ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ವಿಜ್ಞಾನ ಉತ್ಸವ 'ಅವಿಷ್ಕಾರ್' ಆಯೋಜನೆ*

varthajala
0

L

ಶಾಲಾ ಹಂ


ತದಿಂದಲೇ ಮಕ್ಕಳನ್ನು ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸಿ, ಆ ನಿಟ್ಟಿನಲ್ಲಿ  ಪ್ರೇರೇಪಿಸುವ ಮೂಲಕ, ದೇಶ ಹಾಗೂ ಮನುಕುಲದ ಉತ್ತಮ ಭವಿಷ್ಯಕ್ಕಾಗಿ ವಿಜ್ಞಾನದ ಮೂಲಕ ಮತ್ತಷ್ಟು ಕೊಡುಗೆ ನೀಡಲು ಅವರನ್ನು ಪ್ರೇರೇಪಿಸಬೇಕೆಂಬ ದೂರದೃಷ್ಟಿಯ ಚಿಂತನೆಯ ಭಾಗವಾಗಿ, ಮತ್ತಿಕೆರೆಯ ವಿದ್ಯಾ ವೈಭವ್ ಹಿಪೊಕ್ಯಾಂಪಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ‘ಅವಿಷ್ಕರ್’ ವಿಜ್ಞಾನ ಉತ್ಸವ ಆಯೋಜಿಸಲಾಗಿತ್ತು.

    ಇದು ಎಲ್ಲಾ ಮಕ್ಕಳು ಮತ್ತು ಪೋಷಕರಿಗೆ ಒಂದು ಮೋಜಿನ ಓಪನ್-ಹೌಸ್ ಕಾರ್ಯಕ್ರಮವಾಗಿತ್ತು. ವಿದ್ಯಾರ್ಥಿಗಳಿಂದ ಪ್ರಸ್ತುತಿ, ಸಂವಾದಾತ್ಮಕ ಸಂಗೀತ ಕಛೇರಿ, ಚಾರಿಟಿ ಡ್ರೈವ್ ಮತ್ತು ಪುಸ್ತಕ ಪ್ರದರ್ಶನ ಇತ್ಯಾದಿಗಳಿಗೆ ವೇದಿಕೆಯನ್ನು ಒದಗಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಪ್ರೋತ್ಸಾಹಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದಲೇ ಇಡೀ ದಿನ ಕಾರ್ಯಾಗಾರವನ್ನು ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, 6 ನೇ ತರಗತಿಯ ವಿದ್ಯಾರ್ಥಿಗಳು 'ಪಿನ್ ಹೋಲ್ ಕ್ಯಾಮೆರಾ' ಕಾರ್ಯವಿಧಾನವನ್ನು ಪ್ರದರ್ಶಿಸಿದರು, ಪ್ರಾಧ್ಯಾಪಕ ಡಾ. ಜಿ.ಆರ್. ಜಯಂತ್ ಅವರ ಉಪಸ್ಥಿತಿಯಲ್ಲಿ  ಕರ್ನಾಟಕ ಸಂಗೀತ ವಿದ್ವಾನ್ ಶ್ರೀಮತಿ ಮಾನಸ ನಯನ, ಅಧ್ಯಕ್ಷ ಕಿರಣ್, ಟ್ರಸ್ಟಿ ಶ್ರೀಮತಿ ಶುಭಾ, ಪ್ರಾಂಶುಪಾಲೆ ಶ್ರೀಮತಿ ಅಣ್ಣಾಮೇರಿ ಮತ್ತು ಶಿಕ್ಷಕರೊಂದಿಗೆ ಪೋಷಕರು ಸಹ ಉಪಸ್ಥಿತರಿದ್ದರು.

Post a Comment

0Comments

Post a Comment (0)