ಸರ್ಕಾರಿ ಶಾಲೆಗೆ ಸಮಯಕ್ಕೆ ಬಾರದ ಶಿಕ್ಷಕ : ಪೋಷಕರ ಆಕ್ರೋಶ

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ಶಿಡ್ಲಘಟ್ಟ :ಸರ್ಕಾರಿ ಶಾಲೆಗೆ ಶಿಕ್ಷಕ ಮುನಿನಾರಾಯಣಪ್ಪ ಪ್ರತಿ ದಿನ ತಡವಾಗಿ ಬರುತ್ತಾರೆ ಅವದಿಗಿಂತ ಮುಂಚಿತವಾಗಿ ಹೋಗುತ್ತಾರೆ ಮಕ್ಕಳಿಗೆ ಸರಿಯಾಗಿ ಪಾಠ ಪ್ರವಚನ ಮಾಡುವುದಿಲ್ಲ ಎಂದು ಎಸ್.ಡಿಎಂಸಿ ಅಧ್ಯಕ್ಷ ರವಿಕುಮಾರ್ ಸಿ ಆರೋಪಿಸಿದ್ದಾರೆ.

ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಅಜ್ಜಕದಿರೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಯಾಗಿದೆ.

ಶಾಲೆಯ ಮುಖ್ಯಶಿಕ್ಷಕರಾದವರು ಪ್ರತಿದಿನ ಬೆಳಗ್ಗೆ 11 ಗಂಟೆಗೆ ಬಂದು ಮಧ್ಯಾಹ್ನ 3:30  ಗಂಟೆಗೆ  ಹೊರಡುತ್ತಾರೆ, ಯಾರಾದರೂ ಕೇಳಿದರೆ ನನಗೆ ಮೀಟಿಂಗ್, ಅಲ್ಲಿಗೆ ಹೋಗಿದ್ದೆ ಎಂದು ಸಬೂಬು ನೀಡುತ್ತಾರೆ ಎಂದು ತಿಳಿಸಿದರು.

ಇನ್ನು ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಅವರಲ್ಲಿ ಒಬ್ಬರನ್ನು ಹೆಚ್ಚುವರಿ ಶಿಕ್ಷಕರಾಗಿ ಮೇಡಂ ಅವರನ್ನು ಬೇರೆ ಶಾಲೆಗೆ ವರ್ಗಾಯಿಸಿದ್ದಾರೆ ಅವರನ್ನು ಇಲ್ಲೇ ಇರಿಸಿ ಮುನಿನಾರಾಯಣಪ್ಪ ಸರ್ ಅವರನ್ನು ಬೇರೆ ಶಾಲೆಗೆ ಕಳಿಸಿಕೊಡಿ, ಮೇಡಂ ಅವರು ಬರಲ್ಲ ಅಂದ್ರೆ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬೇರೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಕಳುಹಿಸುತ್ತೇವೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪೋಷಕರಾದ ಮುನಿಶಾಮಿ,ನಾರಾಯಣಸ್ವಾಮಿ,ಮೂರ್ತಿ,ಚಂದ್ರ ಮತ್ತಿತರರು ಇದ್ದರು.

Post a Comment

0Comments

Post a Comment (0)