಿದ್ದಾರೆ.  ಉತ್ತಮ ಸಾಧನೆಮಾಡಿದ ಪ್ರಗತಿಪರ ರೈತರಿಗೆಕರ್ನಟಕ ಪಂಚಾಯತ್‌ ರಾಜ್‌ ಪರಿಷತ್ತಿನಲ್ಲಿ ಪಂಚಾಯತ್‌ ರಾಜ್ಯ ವ್ಯವಸ್ಥೆ ಬಗ್ಗೆ ಉತ್ತಮ ಕೆಲಸ ಮಾಡಿರುವ ಸಂಸ್ಥೆಗಳಿಗೆಉತ್ತಮ ಜನಪ್ರತಿನಿಧಿಗಳಿಗೆ ಮತ್ತು ತಜ್ಞರುಗಳನ್ನು ಗುರುತಿಸಿ ವರ್ಷಕ್ಕೊಬ್ಬರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ೧೦,೦೦೦ಹತ್ತು ಸಾವಿರ)ರೂನಗದು, ಸ್ಮರಣಿಕೆಹಾರ ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಗುತ್ತದೆ.

ಶ್ರೀಮತಿ ಲಿಂಗಮ್ಮ ಮತ್ತು ಡಾಚಿಕ್ಕಕೊಮಾರಿಗೌಡ ಹಾರೋಕೊಪ್ಪʼ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾಮಹೇಶ ಜೋಶಿ ಮಾತನಾಡಿ ಪರಿಷತ್ತು ಸಾಕರಿಗೆ ಹುಡುಕಿಕೊಂಡು ಹೋಗಿ ಪ್ರಶಸ್ತಿ ನೀಡುತ್ತದೆನಮ್ಮ ನಾಡು ಋಷಿ ಸಂಸ್ಕೃತಿಯನ್ನು ಹೊಂದಿದೆ. ಈ ಸಂಸ್ಕೃತಿ ನಿಂತಿದ್ದೇ ಕೃಷಿ ಸಂಸ್ಕೃತಿಯ ಆಧಾರದ ಮೇಲೆ ಆದ್ದರಿಂದ ರೈತರು ದೇವರಿಗೆ ಸರಿಸಮನಾರು. ಈ ಮಾತನ್ನು ಗುರು ಗೋವಿಂದಭಟ್ಟರುಶಿಶುನಾಳ ಶರೀಫರು ಪುಷ್ಟೀಕರಿಸಿದ್ದರುಈ ಹಿನ್ನೆಲೆಯಲ್ಲಿ ಪ್ರಗತಿಪರ ರೈತರಿಗೆ ಕೊಡುವ ಈ ಪ್ರಶಸ್ತಿಯು ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಪ್ರಶಸ್ತಿಗಳ ಪೈಕಿ ಇದು ಒಂದಾಗಿದೆ ಎಂದು ಹೇಳಿದ್ದಾರೆ.

     ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿ ದಾನಿಗಳಾದ ಡಾಚಿಕ್ಕಕೊಮಾರಿಗೌಡಶ್ರೀ ಸಿಕೆರಾಮೇಗೌಡಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀನೇರಾಮಲಿಂಗ ಶೆಟ್ಟಿ,  ಡಾಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾಬಿ.ಎಂ.ಪಟೇಲ್‌ ಪಾಂಡು ಅವರು ಉಪಸ್ಥಿತರಿದ್ದರು.


Post a Comment

0Comments

Post a Comment (0)