ವಿಕಲಚೇತನರಿಗೆ 284 ಕೋಟಿ ಮೀಸಲು: ಮುಖ್ಯಮಂತ್ರಿ ಸಿದ್ದರಾಮಯ್ಯ

varthajala
0

 ವರ್ಷದ ಬಜೆಟ್ನಲ್ಲಿ  ವಿಕಲಚೇತನರ ಕಲ್ಯಾಣಕ್ಕಾಗಿ 284 ಕೋಟಿ ರೂಗಳನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ  ಸಬಲೀಕರಣ ಇಲಾಖೆ ಹಮ್ಮಿಕೊಂಡಿದ್ದ “ವಿಶ್ವ ವಿಕಲಚೇತನರ ದಿನಾಚರಣೆ-2023” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ವಿಲಚೇತನರಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. 2011 ಜನಗಣತಿ   ಪ್ರಕಾರ ನಮ್ಮ ರಾಜ್ಯದಲ್ಲಿ  13,24,205 ವಿಕಲಚೇತನರಿದ್ದಾರೆವಿಕಲಚೇತನರು ಭಾರವೆಂದು ನಾವು ಭಾವಿಸಬಾರದುಅವರಿಗೆ ಶಿಕ್ಷಣಉದ್ಯೋಗ ಹಾಗೂ ಇತರ ಹಕ್ಕುಗಳನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ವಿಕಲಚೇತನರಿಗೆ ಶೇ.5 ರಷ್ಟು ಮೀಸಲಾತಿಯನ್ನು ನೀಡಲು ಸರ್ಕಾರದ ಆದೇಶವಿದೆಕಳೆದ ತಿಂಗಳ ಜನಸ್ಪಂದನದಲ್ಲಿ ವಿಕಲಚೇತನರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ  ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿಕಲಚೇತನರಿಗೆ 4000 ಯಂತ್ರಚಾಲಿತ  ತ್ರಿಚಕ್ರವಾಹನವನ್ನು  40ಕೋಟಿ ಅನುದಾನದಲ್ಲಿ ನೀಡಲಾಗಿದೆಅಂಧ ವಿದ್ಯಾರ್ಥಿಗಳಿಗೆ  40 ಲ್ಯಾಪ ಟಾಪ್  ವಿತರಿಸಲಾಗಿದೆ.  ಉನ್ನತ ಶಿಕ್ಷಣದ ಶಿಕ್ಷಣ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದರು.

 ವರ್ಷ 10 ಬುದ್ದಿಮಾಂದ್ಯ ಶಾಲೆಗಳನ್ನು 7 ಜಿಲ್ಲೆಗಳಲ್ಲಿ ತಲಾ 2 ಕೋಟಿಗಳಲ್ಲಿ ಸ್ಥಾಪಿಸಲು ಆಯವ್ಯಯದಲ್ಲಿ  ಘೋಷಿಸಲಾಗಿದೆಕ್ರೀಡೆಗಳಲ್ಲಿ ಸಹ ವಿಕಲಚೇತನರು ಒಳ್ಳೆಯ  ಸಾಧನೆ ಮಾಡಿ ಪ್ರಶಸ್ತಿ ಗಳಿಸಿದ್ದಾರೆಇವರಿಗೆ ಶಿಕ್ಷಣಪುನರ್ವಸತಿವೈದ್ಯಕೀಯ ಸೌಲಭ್ಯ ಕಲ್ಪಿಸಲು ನಾವು ಬದ್ಧ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ  ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ದೈಹಿಕವಾಗಿ ಅಶಕ್ತರಾದರೂ ವಿಕಲಚೇತನರು ಮಾನಸಿಕವಾಗಿ ಸದೃಢರುಇವರಿಗೆ ಸರ್ಕಾರ ಬಜೆಟ್ ನಲ್ಲಿ 284 ಕೋಟಿ ಮೀಸಲಿಟ್ಟಿದೆಅಲ್ಲದೆ ಹಲವು ಯೋಜನೆಗಳನ್ನು ನೀಡುತ್ತಿದೆ  ಎಂದರು.


ಇದೇ ಸಂದರ್ಭದಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ದುಡೆಯುತ್ತಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ವಿಕಲಚೇತನರ ಯೋಜನೆಗಳ ಕೈಪಿಡಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿಕರ್ನಾಟಕ ಬೌದ್ಧಿಕ ವಿಕಲಚೇತನ ಮಕ್ಕಳ ಪಾಲಕರ ಸಂಸ್ಥೆಯ ಮಾಜಿ ಕಾರ್ಯದರ್ಶಿಗಳಾದ  ಗಡ್ಕರಿ.ಜೆ.ಪಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ  ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಜಿ.ಸಿಪ್ರಕಾಶ್ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ  ಎನ್ಸಿದ್ದೇಶ್ವರ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)