ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಾರಂಜಿ ಸೂಕ್ತ ವೇದಿಕೆ

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ, ಶಿಡ್ಲಘಟ್ಟ : ಮಕ್ಕಳು ಯಾವುದೇ ಆತಂಕಕ್ಕೆ ಒಳಗಾಗದೆ ತಮ್ಮ ತಮ್ಮ ಕೌಶಲ್ಯವನ್ನು ಪ್ರದರ್ಶಿಸಬೇಕು. ಸ್ಪರ್ಧೆಗಳಲ್ಲಿ ಸೋಲು ಗೆಲುವು ಸಾಮಾನ್ಯ ಸೋತವರು ನಿರುತ್ಸಾಹ ಪಡುವುದು ಬೇಡ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತ್ಯಾಗರಾಜು ತಿಳಿಸಿದರು.

೨೦೨೩-೨೪ನೇ ಸಾಲಿನ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವರದನಾಯಕನಹಳ್ಳಿಯ ಯುನಿವರ್ಸಲ್ ಪಬ್ಲಿಕ್ ಶಾಲೆಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.



ಸೋಲೇ ಗೆಲುವಿನ ಮೆಟ್ಟಿಲು ಎಂಬ ಗಾದೆಯಂತೆ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಆರೋಗ್ಯಕರ ಸ್ಥಿತಿಯನ್ನು ಹೊಂದಬೇಕು ಎಂದು ಮಕ್ಕಳಿಗೆ ಶುಭಾಶಯಗಳನ್ನು ಕೋರಿದರು.

ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ಯಾವುದೇ ಅನುದಾನವಿಲ್ಲ. ಎಲ್ಲಾ ಶಾಲೆಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ನಾವು ಮಾಡುತ್ತಿದ್ದೇವೆ ಮಕ್ಕಳು ಪಠ್ಯ ಪುಸ್ತಕದ ಜೊತೆ ಪ್ರಬಂಧ, ಕಥೆ ಹೇಳುವುದು, ಛದ್ಮವೇಷ, ನಾಟಕ, ಚಿತ್ರಕಲೆ, ಕ್ಲೆ ಮಾಡ್ಲಿಂಗ್,  ಜನಪದ ಗೀತೆ, ಭಾವಗೀತೆ, ಭಕ್ತಿಗೀತೆಗಳನ್ನು ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.

ಮಕ್ಕಳಲ್ಲಿ ಅಡಿಗಿರುವ ಸುಪ್ತ ಜ್ಞಾನವನ್ನು ಹೊರೆಗೆ ತರಲು ಕಾರಂಜಿಯಂತಹ ವೇದಿಕೆಗಳು ಸೂಕ್ತವಾಗಿದೆ.

ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿಸಲು ಪ್ರತಿಭಾ ಕಾರಂಜಿಗಳು ಹಾಗೂ ಉತ್ತಮ ವೇದಿಕೆ ಕಲ್ಪಿಸಿದಾಗ ಮಾತ್ರ ಪ್ರತಿಭೆ ಹೊರಬರಲು ಸಾಧ್ಯ. ಪಠ್ಯದ ಜೊತೆ ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ವಿಸ್ಡಂ ನಾಗರಾಜ್ ತಿಳಿಸಿದರು. 

 ಈ ಸಂದರ್ಭದಲ್ಲಿ ಯುನಿವರ್ಸಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶಾಂತರಾಜು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಸತೀಶ್, ಇ.ಸಿ.ಓ.ಪರಿಮಳ, ಬಿ.ಆರ್.ಪಿ.ಕುಂದಲಗುರ್ಕಿ ಮಂಜುನಾಥ್,ಸಿ.ಆರ್.ಪಿ.ಗಳಾದ ಪ್ರಭಾಕರ್, ರಮೇಶ್,ವಾಸವಿ ಶಾಲೆಯ ಮುಖ್ಯೋಪಾಧ್ಯಾಯ ಶಿವಕುಮಾರ್, ಸಿಟಿಜೆನ್ ಶಾಲೆಯ ಸತೀಶ್, ಶ್ರೀ ಸರಸ್ವತಿ ಶಾಲೆಯ ನಾರಾಯಣ ಕುಲಕರ್ಣಿ, ಶಿಕ್ಷಕರಾದ ಮಾಲಾ, ಸಾದಿಕ್, ನೇತ್ರಾವತಿ, ಇನ್ನೂ ಮುಂತಾದವರು ಹಾಜರಿದ್ದರು.

Post a Comment

0Comments

Post a Comment (0)