ದೇಗುಲಮಠದಲ್ಲಿ ಉಚಿತ ಶಾಲಾ ಪ್ರವೇಶಾತಿ ಪ್ರಾರಂಭ

varthajala
0

ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರದಲ್ಲಿರುವ ಶ್ರೀ ದೇಗುಲಮಠದಲ್ಲಿ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆ ಹಾಗೂ ವಿದ್ಯಾರ್ಥಿನಿಲಯಕ್ಕೆ ಉಚಿತ ಪ್ರವೇಶ ಪ್ರಕ್ರಿಯ ಪ್ರಾರಂಭವಾಗಿದ್ದು 1ನೇ ತರಗತಿಯಿಂದ 10 ನೇ ತರಗತಿಯವರೆಗೆ ಬಡ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕನ್ನಡ ಮತ್ತು ಇಂಗ್ಲೀಷ್‌ ಮಾಧ್ಯಮಗಳಲ್ಲಿ ಉಚಿತವಾಗಿ ಊಟ, ವಸತಿ, ಶಿಕ್ಷಣಗಳನ್ನು ನೀಡುತ್ತಿದೆ. ಇದರ ಜೊತೆಗೆ ಆಸಕ್ತರಿಗೆ ಸಂಸ್ಕೃತ ಶಿಕ್ಷಣವನ್ನು ನೀಡುತ್ತಿದೆ.  



ಶ್ರೀ ದೇಗುಲಮಠವು ಸುಮಾರು 660 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ದಾಸೋಹ, ಶಿಕ್ಷಣ ಮತ್ತು ವಸತಿ ವ್ಯವಸ್ಥೆಯನ್ನು ಅನೇಕ ದಶಕಗಳಿಂದ ಕಲ್ಪಿಸಿಕೊಂಡು ಬರುತ್ತಿದೆ. ಕನ್ನಡ ಮಾಧ್ಯಮ: 9663689989, 9902607206, 9538469196, ಇಂಗ್ಲೀಷ್‌ ಮಾಧ್ಯಮ: 7204648369, 8531954473  ನೋಂದಾಯಿಸಿಕೊಳ್ಳಲು ಕೋರಲಾಗಿದೆ. 

ಮಹದೇವಸ್ವಾಮಿ ಬಿ, ನಿರ್ದೇಶಕರು, ಸಾಮಾನ್ಯ ಶಿಕ್ಷಣ  ವಿಭಾಗ, ಶ್ರೀ ನಿರ್ವಾಣಸ್ವಾಮಿ ಕೃಪಾ ವಿದ್ಯಾಪೀಠ, ಶ್ರೀ ದೇಗುಲಮಠ, ಕನಕಪುರ ಮೊಬೈಲ್‌ ಸಂಖ್ಯೆ:9900306086


Post a Comment

0Comments

Post a Comment (0)